ಟ್ರಂಪ್ ಮೇಲಿನ ಮೋದಿ ಪ್ರೀತಿ: ಭಾರತದ ಜಾಗತಿಕ ಸ್ಥಾನಮಾನ ಕುಸಿತಕ್ಕೆ ನಾಂದಿ?

Date:

Advertisements

ಈಗಾಗಲೇ ಟ್ರಂಪ್ ಅವರನ್ನು ಭೇಟಿ ಮಾಡಿರುವ ಎರಡು ರಾಷ್ಟ್ರಗಳ ಪ್ರಧಾನಿಗಳು ಟ್ರಂಪ್‌ ಎದುರು ಕೆಲವು ಬೇಡಿಕೆ ಮುಂದಿಟ್ಟಿದ್ದಾರೆ. ಮೋದಿಗೂ ಮುನ್ನ ಟ್ರಂಪ್‌ ಅವರನ್ನು ಭೇಟಿ ಮಾಡಿರುವ ಇಬ್ಬರಲ್ಲಿ ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಒಬ್ಬರು. ನೆತನ್ಯಾಹು ಅಮೆರಿಕದ ಸಹಾಯದಿಂದ ಅಸ್ತಿತ್ವಕ್ಕೆ ಬಂದ ದೇಶ ಇಸ್ರೇಲನ್ನು ಆಳುತ್ತಿರುವವರು. ಎರಡನೇ ನಾಯಕ ಜಪಾನ್‌ ಪ್ರಧಾನಿ ಶಿಗೇರು ಇಶಿಬಾ. ಸದ್ಯ, ಶಿಗೇರು ಅವರ ಪ್ರಧಾನಿ ಹುದ್ದೆ ಸಂಕಷ್ಟದಲ್ಲಿದೆ.

ಅಮೆರಿಕದಲ್ಲಿ ಡೊನಾಲ್ಡ್‌ ಟ್ರಂಪ್ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ, ಇಡೀ ಜಗತ್ತನ್ನೇ ತಲ್ಲಣಗೊಳಿಸುವ ನೀತಿ-ನಿರ್ಧಾರಗಳನ್ನು ಜಾರಿಗೊಳಿಸುತ್ತಿದ್ದಾರೆ. ಅಂತಹ ನೀತಿಗಳಲ್ಲಿ ಹುಟ್ಟಿನಿಂದ ಪಡೆಯುವ ಪೌರತ್ವಕ್ಕೆ ಕೊಕ್ಕೆ ಮತ್ತು ಅಕ್ರಮ ವಲಸಿಗರನ್ನು ಹೊರದಬ್ಬುವುದು ಪ್ರಮುಖವಾದವು. ಭಾರತದ 18,000 ಅಕ್ರಮ ವಲಸಿಗರನ್ನು ಅಮೆರಿಕದಿಂದ ಹೊರಹಾಕಲು ಟ್ರಂಪ್ ಮುಂದಾಗಿದ್ದಾರೆ. ಈಗಾಗಲೇ, 240 ಮಂದಿಯನ್ನು ಅಪರಾಧಿಗಳಂತೆ ಕೈ-ಕಾಲುಗಳಿಗೆ ಕೋಳ ಹಾಕಿ, ಮಿಲಿಟರಿ ವಿಮಾನದಲ್ಲಿ ಭಾರತಕ್ಕೆ ರವಾನಿಸಿದ್ದಾರೆ. ಅಮೆರಿಕದ ಈ ಧೋರಣೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಆದಾಗ್ಯೂ, ಭಾರತೀಯರನ್ನು ಅಪರಾಧಿಗಳಂತೆ ನಡೆಸಿಕೊಂಡ ಟ್ರಂಪ್ ವಿರುದ್ಧ ಪ್ರಧಾನಿ ಮೋದಿ ತುಟಿಬಿಚ್ಚಿಲ್ಲ. ಆಕ್ಷೇಪ-ಅಸಮಾಧಾನ ವ್ಯಕ್ತಪಡಿಸಿಲ್ಲ.

