ಮತ್ತೊಂದು ಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಯುವತಿಯನ್ನು ಆಕೆಯ ತಂದೆ ಮತ್ತು ಅಣ್ಣ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.
ತೇಲಿ ಸಮುದಾಯದ ನೇಹಾ ರಾಥೋಡ್ ಮತ್ತು ಜಾಟ್ ಸಮುದಾಯದ ಸೂರಜ್ ಪರಸ್ಪರ ಪ್ರೀತಿಸಿದ್ದರು. ಅವರ ಪ್ರೀತಿಗೆ ಯುವತಿಯ ಕುಟುಂಬಸ್ಥರು ಒಪ್ಪಿರಲಿಲ್ಲ. ತನ್ನ ಮನೆ ತೊರೆದಿದ್ದ ಯುವತಿ ನೇಹಾ ಮತ್ತು ಸೂರಜ್ ಮಾರ್ಚ್ 11ರಂದು ಗಾಜಿಯಾಬಾದ್‌ನ ಆರ್ಯ ಸಮಾಜ ಮಂದಿರದಲ್ಲಿ ವಿವಾಹವಾಗಿದ್ದರು. ಹಾಪುರ್‌ನಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.
ಆದರೆ, ತಮ್ಮ ಮಗಳು ಬೇರೊಂದು ಜಾತಿಯ ಯುವಕನನ್ನು ಮದುವೆಯಾಗಿದ್ದು ಯುವತಿಯ ಕುಟುಂಬಸ್ಥರನ್ನು ಕುಪಿತಗೊಳಿಸಿತ್ತು. ಅಂತರ್ಜಾತಿ ವಿವಾಹವಾದ ಮಗಳ ಮೇಲೆ ಆಕೆಯ ತಂದೆಗೆ ದ್ವೇಷ ಬೆಳೆದಿತ್ತು. ಆಕೆಯನ್ನು ಹತ್ಯೆ ಮಾಡಬೇಕೆಂದು ಯುವತಿಯ ತಂದೆ ಮತ್ತು ಸಹೋದರ ಸಂಚು ರೂಪಿಸಿದ್ದರು ಎಂದು ವರದಿಯಾಗಿದೆ.
ಮಾರ್ಚ್ 12ರಂದು ಯುವತಿಯನ್ನು ಆಕೆಯ ತಂದೆ ಮತ್ತು ಸಹೋದರ ಹತ್ಯೆ ಮಾಡಿದ್ದಾರೆ. ಸಾಕ್ಷ್ಯನಾಶಕ್ಕಾಗಿ ಆಕೆಯ ಮೃತದೇಹವನ್ನು ಸುಟ್ಟು ಹಾಕಿದ್ದಾರೆ ಎಂದು ನೋಯ್ಡಾ ಡಿಸಿಪಿ ಶಕ್ತಿ ಮೋಹನ್ ಅವಸ್ಥಿ ಹೇಳಿದ್ದಾರೆ.
ಯುವತಿಯ ತಂದೆ ಭಾನು ರಾಥೋಡ್ ಮತ್ತು ಸಹೋದರ ಹಿಮಾಂಶು ರಾಥೋಡ್‌ನನ್ನು ಬಂಧಿಸಲಾಗಿದೆ. ಪೊಲೀಸರು ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೃತ್ಯ ನಡೆದ ಸ್ಥಳದ ಸುತ್ತ-ಮುತ್ತಲಿನ ಸಿಸಿ ಟಿವಿ ದೃಶ್ಯಾವಳಿಗಳನ್ನೂ ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಪುಂಗ್ಲಿ ಅಣ್ಣಾ ಹಿಂದೂಗಳು ಅನ್ಯಜಾತಿಯ ಯುವತಿಯರನ್ನು ಪ್ರೀತಿಸಿ ಮದುವೆ ಆಗಲು ಫರ್ಮಾನು ಹೊರಡಿಸಿದ್ದಾನೆ,,ಇಲ್ಲಿ ನೋಡಿದ್ರೆ ಹಿಂದೂಗಳಲ್ಲಿ ಅನ್ಯಜಾತಿಯ ಮದುವೆಗೆ ಯುದ್ಧ ನಡೆದಿದೆ,,, ಪುಂಗ್ಲಿಯನ್ನು ನೋಯ್ಡಾ ಗೆ ಕಳಿಸಿ ಭಾಷಣ ಮಾಡಿಸುವ ಅಗತ್ಯ ಇದೆ