‘ನೊಬೆಲ್’ ಪುರಸ್ಕೃತೆಗೆ ಶುಭಾಷಯ ಕೋರದ ಮೋದಿ ಸರ್ಕಾರ; ‘ಕ್ಷುದ್ರ ಆಡಳಿತ’ ಎಂದು ತರೂರ್ ವಾಗ್ದಾಳಿ

Date:

ಈ ವರ್ಷದ ಪ್ರತಿಷ್ಠಿತ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಭಾಜನರಾಗಿರುವ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಹಿರಿಯ ವಕೀಲೆ, ಮಾನವ ಹಕ್ಕುಗಳ ಹೋರಾಟಗಾರ್ತಿ ನವನೆಥಮ್ ನವಿ ಪಿಳ್ಳೈ ಅವರಿಗೆ ಕೇಂದ್ರ ಸರ್ಕಾರವು ಇದುವರೆಗೂ ಯಾವುದೇ ಅಭಿನಂದನೆ ಸಲ್ಲಿಸಿಲ್ಲ. ಸರ್ಕಾರದ ಈ ಧೋರಣೆಯನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಕಟುವಾಗಿ ಖಂಡಿಸಿದ್ದಾರೆ. ಕೇಂದ್ರ ಸರ್ಕಾರದ ಈ ಮೌನ ‘ಖಂಡನೀಯ’, ಇದು ಅಧಿಕಾರದಲ್ಲಿರುವವರ ‘ಕ್ಷುದ್ರ ಮನಸ್ಥಿತಿ’ಯನ್ನು ಎತ್ತಿತೋರುತ್ತದೆ ಎಂದು ಕಿಡಿಕಾರಿದ್ದಾರೆ.

- Advertisement -

ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್‌ ಮಾಡಿರುವ ಶಶಿ ತರೂರ್, “ಭಾರತೀಯ ಮೂಲದ ಈ ಅಸಾಧಾರಣ ಮಹಿಳೆ ನೊಬೆಲ್ ಶಾಂತಿ ಪುರಸ್ಕಾರ ಗೆದ್ದು ಆರು ದಿನಗಳು ಕಳೆದಿವೆ. ಆದರೆ, ಅವರ ಪೂರ್ವಜರ ಮಾತೃಭೂಮಿಯಾಗಿರುವ ಭಾರತದ ಸರ್ಕಾರವು ಅವರಿಗೆ ಕನಿಷ್ಠ ಅಭಿನಂದನೆಯನ್ನೂ ತಿಳಿಸಿಲ್ಲ. ಇಂತಹ ದಾರ್ಷ್ಟ್ಯ ನಿರ್ಧಾರವನ್ನು ತೆಗೆದುಕೊಂಡಿರುವ ಕ್ಷುದ್ರ ಮನಸ್ಥಿತಿಯ ನಾಯಕರಿಗೆ ನಾಚಿಕೆಯಾಗಬೇಕು” ಎಂದು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಿಯಾಂಡ್ ಬೆಂಗಳೂರು: ಡಿಜಿಟಲ್ ಆರ್ಥಿಕತೆಯಲ್ಲಿ ರಾಯಚೂರಿಗೆ ಸಿಗುವುದೇ ಪ್ರತ್ಯೇಕ...

ಕರ್ನಾಟಕದ ಅಭಿವೃದ್ಧಿ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ರಾಜ್ಯದ ವಿವಿಧ ನಗರಗಳಿಗೂ ತಲುಪಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ‘Beyond Bengaluru’ ಯೋಜನೆಯನ್ನು ಜಾರಿಗೊಳಿಸಿದೆ. ಐಟಿ, ಐಟಿಇಎಸ್,...

ರಾಯಚೂರು | ಸ್ಥಳೀಯ ಸಂಸ್ಥೆ ಚುನಾವಣೆ: ಆಕಾಂಕ್ಷಿಗಳ ಲೆಕ್ಕಾಚಾರ...

ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ ಪ್ರಕಟವಾಗುತ್ತಿದ್ದಂತೆ ರಾಯಚೂರು ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮೀಸಲಾತಿ ಬದಲಾವಣೆಯಿಂದ ಕೆಲವರ ಸ್ಪರ್ಧೆಯ ಲೆಕ್ಕಾಚಾರ ತಲೆಕೆಳಗಾಗಿದ್ದರೆ, ಮತ್ತೊಂದೆಡೆ...

