ಮಹಾರಾಷ್ಟ್ರ ಚುನಾವಣೆಯಲ್ಲಿ ಭಾರೀ ಅಕ್ರಮ; ʼಲೋಕತಂತ್ರಕ್ಕಾಗಿ ಮತʼ ವರದಿಯಲ್ಲಿ ಬಹಿರಂಗ

Date:

Advertisements

2024ರ ನವೆಂಬರ್‌ನಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಅಕ್ರಮ ನಡೆದಿದೆ. ಇದನ್ನು ಹೀಗೆ ಮುಂದುವರೆಯಲು ಅವಕಾಶ ನೀಡಿದರೆ, ಇದು ಚುನಾವಣಾ ಪ್ರಜಾಪ್ರಭುತ್ವದ ಸಾವಿನ ಗಂಟೆಯಾಗಬಹುದು! ಎಂದು ಲೋಕತಂತ್ರಕ್ಕಾಗಿ ಮತ (VFD) ವರದಿ ಎಚ್ಚರಿಸಿದೆ.

ಚುನಾವಣಾ ತಜ್ಞರಾದ ಎಂ.ಜಿ. ದೇವಸಹಾಯಂ, ಡಾ. ಪ್ಯಾರಾ ಲಾಲ್ ಗಾರ್ಗ್, ಮಾಧವ್ ದೇಶಪಾಂಡೆ ಮತ್ತು ಪ್ರೊ. ಹರೀಶ್ ಕಾರ್ನಿಕ್ ಮಾರ್ಗದರ್ಶನದಲ್ಲಿ ಲೋಕತಂತ್ರಕ್ಕಾಗಿ ಮತ (VFD) 2024ರ ಮಹಾರಾಷ್ಟ್ರ ಚುನಾವಣೆಯಲ್ಲಿ 288 ವಿಧಾನಸಭಾ ಕ್ಷೇತ್ರಗಳ ಕ್ಷೇತ್ರ-ಮಟ್ಟದ ವಿಶ್ಲೇಷಣೆಯನ್ನು ಮಾಡಿದೆ.

ಇಂದು ಬೆಂಗಳೂರಿನಲ್ಲಿ ಎದ್ದೇಳು ಕರ್ನಾಟಕ ಆಯೋಹಿಸಿದ್ದ “ಚುನಾವಣಾ ಆಯೋಗದ ಆಯುಧೀಕರಣ” ದುಂಡುಮೇಜಿನ ಸಭೆಯಲ್ಲಿ ಕಂಪ್ಯೂಟರ್‌ ವಿಜ್ಞಾನ ತಜ್ಞ ಮಾಧವ್ ದೇಶಪಾಂಡೆ, ನಿವೃತ್ತ ಐಎಎಸ್‌ ಅಧಿಕಾರಿ ಮತ್ತು ಚುನಾವಣಾ ತಜ್ಞರಾದ ಎಂ.ಜಿ. ದೇವಸಹಾಯಂ, ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್‌ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಆಗಿರುವ ಅಕ್ರಮಗಳ ವರದಿ ಬಹಿರಂಗಪಡಿಸಿದರು.

Advertisements

“ಕಾರ್ಯನಿರ್ವಹಿಸದ ಚುನಾವಣಾ ಆಯೋಗ ಮತ್ತು ಭಾರತದ ಚುನಾವಣಾ ವ್ಯವಸ್ಥೆಯ ಸುಧಾರಣೆ” ಎಂಬ ವರದಿಯು ಭಾರತದ ಚುನಾವಣಾ ಆಯೋಗ (ECI) ಮತ್ತು ಮುಖ್ಯ ಚುನಾವಣಾ ಅಧಿಕಾರಿ (CEO) ಡೇಟಾವನ್ನು, ಜೊತೆಗೆ ಸಿಬ್ಬಂದಿ ಮತ್ತು ಮತದಾರರಿಂದ ಸಂಗ್ರಹಿಸಿದ ಮಾಹಿತಿಯನ್ನು ಬಳಸಿಕೊಂಡು ಆಯೋಗದ ಪಾರದರ್ಶಕತೆ ಮತ್ತು ಜವಾಬ್ದಾರಿಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

