ಕಳೆದ 90 ವರ್ಷಗಳಲ್ಲಿ ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ ನೀರಿನ ಸಂಗ್ರಹವು 71ನೇ ಬಾರಿಗೆ 100 ಅಡಿಗಳನ್ನು ದಾಟಿದೆ. ಶನಿವಾರ ರಾತ್ರಿರ ವೇಳೆಗೆ ಜಲಾಶಯದ ನೀರಿನ ಮಟ್ಟವು 103.7 ಅಡಿಗಳಿಗೆ ಏರಿಕೆಯಾಗಿದೆ. ಕರ್ನಾಟಕದ ಮಲೆನಾಡು ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಕೆಆರ್‌ಎಸ್‌ನಿಂದ ಕಾವೇರಿ ನದಿಗೆ 90,000 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಹೀಗಾಗಿ, ತಮಿಳುನಾಡಿಗೆ ಭಾರೀ ಪ್ರಮಾಣದ ನೀರು ಹರಿದುಹೋಗುತ್ತಿದ್ದು, ಮೆಟ್ಟೂರು ಜಲಾಶಯ ಭರ್ತಿಯಾಗುತ್ತಿದೆ.
ಮೆಟ್ಟೂರು ಅಣೆಕಟ್ಟಿನ ನೀರು ಸಂಗ್ರಹ ಸಾಮರ್ಥ್ಯವು 120 ಅಡಿಯಷ್ಟಿದ್ದು, ಸದ್ಯ, 103.7 ಅಡಿ ನೀರು ತುಂಬಿದೆ. ಜಲಾಶಯದಲ್ಲಿ ಸುಮಾರು 70 ಟಿಎಂಟಿ ಅಡಿ (70 ಸಾವಿರ ಮಿಲಿಯನ್ ಘನ ಅಡಿ) ನೀರು ಸಂಗ್ರಹವಾಗಿದೆ ಎಂದು ಅಧಿಕಾರಿಗಳು. ಜಲಾಶಯವು 93 ಟಿಎಂಸಿ ಅಡಿ ನೀರನ್ನು ಸಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ.
ಕರ್ನಾಟಕದ ಕಬಿನಿ ಮತ್ತು ಕೆಆರ್‌ಎಸ್ ಅಣೆಕಟ್ಟುಗಳು ಸಂಪೂರ್ಣವಾಗಿ ತುಂಬಿವೆ. ಹೀಗಾಗಿ, ಕೆಆರ್‌ಎಸ್ ಮತ್ತು ಕಬಿನಿ ಜಲಾಶಯಗಳಿಂದ ಒಟ್ಟು 1,20,000 ಕ್ಯೂಸೆಕ್ಸ್ ನೀರನ್ನು ಹರಿಬಿಡಲಾಗುತ್ತಿದೆ. ಕಾವೇರಿ ನದಿಗೆ ಮೂಲಕ ಮೆಟ್ಟೂರು ಅಣೆಕಟ್ಟೆಗೆ 1,23,000 ಕ್ಯೂಸೆಕ್ಸ್ ನೀರು ಹರಿದು ಹೋಗುತ್ತಿದೆ ಎಂದು ವರದಿಯಾಗಿದೆ.
ಶನಿವಾರ ರಾತ್ರಿ 8 ಗಂಟೆಯ ವೇಳೆಗೆ, ಮೆಟ್ಟೂರು ಅಣೆಕಟ್ಟೆಗೆ ಒಳಹರಿವು 1.23 ಲಕ್ಷ ಕ್ಯೂಸೆಕ್ಸ್ ಇದ್ದು, ಹೊರಹರಿವು 1,000 ಕ್ಯೂಸೆಕ್ಸ್ ಇದೆ ಎಂದು ಮೆಟ್ಟೂರು ಅಧಿಕಾರಿಗಳು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಮಿಳುನಾಡಿ ನೀರಾವರಿ ಮತ್ತು ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸುವಲ್ಲಿ ಮೆಟ್ಟೂರು ಅಣೆಕಟ್ಟು ಪ್ರಮುಖ ಮೂಲವಾಗಿದೆ.