ಇದೀಗ, ಈ ವಾರ, ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಗೆ ಭೇಟಿ ನೀಡಲಿದ್ದಾರೆ. ಮೋದಿ ಅಮೆರಿಕ ಭೇಟಿಯನ್ನು ಎರಡು ರೀತಿಯಲ್ಲಿ ನೋಡಲಾಗುತ್ತಿದೆ.
1. ಹೊಸದಾಗಿ ನೇಮಕಗೊಂಡ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆತಿಥ್ಯ ವಹಿಸಲಿರುವ ಮೊದಲ ಮೂರು ಸರ್ಕಾರಿ ಮುಖ್ಯಸ್ಥರಲ್ಲಿ ಮೋದಿ ಕೂಡ ಒಬ್ಬರು. ಇದು ಅಮೆರಿಕ ಮತ್ತು ಭಾರತದ ನಡುವಿನ ಸ್ನೇಹದ ಸಂಕೇತ ಮಾತ್ರವಲ್ಲದೆ ಟ್ರಂಪ್ ಮತ್ತು ಮೋದಿ ನಡುವಿನ ವೈಯಕ್ತಿಕ ದೋಸ್ತಿಯ ಸಂಕೇತ.  ಪ್ರಸ್ತುತ, ಅಮೆರಿಕಕ್ಕೆ ಭಾರತ – ಭಾರತಕ್ಕೆ ಅಮೆರಿಕ ಮುಖ್ಯವೆಂದು ಹೇಳಲಾಗುತ್ತಿದೆ.
2. ಇಬ್ಬರು ಒಂದೇ ರೀತಿಯ ಮನಸ್ಥಿತಿ ಉಳ್ಳವರು. ಅದರಲ್ಲೂ, ಜಗತ್ತಿನ ಎಲ್ಲರೂ ತಮ್ಮ ಅಧೀನದಲ್ಲಿರಬೇಕೆಂದು ಬಯಸುವ ಟ್ರಂಪ್‌ ಭಾರತವನ್ನೂ ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಿದ್ದಾರೆಯೇ? ಮೋದಿ ಅದಕ್ಕೆ ಸಹಕರಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗಳೂ ಇವೆ.

Advertisements

ಈಗಾಗಲೇ ಟ್ರಂಪ್ ಅವರನ್ನು ಭೇಟಿ ಮಾಡಿರುವ ಎರಡು ರಾಷ್ಟ್ರಗಳ ಪ್ರಧಾನಿಗಳು ಟ್ರಂಪ್‌ ಎದುರು ಕೆಲವು ಬೇಡಿಕೆ ಮುಂದಿಟ್ಟಿದ್ದಾರೆ. ಮೋದಿಗೂ ಮುನ್ನ ಟ್ರಂಪ್‌ ಅವರನ್ನು ಭೇಟಿ ಮಾಡಿರುವ ಇಬ್ಬರಲ್ಲಿ ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಒಬ್ಬರು. ನೆತನ್ಯಾಹು ಅಮೆರಿಕದ ಸಹಾಯದಿಂದ ಅಸ್ತಿತ್ವಕ್ಕೆ ಬಂದ ದೇಶವನ್ನು (ಇಸ್ರೇಲ್‌) ಆಳುತ್ತಿರುವವರು. ಅಮೆರಿಕದ ಸಹಾಯದಿಂದ ತನ್ನ ನೆರೆಹೊರೆಯವರೊಂದಿಗೆ ಅನೇಕ ಯುದ್ಧಗಳನ್ನು ಮಾಡಿ, ಬದುಕುಳಿದಿದ್ದಾರೆ. ಈಗ, ಗಾಜಾ ಪಟ್ಟಿಯನ್ನು ಅಮೆರಿಕ ಸಹಾಯದಿಂದ ವಶಕ್ಕೆ ಪಡೆದು, ಅದನ್ನು ಕಡಲ ಪ್ರವಾಸೋದ್ಯಮ ಮತ್ತು ರಿಯಲ್ ಎಸ್ಟೇಲ್ ಪ್ರದೇಶ ಮಾಡಿ, ಲಾಭ ಮಾಡಿಕೊಳ್ಳಲು ಮುಂದಾಗಿದ್ದಾರೆ.

