ಇಂಫಾಲದ ಮೊರೆ ಪಟ್ಟಣದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿದೆ ಎಂದು ಲೇಖನ ಬರೆದಿದ್ದ ಮಣಿಪುರದ ಸ್ಥಳೀಯ ಪತ್ರಿಕೆಯ ಸಂಪಾದಕರೊಬ್ಬರನ್ನು ಬಂಧಿಸಲಾಗಿದೆ.
ಸ್ಥಳೀಯ ದಿನಪತ್ರಿಕೆಯ ಸಂಪಾದಕರಾದ ಧನಬೀರ್ ಮೈಬಮ್ ಅವರು ಮೊರೆ ಪಟ್ಟಣದಲ್ಲಿ ಹರಿಯ ಪೊಲೀಸರ ಹತ್ಯೆ ಮತ್ತು ಪೊಲೀಸರು ಹಾಗೂ ಕೇಂದ್ರೀಯ ಪಡೆಗಳ ಮೇಲೆ ದಾಳಿ ನಡೆದಿದ್ದವು ಎಂದು ಲೇಖನ ಬರೆದಿದ್ದರು. ವಿವಿಧ ಕೋಮುಗಳ ಮಧ್ಯೆ ಸಾಮರಸ್ಯ ಹಾಳುಮಾಡುತ್ತಿರುವ ಪ್ರಕರಣದಲ್ಲಿ ಬಂಧಿಸಲಾಗಿದೆ.
ಧನಬೀರ್ ಮೈಬಮ್ ಅವರನ್ನು ಮ್ಯಾಜಿಸ್ಟ್ರೇಟ್ ಅವರಿಗೆ ಹಾಜರು ಪಡಿಸಿದ್ದು, ನಂತರ ಅವರನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ವಹಿಸಲಾಗಿದೆ. ವಿವಿಧ ಧರ್ಮ ಹಾಗೂ ಕೋಮುಗಳ ನಡುವೆ ದ್ವೇಷ ಬಿತ್ತುವ ಆರೋಪವನ್ನು ಹೊರಿಸಲಾಗಿದೆ.
ಕಳೆದ ಏಳು ದಿನಗಳಲ್ಲಿ ಧನಬೀರ್ ಮೈಬಮ್ ಅವರು ಪೊಲೀಸರಿಂದ ಬಂಧನಕ್ಕೊಳಗಾದ ಎರಡನೇ ಸಂಪಾದಕರಾಗಿದ್ದಾರೆ. ಪೊಲೀಸರ ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿರುವ ನಡೆಯ ವಿರುದ್ಧ ನಾಗರಿಕ ಸಮಾಜದಿಂದ ಆಕ್ರೋಶ ವ್ಯಕ್ತವಾಗಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಶಾಲಾ ಸಿಬ್ಬಂದಿಗೆ ‘ನಡತೆ ಸರ್ಟಿಫಿಕೇಟ್ʼ ಮಕ್ಕಳೇ ಕೊಡುವಂತಾಗಬೇಕು
ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯು ಭಯ ಹಾಗೂ ಆತಂಕವನ್ನು ಉಂಟುಮಾಡುತ್ತದೆ ಎಂದು ಪೊಲೀಸರು ತಮ್ಮ ದೂರಿನಲ್ಲಿ ತಿಳಿಸಿದ್ದರು. ಪತ್ರಕರ್ತರನ್ನು ಬಂಧಿಸಿ ನ್ಯಾಯಾಲಯದ ವಿಚಾರಣೆಯ ನಂತರ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ಇಂಫಾಲದ ಎಸ್ ತಿಳಿಸಿದ್ದಾರೆ.
ಧನಬೀರ್ ಮೈಬಮ್ ಅವರನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಕ್ರಿಮಿನಲ್ ಪಿತೂರಿ ಹಾಗೂ ಅಧಿಕೃತ ಗೋಪ್ಯತೆ ಕಾಯ್ದೆ, 1923ನ ವಿವಿಧ ಪರಿಚ್ಛೇದಗಳನ್ನು ಉಲ್ಲಂಘಿಸಿದ ಆರೋಪ ಹೊರಿಸಲಾಗಿದೆ.
ಇದಕ್ಕೂ ಮುನ್ನ, ಅಕ್ಟೋಬರ್ 31ರಿಂದೀಚೆಗೆ ಮಯನ್ಮಾರ್ ಗಡಿಗೆ ಹೊಂದಿಕೊಂಡಿರುವ ಮೊರೆ ಪಟ್ಟಣದಲ್ಲಿ ಸಶಸ್ತ್ರ ಗುಂಪುಗಳು ನಡೆಸಿದ ದಾಳಿಯಲ್ಲಿ ಓರ್ವ ಸಿಡಿಪಿಒ ಅಧಿಕಾರಿ ಮೃತಪಟ್ಟು, ಒಂಬತ್ತು ಕಮಾಂಡೊಗಳು ಗಾಯಗೊಂಡ ಘಟನೆಯ ಕುರಿತು ಹ್ಯೂಯೆನ್ ಲ್ಯಾನ್ ಪಾವೊ ಪತ್ರಿಕೆಯಲ್ಲಿ ಲೇಖನವೊಂದು ಪ್ರಕಟವಾಗಿತ್ತು.