ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರ 45 ವರ್ಷದ ಉದಯನಿಧಿ ಸ್ಟಾಲಿನ್ ಅವರನ್ನು ಶನಿವಾರ ಸಂಜೆ ತಮಿಳುನಾಡಿನ ಉಪಮುಖ್ಯಮಂತ್ರಿ ಹುದ್ದೆಗೆ ನೇಮಿಸಲಾಗಿದೆ. ಪ್ರಮಾಣ ವಚನ ಸಮಾರಂಭವು ಸೆಪ್ಟೆಂಬರ್ 29ರಂದು ಮಧ್ಯಾಹ್ನ 3:30ಗೆ ಚೆನ್ನೈನ ರಾಜಭವನದಲ್ಲಿ ನಡೆಯಲಿದೆ.
ಚೆಪಾಕ್ ಕ್ಷೇತ್ರದಲ್ಲಿ ಮೊದಲ ಬಾರಿಗೆ ಶಾಸಕರಾದ ಉದಯನಿಧಿ ಈ ಹಿಂದೆ ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದರು. ಜುಲೈ 18ರಂದೇ ಅವರು ಉಪಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು.
ಸಂಪುಟ ಪುನರ್ ರಚನೆ ಮಾಡಿದ ಬಳಿಕ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇನ್ನು ಉನ್ನತ ಶಿಕ್ಷಣ ಖಾತೆಯನ್ನು ದಲಿತ ನಾಯಕ ಡಾ ಗೋವಿ ಚೆಜಿಯಾನ್ ಅವರಿಗೆ ನೀಡುವ ಮೂಲಕ ಸಚಿವ ಸಂಪುಟ ವಿಸ್ತರಿಸಲಾಗಿದೆ. ಎಂ.ಮತಿವೆಂಥನ್ ಅವರು ಆದಿ ದ್ರಾವಿಡರ್ ಮತ್ತು ಗಿರಿಜನ ಕಲ್ಯಾಣದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
ಇದನ್ನು ಓದಿದ್ದೀರಾ? ತಮಿಳುನಾಡು ರಾಜಕಾರಣ | ಕರುಣಾನಿಧಿ, ಸ್ಟಾಲಿನ್ ನಂತರ ಸಿಎಂ ಕುರ್ಚಿಯತ್ತ ಉದಯನಿಧಿ?
ಇನ್ನು ಉನ್ನತ ಶಿಕ್ಷಣ ಸಚಿವ ಕೆ.ಪೊನ್ಮುಡಿ ಅವರನ್ನು ಅರಣ್ಯ, ಪರಿಸರ ಮತ್ತು ಹವಾಮಾನ ಸಚಿವರನ್ನಾಗಿ ಬದಲಾಯಿಸಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರನ್ನಾಗಿ ಶಿವ ವಿ.ಮೆಯ್ಯನಾಥನ್ ಅವರನ್ನು ನೇಮಿಸಿದರೆ, ಎನ್.ಕಯಲ್ವಿಝಿ ಸೆಲ್ವರಾಜ್ ಅವರಿಗೆ ಮಾನವ ಸಂಪನ್ಮೂಲ ನಿರ್ವಹಣೆ ಮತ್ತು ಮಾಜಿ ಸೈನಿಕರ ಕಲ್ಯಾಣ ಖಾತೆಗಳನ್ನು ನೀಡಲಾಗಿದೆ.
#WATCH | Chennai: "Thank you" says DMK leader Udhayanidhi Stalin on being appointed as the Deputy CM of Tamil Nadu pic.twitter.com/UhUzWliJVL
— ANI (@ANI) September 29, 2024