ಟ್ರಂಪ್‌ ಭೇಟಿಯಾದ ಎರಡನೇ ನಾಯಕ ಜಪಾನ್‌ ಪ್ರಧಾನಿ ಶಿಗೇರು ಇಶಿಬಾ. ಸದ್ಯ, ಶಿಗೇರು ಅವರ ಪ್ರಧಾನಿ ಹುದ್ದೆ ಸಂಕಷ್ಟದಲ್ಲಿದೆ. ಯಾವಾಗ ಬೇಕಿದ್ದರೂ, ಅವರ ಸರ್ಕಾರ ಉರುಳುವ ಆತಂಕದಲ್ಲಿದೆ. ಜಪಾನ್‌ನಲ್ಲಿ ತಮ್ಮ ರಾಜಕೀಯ ನೆಲೆ ಮತ್ತು ಸರ್ಕಾರವನ್ನು ಉಳಿಸಿಕೊಳ್ಳಲು ಜಪಾನ್‌ಗೆ ಟ್ರಂಪ್‌ ಬರಬೇಕೆಂದು ಇಶಿಬಾ ಬಯಸುತ್ತಿದ್ದಾರೆ.

ಜೊತೆಗೆ, ಟ್ರಂಪ್‌ ತಮ್ಮ ಪ್ರಮಾಣವಚನ ಕಾರ್ಯಕ್ರಮಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರನ್ನು ಆಹ್ವಾನಿಸಿದ್ದರಿಂದ ಇಶಿಬಾ ಮತ್ತಷ್ಟು ಆತಂಕಕ್ಕೊಗಾಗಿದ್ದರು. ಚೀನಾದೊಂದಿಗೆ ಅಮೆರಿಕ ಒಪ್ಪಂದ ಮಾಡಿಕೊಂಡು, ಜಪಾನ್‌ ಸಂಬಂಧವನ್ನು ಬಿಟ್ಟುಬಿಡುತ್ತಯೇ ಎಂಬ ಕಳವಳ ಇಶಿಬಾ ಅವರಲ್ಲಿತ್ತು. ಆದಾಗ್ಯೂ, ಟ್ರಂಪ್ ಆಹ್ವಾನವನ್ನು ಕ್ಸಿ ಜಿನ್‌ಪಿಂಗ್ ತಿರಸ್ಕರಿಸಿದರು. ಇದರಿಂದ, ನಿಟ್ಟುಸಿರು ಬಿಟ್ಟವರಲ್ಲಿ ಇಶಿಬಾ ಕೂಡ ಒಬ್ಬರು.

ಮೋದಿಗಿಂತ ಮೊದಲೇ ಟ್ರಂಪ್‌ ಅವರನ್ನು ಭೇಟಿ ಯಾಗಿರುವ ನೆತನ್ಯಾಹು ಮತ್ತು ಇಶಿಬಾ ಅವರ ಇಸ್ರೇಲ್‌ ಮತ್ತು ಜಪಾನ್‌ಗೆ ಹೋಲಿಸಿದರೆ, ಭಾರತದ ಪರಿಸ್ಥಿತಿ ಭಿನ್ನವಾಗಿದೆ. ಇಸ್ರೇಲ್ ಮತ್ತು ಜಪಾನ್ ಎರಡೂ ಟ್ರಂಪ್ ಬಗ್ಗೆ ಆತಂಕಗೊಳ್ಳಲು ಕಾರಣಗಳಿವೆ. ಅವರ ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣೆಯು ಅಮೆರಿಕ ಜೊತೆಗಿನ ಉತ್ತಮ ಸಂಬಂಧವನ್ನು ಅವಲಂಬಿಸಿದೆ. ಹೀಗಾಗಿ, ಆ ಇಬ್ಬರೂ ನಾಯಕರು ತಮ್ಮ ಆತಂಕ ಮತ್ತು ಬೇಡಿಕೆಗಳನ್ನು ಟ್ರಂಪ್‌ ಮುಂದಿಡಲು ಧಾವಂತದಲ್ಲಿದ್ದರು. ಆದರೆ, ಭಾರತವು ಪ್ರತ್ಯೇಕ ಮತ್ತು ಸ್ವತಂತ್ರ ಶಕ್ತಿಯಾಗಿ ಹಿಂದಿನಿಂದಲೂ ಗುರುತಿಸಿಕೊಂಡಿದೆ.  ‌

ನೆತನ್ಯಾಹು ಮತ್ತು ಟ್ರಂಪ್
ಟ್ರಂಪ್‌ ಜೊತೆ ನೆತನ್ಯಾಹು

ಅದರಲ್ಲೂ, ಮೋದಿ ಆಡಳಿತದಲ್ಲಿ ಭಾರತವನ್ನು ‘ವಿಶ್ವಗುರು’ ಎಂದು ಬಿಜೆಪಿಗರು ಅಬ್ಬರದ ಪ್ರಚಾರ ಮಾಡಿದ್ದಾರೆ. ಹಾಗೆಯೇ ಬಿಂಬಿಸಿದ್ದಾರೆ. ಭಾರತವು ‘ತನ್ನದೇ ಮಾರ್ಗ’ದಲ್ಲಿ ನಡೆಯುತ್ತದೆ ಮತ್ತು ಮಾತನಾಡುತ್ತದೆ ಎಂದು ಹೇಳಲಾಗುತ್ತಿದೆ.