YEDDELU kARNATAKA
ಕಂಪ್ಯೂಟರ್‌ ತಜ್ಞ ಮಾಧವ್ ದೇಶಪಾಂಡೆ, ನಿವೃತ್ತ ಐಎಎಸ್‌ ಅಧಿಕಾರಿ ಎಂ.ಜಿ. ದೇವಸಹಾಯಂ, ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್‌

ಇವಿಎಂ-ಕೇಂದ್ರಿತ ಮತದಾನ ವ್ಯವಸ್ಥೆಯು ನಾಲ್ಕು ಪ್ರಮುಖ ಘಟಕಗಳನ್ನು ಹೊಂದಿದೆ: ಮತದಾರರು ಚಲಾಯಿಸಿದ ಮತಗಳನ್ನು ದಾಖಲಿಸಲು ಮೈಕ್ರೊಚಿಪ್‌ಗಳು, ಮತಗಳು ಚಲಾಯಿಸಿದಂತೆ ದಾಖಲಾಗಿವೆ ಮತ್ತು ದಾಖಲಾದಂತೆ ಎಣಿಕೆಯಾಗಿವೆ ಎಂದು ಪರಿಶೀಲಿಸಲು ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ (VVPAT) ಮತ್ತು ನಿರ್ದಿಷ್ಟ ಕ್ಷೇತ್ರದಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರು ಮತ್ತು ಚಿಹ್ನೆಯನ್ನು ಇವಿಎಂ/ವಿವಿಪಿಎಟಿಗೆ ಅಪ್‌ಲೋಡ್ ಮಾಡುವ ಸಿಂಬಲ್ ಲೋಡಿಂಗ್ ಯೂನಿಟ್ಸ್ (SLUs) ಹೊಂದಿರುತ್ತದೆ.

2017ರ ನಂತರ, ಇವಿಎಂ (ಎಲೆಕ್ಟ್ರಾನಿಕ್ ವೋಟಿಂಗ್ ಸಿಸ್ಟಮ್) ಸಂಪೂರ್ಣ ಬದಲಾಗಿದೆ. ಆದರೆ SLU ಲೇಬಲ್ ಮೆಮೊರಿಯೊಂದಿಗೆ ಇಂಟರ್ನೆಟ್‌ಗೆ ಸಂಪರ್ಕಗೊಂಡಿದೆ. ಇದು ಯಂತ್ರದ ವ್ಯವಸ್ಥೆಯನ್ನು ತಿದ್ದುಪಡಿಗೆ ಒಳಗಾಗುವಂತೆ ಮಾಡಿದೆ. ಭಾರತದ ಚುನಾವಣಾ ವ್ಯವಸ್ಥೆಯ ನಾಲ್ಕನೇ ಪ್ರಮುಖ ಘಟಕವೆಂದರೆ ಮತದಾರರ ಪಟ್ಟಿ. ಚುನಾವಣಾ ಆಯೋಗ ಅಳವಡಿಸಿಕೊಂಡಿರುವ ವಿಧಾನಗಳಿಂದಾಗಿ ಮತದಾರರ ‘ಅನರ್ಹಗೊಳ್ಳುವಿಕೆ’ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ. ಒಟ್ಟಾರೆಯಾಗಿ ಇವು ಚುನಾವಣಾ ವ್ಯವಸ್ಥೆಯನ್ನು ‘ಆಯುಧ’ವನ್ನಾಗಿ ರೂಪಿಸುತ್ತವೆ. ಇದು ಅಪಾಯಕಾರಿ ಎಂದಿದೆ ವರದಿ.

ವರದಿಯಲ್ಲಿ ಗಮನಿಸಲಾದ ಪ್ರಮುಖ ಅಂಶಗಳು

ಮಧ್ಯರಾತ್ರಿಯಲ್ಲಿ ಮತದಾನ ಪ್ರಮಾಣ ಏರಿಕೆ

ಸಂಜೆ 5 ಮತದಾನ: 58.22%; ಮಧ್ಯರಾತ್ರಿ: 66.05% 7.83% (48 ಲಕ್ಷ ಹೆಚ್ಚುವರಿ ಮತಗಳು).

