ಶಾಸಕ ನೊಬ್ಬ ವಿಐಪಿ ಸಂಸ್ಕೃತಿಯ ಲಜ್ಜೆಗೆಟ್ಟ ವರ್ತನೆ ತೋರಿದ ಘಟನೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ.
ತೆನಾಲಿ ವಿಧಾನಸಭಾ ಕ್ಷೇತ್ರದ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಶಾಸಕ ಎ ಶಿವಕುಮಾರ್ ಸರದಿ ಸಾಲನ್ನು ಬಿಟ್ಟು ನೇರವಾಗಿ ಮತ ಚಲಾಯಿಸಲು ತೆರಳಿದ್ದಾನೆ. ಇದನ್ನು ಗಮನಿಸಿದ ಮತದಾರರೊಬ್ಬರು ಸರದಿಯಲ್ಲಿ ಬನ್ನಿ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಕೋಪಗೊಂಡ ಶಾಸಕ ಮತದಾರನ ಕೆನ್ನೆಗೆ ಹೊಡೆದಿದ್ದಾನೆ. ಮತದಾರ ಸಹ ಆಕ್ರೋಶಗೊಂಡು ಶಾಸಕನ ಕೆನ್ನೆಗೆ ತಿರುಗಿ ಬಾರಿಸಿದ್ದಾನೆ. ಶಾಸಕನಿಗೆ ಬಾರಿಸಿದ ನಂತರ ಸ್ಥಳದಲ್ಲಿದ್ದ ಶಾಸಕನ ಬೆಂಬಲಿಗರು ಅಮಾಯಕ ಮತದಾರನಿಗೆ ಹಿಗ್ಗಾಮುಗ್ಗ ಹಲ್ಲೆ ನಡೆಸಿದ್ದಾರೆ.
ಈ ಸುದ್ದಿಓದಿದ್ದೀರಾ? ಈ ದಿನ ಸಂಪಾದಕೀಯ | ಅರವಿಂದ್ ಕೇಜ್ರಿವಾಲ್ ಆಗಮನ ಮೋದಿ ನಿರ್ಗಮನದ ಸೂಚಕವೇ?
ಕೀಳು ಸಂಸ್ಕೃತಿಯನ್ನು ಪ್ರದರ್ಶಿಸಿದ ಶಾಸಕನ ವರ್ತನೆಗೆ ಎಲ್ಲಡೆ ಆಕ್ರೋಶ ವ್ಯಕ್ತವಾಗಿದ್ದು, ಎಲ್ಲರಿಗೂ ಮಾದರಿಯಾಗಬೇಕಿದ್ದ ಜನಪ್ರತಿನಿಧಿಯೇ ಹೀಗೆ ಮಾಡಿದರೆ ಹೇಗೆ ಎಂದು ಅವರ ನಡೆಯನ್ನು ಖಂಡಿಸಿದ್ದಾರೆ.
ಆಂಧ್ರ ಪ್ರದೇಶದಲ್ಲಿ ಇಂದು ಲೋಕಸಭೆಯ 25 ಕ್ಷೇತ್ರಗಳು ಹಾಗೂ ವಿಧಾನಸಭೆಯ 175 ಕ್ಷೇತ್ರಗಳಿಗೆ ಒಟ್ಟಿಗೆ ಚುನಾವಣೆ ನಡೆಯುತ್ತಿದೆ. ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರತಿಪಕ್ಷ ಟಿಡಿಪಿ ಹಾಗೂ ಕಾಂಗ್ರೆಸ್ ಸ್ಪರ್ಧೆ ನಡೆಸುತ್ತಿದೆ.
ತೆಲಂಗಾಣದಲ್ಲಿ ಕೂಡ ಇಂದೇ ಚುನಾವಣೆ ನಡೆಯುತ್ತಿದ್ದು, 17 ಲೋಕಸಭಾ ಕ್ಷೇತ್ರಗಳಿಗೂ ರಾಜ್ಯದ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
Tenali @YSRCParty MLA & candidate Annabattuni Siva Kumar slaps a voter in the queue line in Tenali #AndhraPradeshElections2024 #Andhra #AndhraPradesh #AndhraPolitics #AndhraElections @DeccanHerald pic.twitter.com/XM3R8W87Yh
— SNV Sudhir (@sudhirjourno) May 13, 2024