ವಿಶ್ವಗುರುವನ್ನು ಬದಿಗೊತ್ತಿದರೂ, ಮೋದಿ ಆಡಳಿತಕ್ಕೆ ಹಿಂದೆಯೂ, ಕಾಲಕಾಲಕ್ಕೆ ತನ್ನ ಪ್ರಾದೇಶಿಕ ಸಮಗ್ರತೆಯ ರಕ್ಷಣೆಗೋಸ್ಕರ ಮಿಲಿಟರಿ ಬೆಂಬಲಕ್ಕಾಗಿ ಭಾರತವು ಇತರ ರಾಷ್ಟ್ರಗಳ ಸಹಾಯ ಪಡೆದಿದ್ದರೂ, ಭಾರತ ತನ್ನ ‘ಕಾರ್ಯತಂತ್ರದ ಸ್ವಾಯತ್ತತೆ’ಯನ್ನು ಉಳಿಸಿಕೊಂಡಿದೆ. ಇಸ್ರೇಲ್‌ನಂತೆ ಭಾರತವನ್ನು ಆಕ್ರಮಣ ಮತ್ತು ಯುದ್ಧದಿಂದ ರಚಿಸಲಾಗಿಲ್ಲ. ಭಾರತವು ಸಾಮ್ರಾಜ್ಯಶಾಹಿ ವಿರೋಧಿ ಮತ್ತು ವಸಾಹತುಶಾಹಿ ವಿರೋಧಿ ಜಾಗತಿಕ ಸಂಕೇತವಾಗಿ ಹೊರಹೊಮ್ಮುವ ಮೂಲಕ ವಸಾಹತುಶಾಹಿಯಿಂದ ಸ್ವಾತಂತ್ರ್ಯವನ್ನು ಪಡೆದು ರಚನೆಯಾದ ನಾಗರಿಕ ರಾಷ್ಟ್ರ. ಆದರೆ, ಅಧ್ಯಕ್ಷ ಟ್ರಂಪ್ ಮತ್ತು ಅವರ ಸರ್ವಾಧಿಕಾರಿ ಆಡಳಿತವನ್ನು ಎದುರಿಸುವಾಗ ಮೋದಿ ಆಡಳಿತದಲ್ಲಿ ಕೆಲವು ಕಳವಳಗಳು ವ್ಯಕ್ತವಾಗುತ್ತಿವೆ.

ಭಾರತವು ಅಮೆರಿಕದೊಂದಿಗೆ ಸ್ಥಿರ ಮತ್ತು ಉತ್ತಮ ಸಂಬಂಧಗಳನ್ನು ಬಯಸುತ್ತಿದೆ. ಚೀನಾದ ತ್ವರಿತ ಬೆಳವಣಿಕೆಯನ್ನು ನಿಭಾಯಿಸಲು ಏಷ್ಯಾದೊಳಗೆ ಅಧಿಕಾರದ ಸಮತೋಲನವನ್ನು ಕಾಪಾಡಿಕೊಳ್ಳಬೇಕು ಎಂಬುದು ಭಾರತದ ಬಯಕೆ. ಹೀಗಾಗಿ, ಅಮೆರಿಕ-ಭಾರತ ಪಾಲುದಾರಿಕೆಯು ಬೆಳೆಯುತ್ತಿರುವ ಚೀನಾದ ಶಕ್ತಿಯನ್ನು ನಿಭಾಯಿಸಲು ಎರಡೂ ದೇಶಗಳಿಗೆ ಅನುವು ಮಾಡಿಕೊಡುತ್ತದೆ.