ಏರಿಕೆಗಳು: ನಾಂದೇಡ್ (+13.57%), ಜಲಗಾಂವ್ (+11.11%), ಹಿಂಗೋಲಿ (+11.06%), ಸೋಲಾಪುರ್ (+10.63%), ಬೀಡ್ (+10.56%), ಧುಲೆ (+10.46%).

ಕಡಿಮೆ ಅಂತರದ ಗೆಲುವಿನದೇ ದೊಡ್ಡ ಪಾಲು

25 ಕ್ಷೇತ್ರಗಳು 3,000ಕ್ಕಿಂತ ಕಡಿಮೆ ಮತಗಳಿಂದ ಗೆದ್ದವು. 39 ಕ್ಷೇತ್ರಗಳು 5,000ಕ್ಕಿಂತ ಕಡಿಮೆ, 69 ಕ್ಷೇತ್ರಗಳು 10,000ಕ್ಕಿಂತ ಕಡಿಮೆ. ಇದರರ್ಥ ಸಣ್ಣ ಅನಾನುಕೂಲತೆಗಳು ಫಲಿತಾಂಶಗಳನ್ನು ಬದಲಾಯಿಸಬಹುದು.

ಮತದಾರರ ಪಟ್ಟಿಗೆ ಅಕ್ರಮ ಸೇರ್ಪಡೆ

ಮೇ 2024ರ ಲೋಕಸಭಾ ಚುನಾವಣೆ ಮತ್ತು ನವೆಂಬರ್ 2024ರ ವಿಧಾನಸಭಾ ಚುನಾವಣೆಯ ನಡುವೆ ಮಹಾರಾಷ್ಟ್ರದ ಮತದಾರರ ಪಟ್ಟಿಗೆ 46 ಲಕ್ಷಕ್ಕಿಂತ ಹೆಚ್ಚು ಮತದಾರರ ಸೇರ್ಪಡೆಯಾಯಿತು. ಕೇವಲ ಆರು ತಿಂಗಳುಗಳಲ್ಲಿ!

ಈ ಏರಿಕೆಯು ಸುಮಾರು 12,000 ಮತಗಟ್ಟೆಗಳಲ್ಲಿ ಕೇಂದ್ರೀಕೃತವಾಗಿತ್ತು. 85 ಕ್ಷೇತ್ರಗಳಲ್ಲಿ ಹರಡಿಕೊಂಡಿತ್ತು. ಮುಖ್ಯವಾಗಿ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಸೋತ ಕ್ಷೇತ್ರಗಳಲ್ಲಿ!

ಕೆಲವು ಮತಗಟ್ಟೆಗಳು ಸಂಜೆ 5ರ ನಂತರ 600+ ಹೊಸ ಮತದಾರರನ್ನು ಸೇರಿಸಿಕೊಂಡವು. ಇದು ವಾಸ್ತವವಾಗಿ ಸಾಧ್ಯವೇ ಇಲ್ಲದ 10ಕ್ಕೂ ಹೆಚ್ಚು ಗಂಟೆಗಳ ಹೆಚ್ಚುವರಿ ಮತದಾನ ಸಮಯವನ್ನು ಸೂಚಿಸುತ್ತದೆ.

