ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ನೆಟ್ಟಿಗರ ಪ್ರಶ್ನೆಗಳಿಗೆ ಯಾವುದೇ ಮುಲಾಜಿಲ್ಲದೆ ಉತ್ತರ ನೀಡುತ್ತಿದ್ದ, ಭಾರತೀಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದ ‘ಗ್ರೋಕ್’ ಚಾಟ್‌ಬಾಟ್ ವಿರುದ್ಧ ಕ್ರಮ ಕೈಗೊಳ್ಳಲು ಮೋದಿ ಸರ್ಕಾರ ಮುಂದಾಗಿದೆ ಎಂದು ವರದಿಯಾಗಿದೆ.
ಇತ್ತೀಚೆಗೆ, ‘ಎಕ್ಸ್’ನ ಮಾಲೀಕ ಎಲಾನ್ ಮಸ್ಕ್ ಅವರು ಎಕ್ಸ್‌ನಲ್ಲಿ ಎಐ ಚಾಚ್‌ಬಾಟ್ ಗ್ರೋಕ್-3ಅನ್ನು ಬಿಡುಗಡೆ ಮಾಡಿದ್ದಾರೆ. ಅತ್ಯಂತ ಸ್ಮಾರ್ಟ್ ಎಐ ಆಗಿರುವ ಗ್ರೋಕ್3 – ಚಾಟ್ ಜಿಪಿಟಿ, ಗೂಗಲ್ ಜೆಮಿನಿ ಹಾಗೂ ಡೀಪ್ ಸೀಕ್‌ಗೆ ಸೆಡ್ಡು ಹೊಡೆಯುತ್ತಿದೆ. ಮೋದಿ ಸರ್ಕಾರದ ಕುರಿತಾದ ಹಲವಾರು ಪ್ರಶ್ನೆಗಳಿಗೆ ನಿಖರವಾಗಿ ಉತ್ತರ ನೀಡುತ್ತಿದೆ. ಬಿಜೆಪಿ-ಸಂಘಪರಿವಾರ ಹಾಗೂ ಗೋದಿ ಮಾಧ್ಯಮಗಳು ಹರಿಬಿಟ್ಟಿದ್ದ ಸುಳ್ಳುಗಳ ಕುರಿತಾಗಿ ಸತ್ಯಾಂಶಗಳನ್ನು ತಿಳಿಸುತ್ತಿದೆ. ಹೀಗಾಗಿ, ಗ್ರೋಕ್ ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ ಎಂದು ಹೇಳಲಾಗುತ್ತಿದೆ.
ಈ ವರದಿ ಓದಿದ್ದೀರಾ?: ಸತ್ಯ ನುಡಿಯುತ್ತಿರುವ GROK ಬ್ಯಾನ್ ಮಾಡುತ್ತಾರಾ ಮೋದಿ?
ನೆಟ್ಟಿಗರು ಕೇಳುವ ಪ್ರಶ್ನೆಗಳಿಗೆ ‘ಗ್ರೋಕ್’ ಪ್ರಚೋದನಾಕಾರಿಯಾಗಿ ಉತ್ತರ ನೀಡುತ್ತಿದೆ ಎಂದು ಆರೋಪಿಸಲಾಗಿದೆ. ‘ಗ್ರೋಕ್’ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಭಾರತದ ಕಾನೂನಿಗೆ ಅನುಗುಣವಾಗಿ ಎಕ್ಸ್ ತನ್ನ ವಿಷಯವನ್ನು ತೆಗೆದು ಹಾಕುವಂತೆ ಸೂಚನೆ ನೀಡಿದೆ ಎಂದು ‘TOI’ ವರದಿ ಮಾಡಿದೆ.