ಆದರೆ, ಚೀನಾ ಅಧ್ಯಕ್ಷ ಜಿನ್‌ಪಿಂಗ್‌ ಅವರನ್ನು ಟ್ರಂಪ್ ಆಹ್ವಾನಿಸಿದ್ದರಿಂದ ಭಾರತದ ನಾಯಕತ್ವದಲ್ಲಿ ಆಂತಕವನ್ನು ಸೃಷ್ಟಿಸಿತ್ತು. ಅದನ್ನು ಭಾರತವು ಬಹಿರಂಗವಾಗಿ ವ್ಯಕ್ತಪಡಿಸಿತು. ಇದಕ್ಕೆ ಮುಖ್ಯಕಾರಣ, ಎರಡು ಪ್ರಬಲ ಜಾಗತಿಕ ಶಕ್ತಿಗಳು ಜಗತ್ತನ್ನು ವಿಭಜಿಸಿ ಆಳಲು ಮುಂದಾದರೆ, ಅದನ್ನು ತಡೆಯುವ ಸಾಮರ್ಥ್ಯ ಭಾರತಕ್ಕೆ ಇಲ್ಲ.

pm modi at namaste trump
ಭಾರತದಲ್ಲಿ ನಮಸ್ತೆ ಟ್ರಂಪ್‌ ಕಾರ್ಯಕ್ರಮದಲ್ಲಿ

ಸದ್ಯಕ್ಕೆ, ಚೀನಾ-ಅಮೆರಿಕ ವ್ಯವಹಾರ ಸಂಬಂಧಕ್ಕೆ ಕೆಲವು ಮಿತಿಗಳಿವೆ. ಯುಎಸ್-ಚೀನಾ ಸಂಘರ್ಷ ಮತ್ತು ಯುಎಸ್-ಚೀನಾ ಹೊಂದಾಣಿಕೆ ಎರಡನ್ನೂ ಭಾರತ ತನ್ನದೇ ಆದ ನಿಯಮಗಳ ಮೇಲೆ ಎದುರಿಸಬೇಕಾಗುತ್ತದೆ. ಹೀಗಾಗಿ, ಚೀನಾ-ಅಮೆರಿಕ ಸಂಬಂಧದ ಕುರಿತಾದ ಆತಂಕದೊಂದಿಗೆ ಅಮೆರಿಕಗೆ ಧಾವಿಸುತ್ತಿರುವ ಮೋದಿ ಅವರ ನಡೆಯು ಭಾರತದ ಆತಂಕವನ್ನು ಜಗತ್ತಿಗೆ ಬಹಿರಂಗ ಪಡಿಸುತ್ತಿದೆ.

ಈ ವರದಿ ಓದಿದ್ದೀರಾ?: ʼವಿಶ್ವಗುರುʼ ತನ್ನ ನಾಗರಿಕರನ್ನು ಕೈಕೋಳಗಳಲ್ಲಿ ಸ್ವಾಗತಿಸಿತು; ಕೊಲಂಬಿಯಾ ದೇಶ ʼರಾಷ್ಟ್ರಪತಿ ವಿಮಾನವನ್ನೇ ಕಳಿಸಿತು!

ಭಾರತಕ್ಕೆ ಚೀನಾ-ಅಮೆರಿಕ ಕುರಿತಾದ ಅಂತಕ ಒಂದರೆಡೆಯಾದರೆ, ಜಾಗತಿಕ ವ್ಯಾಪಾರ ಯುದ್ಧವನ್ನು ಪ್ರಾರಂಭಿಸುವ ಟ್ರಂಪ್‌ ಬೆದರಿಕೆ ಕುರಿತಾದ ಕಳವಳ ಮತ್ತೊಂದಡೆ ಎದುರಾಗಿದೆ. ಅಮೆರಿಕದೊಂದಿಗಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವು ಭಾರತದ ಒಟ್ಟಾರೆ ವ್ಯಾಪಾರ ಕೊರತೆಯಲ್ಲಿ ಯಾವುದೇ ವ್ಯತ್ಯಾಸ ಉಂಟುಮಾಡುವುದಿಲ್ಲ. ಆದರೆ, ಸರಕು ರಫ್ತಿನ ಮೇಲಿನ ಸುಂಕವನ್ನು ಹೆಚ್ಚಿಸುವ ಮೂಲಕ ಅಮೆರಿಕ ಭಾರತಕ್ಕೆ ಸಂಕಷ್ಟ ಸೃಷ್ಟಿಸಬಹುದು. ಆದರೂ, ಅಮೆರಿಕ ಕೂಡ ಇನ್ನೂ ಭಾರತದ ಸೇವಾ ರಫ್ತುಗಳನ್ನು ಅವಲಂಬಿಸಿದೆ. ಸೇವಾ ವ್ಯಾಪಾರದಲ್ಲಿನ ಸಂಬಂಧವು ದ್ವಿಮುಖವಾಗಿದ್ದು, ಎರಡೂ ರಾಷ್ಟ್ರಗಳಿಗೂ ಅಗತ್ಯವಾಗಿದೆ. ಜೊತೆಗೆ, ಟ್ರಂಪ್ ಜೊತೆಗಿರುವ ಅನೇಕ ಅಮೆರಿಕನ್ ಬಿಲಿಯನೇರ್‌ಗಳು ಭಾರತೀಯ ಪ್ರತಿಭೆಗಳ ಸೇವೆಗಳಿಂದ ಲಾಭ ಪಡೆಯುತ್ತಿದ್ದಾರೆ. ಹೀಗಾಗಿ, ಅಮೆರಿಕದಲ್ಲಿ ಭಾರತವು ಸಾಕಷ್ಟು ಲಾಬಿ ಮಾಡುವ ಶಕ್ತಿಯನ್ನು ಹೊಂದಿದೆ.

