ಹೈದರಾಬಾದ್‌ | ನವಜಾತ ಶಿಶುಗಳ ಬೃಹತ್ ಮಾರಾಟ ಜಾಲವನ್ನು ಭೇದಿಸಿದ ಪೊಲೀಸರು: 11 ಮಕ್ಕಳ ರಕ್ಷಣೆ

Date:

Advertisements

ಮಹತ್ವದ ಬೆಳವಣಿಗೆಯೊಂದರಲ್ಲಿ ಹೈದರಾಬಾದ್ ಪೊಲೀಸರು ನವಜಾತ ಶಿಶುಗಳ ಬೃಹತ್ ಕಳ್ಳಸಾಗಣೆ ಹಾಗೂ ಮಾರಾಟ ಜಾಲವನ್ನು ಭೇದಿಸಿದ್ದು, ಸುಮಾರು 11 ಮಕ್ಕಳನ್ನು ರಕ್ಷಣೆ ಮಾಡಿದ್ದು, ಹಲವರನ್ನು ಬಂಧಿಸಿದ್ದಾರೆ.

ತೆಲಂಗಾಣದ ರಾಚಕೊಂಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಮೆಡಿಪಲ್ಲಿ ಪೊಲೀಸರು ದೆಹಲಿ ಮತ್ತು ಪುಣೆಯಿಂದ ಮೂವರು ಆರೋಪಿಗಳಿಂದ ಮಕ್ಕಳನ್ನು ಖರೀದಿಸಿದ ಎಂಟು ಮಹಿಳೆಯರು ಸೇರಿದಂತೆ ಒಟ್ಟು 11 ಜನರನ್ನು ಬಂಧಿಸಿದ್ದಾರೆ.

ಜಾಲವನ್ನು ಭೇದಿಸಿದ ಬಳಿಕ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರಾಚಕೊಂಡ ಪೊಲೀಸ್ ಆಯುಕ್ತ ತರುಣ್ ಜೋಶಿ, “ಪ್ರಕರಣದ ಪ್ರಮುಖ ಮೂವರು ಆರೋಪಿಗಳು ಮಕ್ಕಳನ್ನು ಹಣಕಾಸಿನ ಸಮಸ್ಯೆಯಿಲ್ಲದ ದಂಪತಿಗಳಿಗೆ ಮಾರಾಟ ಮಾಡುತ್ತಿದ್ದರು. ಈವರೆಗೆ ಒಟ್ಟು 11 ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯೊಂದಿಗೆ ಪೊಲೀಸ್ ಇಲಾಖೆ ರಕ್ಷಿಸಿದೆ. ರಕ್ಷಿಸಲ್ಪಟ್ಟ ಮಕ್ಕಳ ಪೈಕಿ ಒಂದು ತಿಂಗಳಿಂದ ಎರಡೂವರೆ ತಿಂಗಳ ವಯಸ್ಸಿನ ಮಕ್ಕಳಿದ್ದು, ಒಂಬತ್ತು ಹೆಣ್ಣು ಮಕ್ಕಳು, ಉಳಿದ ಇಬ್ಬರು ಗಂಡು ಮಕ್ಕಳು” ಎಂದು ತಿಳಿಸಿದ್ದಾರೆ.

Advertisements

“ಬಂಧಿಸಲ್ಪಟ್ಟಿರುವ ಆರೋಪಿಗಳು ದೆಹಲಿಯ ಕಿರಣ್ ಮತ್ತು ಪ್ರೀತಿ ಮತ್ತು ಪುಣೆಯ ಕನ್ನಯ್ಯ ಅವರಿಂದ ಮಕ್ಕಳನ್ನು ಪಡೆಯುತ್ತಿದ್ದರು. ಮೂವರು ಬಂಧಿತರಿಗೆ ಸುಮಾರು 50 ಶಿಶುಗಳನ್ನು ಪೂರೈಸಿರುವುದಾಗಿ ತಿಳಿದುಬಂದಿದೆ. ಆರೋಪಿಗಳ ಏಜೆಂಟರು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಶಿಶುಗಳ ಅಗತ್ಯವಿರುವ ವ್ಯಕ್ತಿಗಳಿಗೆ ಮಧ್ಯವರ್ತಿಗಳ ಸಹಾಯದಿಂದ ಪ್ರತಿ ಮಗುವಿಗೆ 1.80 ಲಕ್ಷದಿಂದ 5.50 ಲಕ್ಷದವರೆಗೆ ಮಾರಾಟ ಮಾಡುತ್ತಿದ್ದರು” ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