ಅಧಿಕೃತ ಮತದಾರರ ಡೇಟಾದಲ್ಲಿ ತೀವ್ರ ಏರಿಳಿತ:

ಆಗಸ್ಟ್ 30, 2024: ECI 9,64,85,765 ಮತದಾರರನ್ನು ವರದಿ ಮಾಡಿತ್ತು. ಆದರೆ ಕೇಂದ್ರ ಚುನಾವಣಾ ಆಯೋಗದ ಅದೇ ದಿನದ ಪತ್ರಿಕಾ ಪ್ರಕಟಣೆಯು ಕೇವಲ 9,53,74,302 ಎಂದು ಪಟ್ಟಿ ಮಾಡಿತ್ತು. ಇದು 11 ಲಕ್ಷಕ್ಕಿಂತ ಹೆಚ್ಚಿನ ಅಂತರ.
ಅಕ್ಟೋಬರ್ 15, 2024, ಚುನಾವಣಾ ಆಯೋಗದ ಸಂಖ್ಯೆ ಸ್ವಲ್ಪ ಕಡಿಮೆಯಾಗಿ 9,63,69,410 ಆಗಿತ್ತು.
ಅಕ್ಟೋಬರ್ 30, 2024, ಕೇವಲ 15 ದಿನಗಳ ನಂತರ, CEO ಸಂಖ್ಯೆ 9,70,25,119ಕ್ಕೆ ಏರಿತು- ಎರಡು ವಾರಗಳಲ್ಲಿ 16 ಲಕ್ಷಕ್ಕಿಂತ ಹೆಚ್ಚು ಮತದಾರರ ಏರಿಕೆ.

ದೊಡ್ಡ-ಪ್ರಮಾಣದ ಚುನಾವಣಾ ಡೇಟಾ ವ್ಯತ್ಯಾಸಗಳು (2019-2024)

2024ರ ವಿಧಾನಸಭಾ ಚುನಾವಣೆಯಲ್ಲಿ ಲೋಕಸಭೆಗೆ ಹೋಲಿಸಿದರೆ ಹೆಚ್ಚಿನ ಮತದಾರರ ಕಂಡು ಬಂದಿದ್ದಾರೆ ಮತ್ತು ಅವರು ಕೆಲವೇ ತಿಂಗಳುಗಳಲ್ಲಿ ನೋಂದಾಯಿತರಾದವರು. ಈ ಏರಿಕೆಗೆ ಚುನಾವಣಾ ಆಯೋಗ ಸ್ಪಷ್ಟನೆ ನೀಡಿಲ್ಲ.

2019ರಲ್ಲಿ, ಮಹಾರಾಷ್ಟ್ರದಲ್ಲಿ ಲೋಕಸಭೆಗೆ 8,86,76,946 ಮತದಾರರಿದ್ದರು ಮತ್ತು ವಿಧಾನಸಭೆಗೆ 8,98,38,267, ಕೇವಲ ಕೆಲವು ತಿಂಗಳುಗಳಲ್ಲಿ 11,61,321 ಮತದಾರರ ಏರಿಕೆಯಾಗಿದೆ.

ಚಲಾಯಿಸಿದ ಮತಗಳು: ಲೋಕಸಭೆ 5,35,65,479ರಿಂದ ವಿಧಾನಸಭೆ 5,44,07,794ಕ್ಕೆ ಏರಿತ್ತು. 8,42,315 ಮತಗಳ ಏರಿಕೆಯಾಗಿದೆ.

2024ರಲ್ಲಿ, ರಾಜ್ಯದಲ್ಲಿ ಲೋಕಸಭೆಗೆ 9,30,61,760 ಮತದಾರರಿದ್ದರು ಮತ್ತು ವಿಧಾನಸಭೆಗೆ 9,70,25,119, ಆರು ತಿಂಗಳ ಕಡಿಮೆ ಅವಧಿಯಲ್ಲಿ 39,53,259 ಮತದಾರರ ಏರಿಕೆ.

ಚಲಾಯಿಸಿದ ಮತಗಳು ಲೋಕಸಭೆಗೆ 5,69,69,708 ಇತ್ತು. ಅದು ವಿಧಾನಸಭೆ ಚುನಾವಣೆಗೆ 6,40,85,091ಕ್ಕೆ ಜಿಗಿತ ಕಂಡಿದೆ. ವಿಧಾನಸಭಾ ಚುನಾವಣೆಯಲ್ಲಿ ಲೋಕಸಭಾ ಚುನಾವಣೆಗಿಂತ 71,15,383 ಹೆಚ್ಚಿನ ಮತಗಳು.