ಹೊಸ ಓದು | ನಟರಾಜ್ ಹುಳಿಯಾರ್ ಅವರ ‘ಡಾಕ್ಟರ್...

ಇತ್ತೀಚೆಗೆ ಲೋಕಾರ್ಪಣೆಗೊಂಡ ನಟರಾಜ್ ಹುಳಿಯಾರ್ ಅವರ 'ಡಾಕ್ಟರ್ ಸಾಹೇಬ್- ರಾಮಮನೋಹರ ಲೋಹಿಯಾ ಜೀವನಯಾನ' ಕೃತಿಯಿಂದ ಆಯ್ದ 'ಲೋಹಿಯಾ ಮತ್ತು ಕರ್ನಾಟಕ' ಅಧ್ಯಾಯ, ಭಾನುವಾರದ ವಿರಾಮದ ಓದಿಗಾಗಿ... 'ಮಾರ್ಕ್ಸ್, ಗಾಂಧಿ ಅಂಡ್ ಸೋಷಲಿಸಂ' ಪುಸ್ತಕಕ್ಕೆ ಮುನ್ನುಡಿ...

ತಮ್ಮ ಪೋಸ್ಟ್‌ನಲ್ಲಿ ನವಿ ಪಿಳ್ಳೈ ಅವರ ಸಾಧನೆ ಮತ್ತು ಅವರು ಎದುರಿಸಿದ ಕಠಿಣ ಸವಾಲುಗಳನ್ನು ಬಿಂಬಿಸುವ ವೀಡಿಯೊ ಒಂದನ್ನೂ ಅವರು ಹಂಚಿಕೊಂಡಿದ್ದಾರೆ.

ನವಿ ಪಿಳ್ಳೈ ಅವರ ಪೂರ್ವಜರು ಸುಮಾರು 130 ವರ್ಷಗಳ ಹಿಂದೆ ಭಾರತದ ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಿಂದ ಶ್ರೀಲಂಕಾಕ್ಕೆ ತೆರಳಿ, ತದನಂತರ ದಕ್ಷಿಣ ಆಫ್ರಿಕಾಗೆ ವಲಸೆ ಹೋಗಿದ್ದರು. 1941ರಲ್ಲಿ ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ಬಡತನ ಮತ್ತು ವರ್ಣಭೇದ ನೀತಿಯ ಭೀಕರ ಪರಿಸ್ಥಿತಿಯಲ್ಲಿ ಬೆಳೆದ ಪಿಳ್ಳೈ, ಸಂಘಟನೆಗಳ ನೆರವಿನಿಂದ ಶಿಕ್ಷಣ ಪೂರೈಸಿ ಕಾನೂನು ಪದವಿ ಪಡೆದರು. ಕಪ್ಪು ವರ್ಣೀಯರಾಗಿದ್ದ ಕಾರಣಕ್ಕಾಗಿ ಅಲ್ಲಿನ ನ್ಯಾಯಾಲಯದ ನ್ಯಾಯಾಧೀಶರ ಕೊಠಡಿಯನ್ನು ಪ್ರವೇಶಿಸಲೂ ಅವರಿಗೆ ಅವಕಾಶವಿರಲಿಲ್ಲ. ಆದರೂ ಧೃತಿಗೆಡದೆ 1967ರಲ್ಲಿ ಸ್ವಂತ ವಕೀಲ ವೃತ್ತಿ ಆರಂಭಿಸಿದ ಅವರು, ನೆಲ್ಸನ್ ಮಂಡೇಲಾ ಸೇರಿದಂತೆ ಅನೇಕ ರಾಜಕೀಯ ಬಂಧಿಗಳ ಪರವಾಗಿ ಹೋರಾಡಿದರು. ನಂತರ 1995ರಲ್ಲಿ ಮಂಡೇಲಾ ಅವರ ಆಡಳಿತಾವಧಿಯಲ್ಲಿ ದಕ್ಷಿಣ ಆಫ್ರಿಕಾದ ಉಚ್ಚ ನ್ಯಾಯಾಲಯದ ಪ್ರಥಮ ಶ್ವೇತವರ್ಣೀಯೇತರ ಮಹಿಳಾ ನ್ಯಾಯಾಧೀಶೆಯಾಗಿ ನಿಯೋಜನೆಗೊಂಡರು.

