ಇತ್ತೀಚಿಗಷ್ಟೆ ಮಣಿಪುರ ರಾಜ್ಯದಲ್ಲಿ ಇಬ್ಬರು ಮಹಿಳೆಯರ ಸಾಮೂಹಿಕ ಅತ್ಯಾಚಾರ, ಕೊಲೆ, ಬೆತ್ತಲೆ ಮೆರವಣಿಗೆ ಮಾಡಿದ ಆಘಾತಕಾರಿ ಘಟನೆ ಹೊರ ಬಿದ್ದ ನಂತರ ಸ್ವಾತಂತ್ರ್ಯ ಹೋರಾಟಗಾರರ ಪತ್ನಿಯನ್ನು ಮನೆಯಲ್ಲಿ ಕೂಡಿ ಹಾಕಿ ಜೀವಂತವಾಗಿ ಸುಟ್ಟು ಹಾಕಿದ ಕೃತ್ಯ ಬೆಳಕಿಗೆ ಬಂದಿದೆ.
ಮೇ 28 ರಂದು ಕಾಕ್ಚಿಂಗ್ ಜಿಲ್ಲೆಯ ಸೆರೋ ಗ್ರಾಮಕ್ಕೆ ನುಗ್ಗಿದ್ದ ಶಸ್ತ್ರಸಜ್ಜಿತ ಗಲಭೆಕೋರರ ಗುಂಪು ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಎಸ್ ಚುರಚಂದ್ ಸಿಂಗ್ ಅವರ ಪತ್ನಿ ಇಬೆತೋಬಿ (80) ಅವರನ್ನು ಮನೆಯಲ್ಲಿ ಕೂಡಿ ಹಾಕಿ ಬೆಂಕಿ ಹಚ್ಚಿತ್ತು. ನೆರವಿಗೆ ಅಂಗಲಾಚಿದರೂ ವೃದ್ಧೆಯ ಮಾತುಗಳು ಅಗ್ನಿಯ ಜಾಲ್ವೆಯಲ್ಲಿ ಯಾರಿಗೂ ಕೇಳಲಿಲ್ಲ. ಕೊನೆಗೆ ವಯಸ್ಸಾದ ವೃದ್ಧೆ ಬೆಂಕಿಯಲ್ಲೇ ಬೆಂದು ಹೋದರು.
ಮಹಿಳೆಯರ ಪತಿ ಎಸ್ ಚುರಾಚಂದ್ ಸಿಂಗ್ ಅವರು ತಮ್ಮ 80ನೇ ವಯಸ್ಸಿನಲ್ಲಿ ಕೆಲ ವರ್ಷಗಳ ಹಿಂದೆ ಸಾವನ್ನಪ್ಪಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಅವರನ್ನು ಮಾಜಿ ರಾಷ್ಟ್ರಪತಿ ದಿವಂಗತ ಎ ಪಿ ಜೆ ಅಬ್ದುಲ್ ಕಲಾಂ ಅವರು ಕೂಡ ಗೌರವಿಸಿದ್ದರು. ಇವರನ್ನು ರಕ್ಷಿಸಲು ಕುಟುಂಬದವರು ಆಗಮಿಸುವಷ್ಟರಲ್ಲಿ ಮನೆ ಸಂಪೂರ್ಣ ಸುಟ್ಟು ಕರುಕಲಾಗಿತ್ತು ಎಂದು ಇವರ ಮೊಮ್ಮಗ ಪ್ರೇಮಕಾಂತ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಟ್ವಿಟರ್ ಹಕ್ಕಿಗೆ ಶೀಘ್ರ ಗುಡ್‌ಬೈ; ಚೀನಾ ಆ್ಯಪ್ ಸ್ವರೂಪ ನೀಡಲು ಮುಂದಾದ ಮಸ್ಕ್
ಸದ್ಯ ವೃದ್ಧೆಯ ಮೊಮ್ಮಗ ಪ್ರೇಮಕಾಂತ್ ಶಾಸಕರೊಬ್ಬರ ಸ್ಥಳದಲ್ಲಿ ಆಶ್ರಯ ಪಡೆದಿದ್ದಾರೆ. ಮಣಿಪುರದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದ್ದು ಹಿಂಸಾಚಾರದ ಘಟನೆಗಳು ಮುಂದುವರಿದಿರುವುದರಿಂದ ಅನೇಕರು ತಮ್ಮ ಸ್ವಗ್ರಾಮಗಳಿಂದ ಸ್ಥಳಾಂತರಗೊಂಡಿದ್ದಾರೆ. ಮಣಿಪುರ ರಾಜ್ಯದಲ್ಲಿ ಕಳೆದ ಎರಡು ತಿಂಗಳಿಗಿಂತ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿದೆ.
ಗ್ರಾಮದ ಮೇಲೆ ದಾಳಿ ನಡೆಸಿದ ಶಶಸ್ತ್ರಧಾರಿಗಳ ಗುಂಪು ಸ್ವಾತಂತ್ರ್ಯ ಹೋರಾಟಗಾರರ ಪತ್ನಿಯಾಗಿಯರುವ 80 ವರ್ಷದ ಇಬೆತೊಂಬಿ ಮನೆಯಲ್ಲಿರುವಾಗ ಹೊರಗಿನಿಂದ ಚಿಲಕ ಹಾಕಿ ಬೆಂಕಿ ಹಚ್ಚಿದ್ದರು.
“ನಾನು ಅಜ್ಜಿಯನ್ನು ರಕ್ಷಿಸಲು ಪ್ರಯತ್ನಿಸಿದ ಸಂದರ್ಭದಲ್ಲಿ ಗುಂಡಿನ ದಾಳಿಯಿಂದ ಸ್ಪಲ್ಪದರಲ್ಲೇ ತಪ್ಪಿಸಿಕೊಂಡೆ” ಎಂದು ಪ್ರೇಮಕಾಂತ್ ತಿಳಿಸಿದ್ದಾರೆ.