2019 ಮತ್ತು 2024ರ ನಡುವೆ

ಲೋಕಸಭಾ ಮತದಾರರ ಪಟ್ಟಿಯು 43,94,814ರಷ್ಟು ಬೆಳೆಯಿತು. ಆದರೆ ಚಲಾಯಿಸಿದ ಮತಗಳು ಕೇವಲ 34,04,229ರಷ್ಟು ಹೆಚ್ಚಾಯಿತು.

ವಿಧಾನಸಭಾ ಮತದಾರರ ಪಟ್ಟಿಯು 71,86,852ರಷ್ಟು ಬೆಳೆಯಿತು, ಆದರೆ ಚಲಾಯಿಸಿದ ಮತಗಳು 96,77,257ರಷ್ಟು ಹೆಚ್ಚಾಯಿತು.

ಅಸಾಮಾನ್ಯ ಏರಿಕೆಗಳು

  • ಆರು ತಿಂಗಳು: 2019 ಲೋಕಸಭೆ ಮತ್ತು 2019 ವಿಧಾನಸಭೆಯ ನಡುವೆ: +12.7 ಲಕ್ಷ ಮತದಾರರು.
  • ಐದು ವರ್ಷಗಳು: 2019 ಲೋಕಸಭೆ ಮತ್ತು 2024 ಲೋಕಸಭೆ ನಡುವೆ: +37.9-45 ಲಕ್ಷ,
  • ಐದು ತಿಂಗಳು: 2019 ಲೋಕಸಭೆ ಮತ್ತು 2024 ವಿಧಾನಸಭೆಯ ನಡುವೆ: +84.6 ಲಕ್ಷ.
  • ಆರು ತಿಂಗಳು: ಮೇ-ನವೆಂಬರ್ 2024 (ಲೋಕಸಭೆರಿಂದ ವಿಧಾನಸಭೆ): +41 ಲಕ್ಷ.
  • ಏಳು ತಿಂಗಳು: ಮಾರ್ಚ್-ಅಕ್ಟೋಬರ್ 2024 (ಲೋಕಸಭೆರಿಂದ ವಿಧಾನಸಭೆ): +46.7 ಲಕ್ಷ.

ಈ ಅಸಮಾನತೆಗಳು ಮತದಾರರ ಪಟ್ಟಿಯ ಸಮಗ್ರತೆಯ ಬಗ್ಗೆ ಪ್ರಮುಖ ಪ್ರಶ್ನೆಗಳನ್ನು ಎತ್ತಿದೆ. ಇವುಗಳಿಗೆ ECI ಮತ್ತು CEO ಮಹಾರಾಷ್ಟ್ರದಿಂದ ತುರ್ತು ಸ್ಪಷ್ಟೀಕರಣದ ಅಗತ್ಯವಿದೆ.

  1. ನಿರ್ದಿಷ್ಟ ಪಕ್ಷಗಳಿಗೆ ಲಾಭ ನೀಡುವ ಆಕಸ್ಮಿಕ ಮತ ಏರಿಕೆಗಳು
    • ಲೋಕಸಭಾ ಚುನಾವಣೆಯಲ್ಲಿ (ಮೇ 2024), ಬಿಜೆಪಿಯು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಸರಾಸರಿ 88,713 ಮತಗಳನ್ನು ಪಡೆಯಿತು.
    • ವಿಧಾನಸಭಾ ಚುನಾವಣೆಯಲ್ಲಿ (ನವೆಂಬರ್ 2024), ಬಿಜೆಪಿಯು ಪ್ರತಿ ಕ್ಷೇತ್ರಕ್ಕೆ ಸರಾಸರಿ 116,064 ಮತಗಳನ್ನು ಪಡೆಯಿತು. ಜನಸಂಖ್ಯೆಯ ಬೆಳವಣಿಗೆಗೆ ಸರಿಹೊಂದದ 28,000 ಮತಗಳ ಏಕಾಏಕಿ ಏರಿಕೆಯಾಗಿದೆ.