“ಮೇ 22 ರಂದು ನಾಲ್ಕೂವರೆ ಲಕ್ಷ ರೂಪಾಯಿಗೆ ಮಗುವನ್ನು ಮಾರಾಟ ಮಾಡಿದ್ದಕ್ಕಾಗಿ ನೋಂದಾಯಿತ ವೈದ್ಯಕೀಯ ಅಧಿಕಾರಿ (ಆರ್‌ಎಂಪಿ) ಶೋಭಾ ರಾಣಿ ಅವರನ್ನು ಬಂಧಿಸಿದ ನಂತರ ಪೊಲೀಸರು ತನಿಖೆ ಚುರುಕುಗೊಳಿಸಿದಾಗ, ಈ ಬೃಹತ್ ದಂಧೆ ಬೆಳಕಿಗೆ ಬಂದಿದೆ. ಶೋಭಾ ರಾಣಿಗೆ ಸಹಾಯ ಮಾಡುತ್ತಿದ್ದ ಸ್ವಪ್ನಾ ಮತ್ತು ಶೇಕ್ ಸಲೀಂ ಅವರನ್ನು ಸಹ ಬಂಧಿಸಲಾಗಿದ್ದು, ಅವರಿಂದ ಎರಡು ಶಿಶುಗಳನ್ನು ರಕ್ಷಿಸಲಾಗಿದೆ” ಎಂದು ಪೊಲೀಸ್ ಆಯುಕ್ತ ತರುಣ್ ಜೋಶಿ ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 370, 372,373 r/w 34 ಮತ್ತು ಸೆಕ್ಷನ್ 81,87 ಮತ್ತು 88 ಬಾಲಾಪರಾಧ ನ್ಯಾಯ ಕಾಯಿದೆ 2015 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಿಚಾರಣೆಯಲ್ಲಿ ಶೋಭಾ ರಾಣಿ ಅವರು ಹರಿಹರ ಚೇತನ್ ಎಂಬವರೊಂದಿಗೆ ಕೂಡಿ ಈ ಕೆಲಸ ಮಾಡುತ್ತಿದ್ದರು ಎಂದು ಬಹಿರಂಗಪಡಿಸಿದ್ದಾರೆ.

ಆರೋಪಿಗಳ ತಪ್ಪೊಪ್ಪಿಗೆ ಆಧಾರದ ಮೇಲೆ ಪೊಲೀಸರು ಬಂಡಾರಿ ಹರಿಹರ ಚೇತನ್, ಬಂಡಾರಿ ಪದ್ಮಾ, ಬಲಗಂ ಸರೋಜಾ, ಮುದವತ್ ಶಾರದ, ಮುದವತ್ ರಾಜು, ಪಠಾಣ್ ಮುಮ್ತಾಜ್ ಅಲಿಯಾಸ್ ಹಸೀನಾ, ಜಗನಾದಂ ಅನುರಾಧ ಮತ್ತು ಯಾತ ಮಮತಾ ಎಂಬುವರನ್ನು ಬಂಧಿಸಿದ್ದಾರೆ.

ಬಂಧಿತರೆಲ್ಲರೂ ತೆಲಂಗಾಣ ಮತ್ತು ನೆರೆಯ ಆಂಧ್ರಪ್ರದೇಶದ ನಿವಾಸಿಗಳು. ಅವರ ವಿಚಾರಣೆ ವೇಳೆ ದೆಹಲಿ ಮತ್ತು ಪುಣೆಯ ಮೂವರು ವ್ಯಕ್ತಿಗಳು ತಲಾ 50,000 ರೂ.ಗೆ ಶಿಶುಗಳನ್ನು ಅವರಿಗೆ ಸರಬರಾಜು ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಕಿರಣ್, ಪ್ರೀತಿ, ಕನ್ನಯ್ಯ ಮತ್ತು ಇತರ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ರಕ್ಷಿಸಲ್ಪಟ್ಟ ಶಿಶುಗಳನ್ನು ಮಕ್ಕಳ ಕಲ್ಯಾಣ ಅಧಿಕಾರಿಗಳ ಕಣ್ಗಾವಲಿನಲ್ಲಿ ವೈದ್ಯಕೀಯ ಆರೈಕೆ ಮತ್ತು ಸುರಕ್ಷಿತ ಆಶ್ರಯ ನೀಡಲಾಗುತ್ತಿದೆ. ಮೂಲ ಪೋಷಕರಿಗಾಗಿ ನಿರಂತರ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಗು ನಮಗೇ ನೀಡಿ: ಮಕ್ಕಳು ಪಡೆದಿದ್ದ ಪೋಷಕರ ಆಕ್ರಂದನ