ಇದೆಲ್ಲದರ ನಡುವೆಯೂ, ಅಕ್ರಮವಾಗಿ ಅಮೆರಿಕಗೆ ಪ್ರವೇಶಿಸಿದ್ದ ಭಾರತೀಯರನ್ನು ಕೋಳಗಳನ್ನು ಹಾಕಿ ಅಪರಾಧಿಗಳಂತೆ ನಡೆಸಿಕೊಂಡದ್ದನ್ನು ತಡೆಯಲು ಭಾರತಕ್ಕೆ ಸಾಧ್ಯವಾಗಲಿಲ್ಲ. ಮಾತ್ರವಲ್ಲ, ಭಾರತವು ಅಂತಹ ಯತ್ನವನ್ನೂ ಮಾಡಲಿಲ್ಲ.

ಪ್ರಧಾನಿ ಮೋದಿ ಅವರು ಅಮೆರಿಕಗೆ ಭೇಟಿ ನೀಡುವುದಾಗಿ ಹೇಳಿದ್ದರೆ, ಮಾತುಕತೆಗೆ ಬರುವವರೆಗೂ ಕಾಯುವಂತೆ ಕೇಳಿದ್ದರೆ ಇಂತಹ ಅವಮಾನವನ್ನು ತಪ್ಪಿಸಬಹುದಿತ್ತು. ಆದರೆ, ಮೋದಿ ಅದನ್ನು ಮಾಡಲಿಲ್ಲ.

ಇಂತಹದೊಂದು ಕೃತ್ಯವನ್ನು ಅಮೆರಿಕ ಎಸಗಿದ ಮೇಲೂ, ಅದನ್ನು ಖಂಡಿಸದೆ, ಟ್ರಂಪ್ ಮೇಲಿನ ಪ್ರೀತಿಯನ್ನು ಪ್ರಧಾನಿ ಮೋದಿ ಬಹಿರಂಗವಾಗಿ ಘೋಷಿಸುವುದರಿಂದ ‘ವಿಶ್ವಗುರು’ ವಿಶ್ವಗುರುವಾಗಿ ಕಾಣಿಸುವುದಿಲ್ಲ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸದಸ್ಯತ್ವ ಕೊಡಬೇಕೆಂಬುದಕ್ಕೆ ಬೆಂಬಲ ನೀಡುತ್ತಿರುವ ರಾಷ್ಟ್ರಗಳಿಗೆ ಭಾರತವು ಗಟ್ಟಿ ದನಿಯಾಗಿ ಕಾಣಿಸುವುದಿಲ್ಲ. ನೆತನ್ಯಾಹು ಮತ್ತು ಇಶಿಬಾ ನಂತರ ಟ್ರಂಪ್ ಅವರನ್ನು ಭೇಟಿ ಮಾಡುತ್ತಿರುವ ಮೋದಿ ನಾಯಕತ್ವಕ್ಕೆ ಹೆಚ್ಚು ಮನ್ನಣೆ ದೊರೆಯುವುದು ಅನುಮಾನ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

Download Eedina App Android / iOS

X