      ಉದಾಹರಣೆಗಳು:
    • ಕಾಂಠಿ: ಕಾಂಗ್ರೆಸ್ ಮತಗಳು ಸ್ಥಿರವಾಗಿವೆ (1.35 ಲಕ್ಷ). ಆದರೆ ಬಿಜೆಪಿಯು 56,000 ಮತ ಗಳಿಸಿತು. ಮತದಾರರ ಸಂಖ್ಯೆ 35,000ರಷ್ಟು ಹೆಚ್ಚಾಯಿತು.
    • ಕರಾಡ್ (ದಕ್ಷಿಣ): ಆರು ತಿಂಗಳ ಹಿಂದಿನ ಚುನಾವಣೆಗಿಂತ 41,000 ಹೆಚ್ಚಿನ ಮತಗಳು, ಐದು ವರ್ಷಗಳಲ್ಲಿ ಕಂಡಿರದ ಏರಿಕೆ.
    • ನಾಂದೇಡ್ ಲೋಕಸಭಾ ಉಪಚುನಾವಣೆಯಲ್ಲಿ, ಕಾಂಗ್ರೆಸ್ ಸಂಸದೀಯ ಕ್ಷೇತ್ರವನ್ನು ಗೆದ್ದರೂ, ಅದೇ ಪ್ರದೇಶದ ಆರು ವಿಧಾನಸಭಾ ಕ್ಷೇತ್ರಗಳನ್ನು ಕಳೆದುಕೊಂಡಿತು. ವಿಧಾನಸಭಾ ಮಟ್ಟದಲ್ಲಿ 1.59 ಲಕ್ಷ ಕಡಿಮೆ ಮತಗಳು.

ಉನ್ನತ-ಮಟ್ಟದ ಅಕ್ರಮಗಳು

  • ನಾಗಪುರ ದಕ್ಷಿಣ ಪಶ್ಚಿಮವು 6 ತಿಂಗಳಲ್ಲಿ 29,219 ಮತದಾರರನ್ನು ಸೇರಿಸಿತು. ECIಯ 4% ಪರಿಶೀಲನೆ ಗಡಿಯನ್ನು ಮೀರಿದೆ; BLO ಅಪೂರ್ಣ ಪರಿಶೀಲನೆಯನ್ನು ದೃಢಪಡಿಸಿದೆ.
  • ಸೋಲಾಪುರದ ಮರಕಾಡವಾಡಿ ಗ್ರಾಮದಲ್ಲಿ, ಇವಿಎಂ ನಿಜವಾದ ಮತಗಳನ್ನು ಪ್ರತಿಬಿಂಬಿಸಲಿಲ್ಲ ಎಂದು ಆರೋಪಿಸಲಾಗಿದೆ. ಪೊಲೀಸರು ಕಾಗದದ ಮತಪತ್ರದ ಅಣಕು ಮತದಾನವನ್ನು ತಡೆದರು.