ತದನಂತರ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಆಗಿ ಮತ್ತು ರವಾಂಡ ಅಂತರರಾಷ್ಟ್ರೀಯ ಕ್ರಿಮಿನಲ್ ಟ್ರಿಬ್ಯೂನಲ್‌ನಲ್ಲಿ ಸೇವೆ ಸಲ್ಲಿಸಿದ ಅವರು, ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಗಳನ್ನು ಜಿನೋಸೈಡ್ (ಜನಾಂಗೀಯ ಹತ್ಯೆ) ಎಂದು ಪರಿಗಣಿಸುವ ಐತಿಹಾಸಿಕ ತೀರ್ಪು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಅಂತಾರಾಷ್ಟ್ರೀಯ ಕಾನೂನು ಮತ್ತು ಶಾಂತಿಗಾಗಿ ಅವರು ನೀಡಿದ ಜೀವಮಾನದ ಕೊಡುಗೆಯನ್ನು ಗೌರವಿಸಿ ನಾರ್ವೇಜಿಯನ್ ನೊಬೆಲ್ ಸಮಿತಿಯು ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ನೀಡಿ ಗೌರವಿಸಿದೆ.  ತಮಿಳುನಾಡಿನಲ್ಲಿರುವ ಅವರ ಸಂಬಂಧಿಕರು ಈ ಪ್ರಶಸ್ತಿಗಾಗಿ ಸಂಭ್ರಮ ಆಚರಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಇಸಿ ರಾಜೀನಾಮೆ ಕೋರಿ ಪ್ರತಿಭಟನೆ ನಡೆಸಿದವರ ಮೇಲೆ ಹಲ್ಲೆ: 10 ಎಫ್‌ಐಆರ್ ದಾಖಲು, ಐವರ ಬಂಧನ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣೆ ಆಯುಕ್ತರ (ಸಿಇಸಿ) ಗ್ಯಾನೇಶ್ ಕುಮಾರ್...

ಸೌರವ್ ದಾಸ್, ಆಶುತೋಷ್ ರಾಂಕಾ ಬಿಡುಗಡೆಯಲ್ಲಿ ವಿಳಂಬ; 4 ಶ್ಯೂರಿಟಿ ಬಾಂಡ್ ತಿರಸ್ಕಾರ: ಸಿಜೆಪಿ ಆರೋಪ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರಮುಖ ನಾಯಕರಾದ ಸೌರವ್ ದಾಸ್ ಮತ್ತು...

ಶಿವಮೊಗ್ಗ | ಡಿವಿಎಸ್ ಕಾಲೇಜಿನ ಆಂತರಿಕ ಚುನಾವಣೆಯಲ್ಲಿ NSUI ಬೆಂಬಲಿತ ಅಭ್ಯರ್ಥಿಗಳಿಗೆ ಜಯ

ಶಿವಮೊಗ್ಗ, ಡಿವಿಎಸ್ ಕಾಲೇಜಿನ ಆಂತರಿಕ ಚುನಾವಣೆಯಲ್ಲಿ NSUI ಬೆಂಬಲಿತ ಅಭ್ಯರ್ಥಿಗಳು ಜಯಶಾಲಿಯಾಗಿದ್ದು,...

ಯಾದಗಿರಿ | ಭೂರಹಿತ ದಲಿತ ಕುಟುಂಬಗಳಿಗೆ ಭೂಮಿ, ನಿವೇಶನಕ್ಕಾಗಿ ಸಮತಾ ಸೈನಿಕ ದಳ ಆಗ್ರಹ

ಶಹಾಪುರ ತಾಲೂಕಿನ ವಿವಿಧ ಗ್ರಾಮಗಳ ಭೂರಹಿತ ದಲಿತ ಕುಟುಂಬಗಳಿಗೆ ಭೂಮಿ, ನಿವೇಶನ...