“ಮರಾಠರಿಗೆ ಹಿಂದುಳಿದ ವರ್ಗ (ಒಬಿಸಿ) ಮೀಸಲಾತಿಯನ್ನು ನೀಡಬಾರದು” ಎಂದು ಕೇಂದ್ರದ ಮಾಜಿ ಸಚಿವ, ಬಿಜೆಪಿ ರಾಜ್ಯಸಭಾ ಸಂಸದ ಭಾಗವತ್ ಕರಾಡ್ ಸೋಮವಾರ ಹೇಳಿದ್ದಾರೆ.
ಒಬಿಸಿ ಮೀಸಲಾತಿ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ ಭಾಗವತ್ ಕರಾಡ್, “ಒಬಿಸಿ ಮೀಸಲಾತಿಯನ್ನು ದುರ್ಬಲಗೊಳಿಸದಿರುವ ಬಿಜೆಪಿ ನಿಲುವು ಸ್ಪಷ್ಟವಾಗಿದೆ” ಎಂದು ಸಮರ್ಥಿಸಿಕೊಂಡರು.
ಇದನ್ನು ಓದಿದ್ದೀರಾ? ಬೀದರ್ | ಮರಾಠಿ ಮಾಧ್ಯಮ ಶಾಲೆಗಳಲ್ಲಿ ಕನ್ನಡ ವಿಭಾಗ ತೆರೆಯಲು ಕರವೇ ಆಗ್ರಹ
“ಮಹಾರಾಷ್ಟ್ರ ಸರ್ಕಾರವು ಮರಾಠರಿಗೆ ನೀಡಿರುವ ಶೇಕಡ 10ರಷ್ಟು ಮೀಸಲಾತಿಯು ಕಾನೂನು ಅಡೆತಡೆಗೆ ಒಳಗಾಗುತ್ತದೆ. ನಾನು ಓರ್ವ ಒಬಿಸಿಯಾಗಿ, ಒಬಿಸಿ ಮೀಸಲಾತಿಯ ಪ್ರಯೋಜನಗಳನ್ನು ಮರಾಠ ಸಮುದಾಯಕ್ಕೆ ವಿಸ್ತರಿಸುವುದನ್ನು ವಿರೋಧಿಸುತ್ತೇನೆ” ಎಂದು ಹೇಳಿದರು.
ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಅವರು ಒಬಿಸಿಯಲ್ಲಿ ಮರಾಠರಿಗೆ ಮೀಸಲಾತಿ ನೀಡುವಂತೆ ಆಗ್ರಹಿಸಿದ್ದು, ಇದನ್ನು ಒಬಿಸಿ ಸಂಘಟನೆಗಳು ತೀವ್ರವಾಗಿ ವಿರೋಧಿಸಿವೆ.