ಕಾರ್ಯವಿಧಾನ ಮತ್ತು ತಾಂತ್ರಿಕ ಅನಾನುಕೂಲತೆಗಳು

  • ಮತಗಟ್ಟೆಗಳ ಬಳಿ ರೂಟರ್‌ಗಳ ವರದಿಗಳು, ಎಣಿಕೆ ಸಮಯದಲ್ಲಿ ಆಕಸ್ಮಿಕ ವಿದ್ಯುತ್ ಕಡಿತ, ಇವಿಎಂಗಳು ಸ್ಟ್ರಾಂಗ್ ರೂಂಗೆ ತಡವಾಗಿ ತಲುಪುವುದು, CCTV ವೈಫಲ್ಯಗಳು, ಮತ್ತು ಸ್ಟ್ರಾಂಗ್ ರೂಂ ಅಸುರಕ್ಷತೆಯ ಆರೋಪಗಳು.
  • ಕೆಲವು ಮತಗಟ್ಟೆಗಳಲ್ಲಿ, ಎಣಿಕೆ ಆರಂಭದಲ್ಲಿ ಇವಿಎಂ ಬ್ಯಾಟರಿಗಳು 99% ತೋರಿಸಿದವು.
  • ಫಾರ್ಮ್ 17C (ಮತಗಟ್ಟೆ ದಾಖಲೆ) ಮತ್ತು ಕಂಟ್ರೋಲ್ ಯೂನಿಟ್ ಎಣಿಕೆಗಳ ನಡುವಿನ ವ್ಯತ್ಯಾಸಗಳು
    VVPAT ಕುರಿತು: ಸಂಭಾವ್ಯ ಇಂಟರ್ನೆಟ್ ಸಂಪರ್ಕ ಮತ್ತು ಸ್ಲಿಪ್‌ಗಳ ಸಾರ್ವಜನಿಕ ಆಡಿಟ್ ಇಲ್ಲ.
    ECI ಸ್ವತಂತ್ರವಾಗಿ ಇವಿಎಂ ಸೋರ್ಸ್ ಕೋಡ್‌ನ್ನು ನಿಯಂತ್ರಿಸುತ್ತದೆಯೇ ಎಂಬ ಪ್ರಶ್ನೆಗಳು.
    ಹಿತಾಸಕ್ತಿಯ ಸಂಘರ್ಷ: ಇವಿಎಂ ತಯಾರಕರಾದ ECIL ಮತ್ತು BELನ ಮಂಡಳಿಗಳಲ್ಲಿ ಬಿಜೆಪಿ ಸದಸ್ಯರು.

    ಡೇಟಾ ಗೌಪ್ಯತೆ ಮತ್ತು ಪರಿಶೀಲನೆಯನ್ನು ಕಡಿಮೆ ಮಾಡುವ ಕಾನೂನು ಬದಲಾವಣೆ
  • ಡಿಸೆಂಬರ್ 2024: ECI ಚುನಾವಣಾ ವ್ಯವಸ್ಥೆಯ ನಿಯಮಗಳ ರೂಲ್ 93ನ್ನು ತಿದ್ದುಪಡಿ ಮಾಡಿತು. CCTV ಫೂಟೇಜ್ ಮತ್ತು ಫಾರ್ಮ್ 17Cಗೆ ಪ್ರವೇಶವನ್ನು ನಿರ್ಬಂಧಿಸಿತು. ಒಂದು ರಾಜ್ಯದ ಚುನಾವಣೆಯಲ್ಲಿ ಅವುಗಳ ಬಿಡುಗಡೆಗೆ ನ್ಯಾಯಾಲಯ ಆದೇಶ ನೀಡಿದ ಕೆಲವೇ ದಿನಗಳ ನಂತರ.
  • ಮೇ 2025: ಚುನಾವಣಾ CCTV ಫೂಟೇಜ್ ಧಾರಣವನ್ನು ಒಂದು ವರ್ಷದಿಂದ 45 ದಿನಗಳಿಗೆ ಕಡಿತಗೊಳಿಸಲಾಯಿತು. ಕಾನೂನು ಸವಾಲುಗಳ ಮೊದಲು ನಿರ್ಣಾಯಕ ಸಾಕ್ಷ್ಯಗಳ ನಾಶವನ್ನು ಸಾಧ್ಯವಾಗಿಸಿತು.
  • 100% ವೆಬ್‌ಕಾಸ್ಟಿಂಗ್ ಇದ್ದರೂ, ವಿಡಿಯೋ ಫೂಟೇಜ್ ಅಥವಾ VVPAT ಸ್ಲಿಪ್‌ಗಳು ಸಾರ್ವಜನಿಕ ಪರಿಶೀಲನೆಗೆ ಲಭ್ಯವಿಲ್ಲ.