ಈ ನಡುವೆ ಪೊಲೀಸ್ ಕಮಿಷನರೇಟ್ ಕಚೇರಿಯ ಪ್ರದೇಶದಲ್ಲಿ ಸೇರಿದ್ದ ದಂಧೆಕೋರರಿಂದ ಮಕ್ಕಳನ್ನು ಖರೀದಿಸಿದ್ದ ಪೋಷಕರು, ಮಗು ನಮಗೇ ನೀಡುವಂತೆ ಕಣ್ಣೀರಿಟ್ಟ ಬೆಳವಣಿಗೆ ಕೂಡ ನಡೆದಿದೆ.

6363

 

“ನಾವು ಮದುವೆಯಾಗಿ 10 ವರ್ಷ ಹತ್ತಿರವಾಗಿದೆ. ಜೀವನದಲ್ಲಿ ಎಲ್ಲವನ್ನೂ ಹೊಂದಿದ್ದೇವೆ, ಆದರೆ ಮಗು ಅಲ್ಲ. ನಮ್ಮ ಭವಿಷ್ಯದ ಭರವಸೆಯಾಗಿ ಈ ಹುಡುಗಿ ನಮ್ಮ ಜೀವನದಲ್ಲಿ ಬಂದಳು. ಈಗ ಎಲ್ಲವೂ ಮಾಯವಾಗಿದೆ. ಮಾನವೀಯ ನೆಲೆಯಲ್ಲಿ ನಮಗೇ ಮಗುವನ್ನು ನೀಡಿ” ಎಂದು ಎರಡೂವರೆ ವರ್ಷದ ಮಗುವನ್ನು ದಂಧೆಕೋರರಿಂದ ಖರೀದಿಸಿದ್ದ ಮಹಿಳೆಯೊಬ್ಬರು ಕಣ್ಣೀರಿಡುತ್ತಾ ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಸೂರ್ಯಪೇಟೆಯ ಮಹಿಳೆಯೊಬ್ಬರು ಒಂದೂವರೆ ವರ್ಷದ ಬಾಲಕನನ್ನು ಉಳಿಸಿಕೊಳ್ಳಲು ಅವಕಾಶ ನೀಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡುತ್ತಿರುವ ದೃಶ್ಯ ಕೂಡ ಕಂಡುಬಂತು.

“ತಾನು ಈಗಾಗಲೇ ತನ್ನ ಪತಿಯನ್ನು ಕಳೆದುಕೊಂಡಿದ್ದೇನೆ. ನನಗೆ ಮಗು ಇರಲಿಲ್ಲ. ನಾನು ತುಂಬಾ ಕಷ್ಟಪಟ್ಟು ಒಂದನ್ನು ಪಡೆದುಕೊಂಡೆ. ಈಗ ನನ್ನ ಮಗುವನ್ನೂ ಕಳೆದುಕೊಳ್ಳುತ್ತಿದ್ದೇನೆ. ನನಗೆ ಜೀವನದಲ್ಲಿ ಬೇರೆ ಯಾವುದೇ ಉದ್ದೇಶವಿಲ್ಲ. ದಯವಿಟ್ಟು ನನ್ನ ಬಾಲಕನನ್ನು ನನಗೇ ಹಿಂದಿರುಗಿಸಿ” ಎಂದು ಮಹಿಳೆಯೋರ್ವರು ಕಣ್ಣೀರಿಡುತ್ತಾ ತನ್ನಿಂದ ಮಗುವನ್ನು ಬೇರ್ಪಡಿಸಬೇಡಿ ಎಂದು ಕೇಳಿಕೊಂಡ ದೃಶ್ಯವು ಎಂಥವರ ಕಲ್ಲು ಹೃದಯವನ್ನೂ ಕರಗಿಸುವಂತಿತ್ತು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X