    ವೇಷ ಭಾಷಣದ ಮೇಲೆ ಕ್ರಮಕೈಗೊಳ್ಳದಿರುವಿಕೆ
    ಮಹಾರಾಷ್ಟ್ರ ಚುನಾವಣೆಯ ಸಮಯದಲ್ಲಿ ದ್ವೇಷಭಾಷಣದ 100ಕ್ಕಿಂತ ಹೆಚ್ಚು ದೂರುಗಳಿದ್ದರೂ, ನಿರ್ದಿಷ್ಟ ಕ್ಷೇತ್ರಗಳು ಮತ್ತು ನಾಯಕರ ಹೆಸರಿದ್ದರೂ ECI ಯಾವುದೇ ಕಾನೂನು ಕ್ರಮವನ್ನು ತೆಗೆದುಕೊಂಡಿಲ್ಲ.
  • ಮಹಾರಾಷ್ಟ್ರ ಏಕೆ ಮುಖ್ಯ?
  • ಮಹಾರಾಷ್ಟ್ರದ 2024ರ ವಿಧಾನಸಭಾ ಚುನಾವಣೆಯ ಕೇಸ್ ಸ್ಟಡಿ ಭಾರತದಾದ್ಯಂತ ಭವಿಷ್ಯದ ಚುನಾವಣೆಗಳಿಗೆ ಎಚ್ಚರಿಕೆಯಾಗಿದೆ.
  • ವರದಿಯು ಬಿಹಾರದ ಮತದಾರರ ವಿಶೇಷ ತೀವ್ರ ಸಂಶೋಧನೆಯ ಪಟ್ಟಿಯ ಬಗ್ಗೆ ಸಂಕ್ಷಿಪ್ತವಾಗಿ ಗಮನಿಸಿದರೂ, ಮಹಾರಾಷ್ಟ್ರವು ಭಾರತದ ಚುನಾವಣಾ ವ್ಯವಸ್ಥೆಯ “ಅಸ್ತ್ರ”ದ ಸ್ಪಷ್ಟ, ಡೇಟಾ-ಬೆಂಬಲಿತ ಸಾಕ್ಷ್ಯವನ್ನು ಒದಗಿಸುತ್ತದೆ.
  • VFD ಬೇಡಿಕೆಗಳು
  • ಮತದಾನ ವ್ಯವಸ್ಥೆಯನ್ನು ವಿಕೇಂದ್ರೀಕರಣಗೊಳಿಸಿ: ECI ಕೇವಲ ಲೋಕಸಭೆ /ರಾಷ್ಟ್ರಪತಿ ಚುನಾವಣೆಗಳನ್ನು ನಡೆಸಬೇಕು; ರಾಜ್ಯ ECಗಳು ವಿಧಾನಸಭಾ ಮತ್ತು ಸ್ಥಳೀಯ ಚುನಾವಣೆಗಳನ್ನು ನಡೆಸಬೇಕು. ಅವುಗಳನ್ನು ಸೂಕ್ತವಾಗಿ ಬಲಪಡಿಸಬೇಕು.
  • ಇವಿಎಂ, VVPAT, ಮತ್ತು ಮತದಾರರ ಪಟ್ಟಿಯ ತಕ್ಷಣದ ಫಾರೆನ್ಸಿಕ್ ಆಡಿಟ್ ಮಾಡಬೇಕು.
  • ಯಂತ್ರ-ಓದಬಹುದಾದ ಪಟ್ಟಿಗಳು, ಫಾರ್ಮ್ 17A/17C, ಮತ್ತು CCTV ಫೂಟೇಜ್‌ನ ಸಾರ್ವಜನಿಕ ಬಿಡುಗಡೆ.
  • ನಿರ್ಬಂಧಿತ ರೂಲ್ 93 ತಿದ್ದುಪಡಿಗಳನ್ನು ರದ್ದುಗೊಳಿಸಿ; ಪಾರದರ್ಶಕತೆ ರಕ್ಷಣೆಗಳನ್ನು ಪುನಃಸ್ಥಾಪಿಸಿ.
  • ಕೊನೆಯವರೆಗೆ ಮತ ಪರಿಶೀಲನೆಗೆ ಕಾನೂನಾತ್ಮಕ ಗ್ಯಾರಂಟಿಗಳನ್ನು ನೀಡಬೇಕು.
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X