ಅದಾನಿ ಕುರಿತ ನಮ್ಮ ಸಂಶೋಧನೆ ಬಗ್ಗೆ ಅತ್ಯಂತ ಹೆಮ್ಮೆಯಿದೆ: ಸೆಬಿಗೆ ಹಿಂಡನ್ಬರ್ಗ್ ಪ್ರತಿಕ್ರಿಯೆ

Date:

Advertisements

ಅದಾನಿ ಕಂಪನಿಗಳ ಬಗ್ಗೆ ಕಳೆದ ವರ್ಷ ಬಿಡುಗಡೆ ಮಾಡಲಾಗಿದ್ದ ಸಂಶೋಧನಾ ವರದಿಯ ಬಗ್ಗೆ ಭಾರತದ ಷೇರು ಮಾರುಕಟ್ಟೆ ನಿಯಂತ್ರಣ ಮಂಡಳಿ(ಸೆಬಿ) ನೀಡಿರುವ ಶೋಕಾಸ್‌ ನೋಟಿಸ್‌ಗೆ ಅಮೆರಿಕ ಮೂಲದ ಶಾರ್ಟ್‌ ಸೆಲ್ಲರ್ ಸಂಸ್ಥೆ ಹಿಂಡನ್‌ಬರ್ಗ್‌ ಪ್ರತಿಕ್ರಿಯೆ ನೀಡಿದೆ.

“ಅದಾನಿ ಕುರಿತ ನಮ್ಮ ಸಂಶೋಧನೆ ಬಗ್ಗೆ ಅತ್ಯಂತ ಹೆಮ್ಮೆಯಿದೆ” ಎಂದು ಸೆಬಿಗೆ ಹಿಂಡನ್‌ಬರ್ಗ್‌ ಪ್ರತಿಕ್ರಿಯೆ ನೀಡಿದೆ.

2023ರ ಜನವರಿಯಲ್ಲಿ ಅದಾನಿ ಸಮೂಹ ಕಂಪನಿಗಳ ಬಗ್ಗೆ ಸಂಶೋಧವಾ ವರದಿ ಬಿಡುಗಡೆ ಮಾಡಿದ್ದ ಹಿಂಡನ್‌ಬರ್ಗ್‌, ಅದಾನಿ ಕಂಪನಿಯು ಷೇರು ಮಾರುಕಟ್ಟೆಯನ್ನು ತಿರುಚಿದೆ ಹಾಗೂ ಲೆಕ್ಕಪತ್ರಗಳನ್ನು ವಂಚಿಸಿದೆ ಎಂದು ತಿಳಿಸಿತ್ತು.

ವರದಿ ಬಿಡುಗಡೆಯಾದ ನಂತರ ಆರೋಪಗಳನ್ನು ನಿರಾಕರಿಸಿದರೂ ಸಹ ಅದಾನಿ ಸಮೂಹದ ಷೇರು ಮಾರುಕಟ್ಟೆ 150 ಬಿಲಿಯನ್‌ ಡಾಲರ್‌ವರೆಗೆ ಕುಸಿದಿತ್ತು. ನಂತರ ಅದಾನಿ ಸಂಸ್ಥೆಗಳ ವಿರುದ್ಧ ಕೈಗೊಳ್ಳಲಾಗಿದ್ದ ತನಿಖೆಯು ಆಧಾರರಹಿತ ಎಂದು ಹೇಳಲಾಗಿತ್ತು.

ಈ ಸುದ್ದಿ ಓದಿದ್ದೀರಾ? ಮಾನನಷ್ಟ ಮೊಕದ್ದಮೆ | ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್‌ಗೆ 5 ತಿಂಗಳ ಜೈಲು ಶಿಕ್ಷೆ

46 ಪುಟಗಳ ಶೋಕಾಸ್‌ ನೋಟಿಸ್‌ಗೆ ಬ್ಲಾಗ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಹಿಂಡನ್‌ಬರ್ಗ್ ಇದೊಂದು ಅಸಂಬದ್ಧ ಎಂದು ತಿಳಿಸಿದೆ.

“ಪೂರ್ವ ನಿರ್ದೇಶಿತ ಉದ್ದೇಶವನ್ನು ಪೂರೈಸಲು ರೂಪಿಸಿರುವ ಇದನ್ನು ನಾವು ಅಸಂಬದ್ಧೆ ಎಂದು ಭಾವಿಸುತ್ತೇವೆ. ಭ್ರಷ್ಟಾಚಾರವನ್ನು ಬಯಲಿಗೆಳೆಯುವವರನ್ನು ಬೆದರಿಸಿ ಮೌನಗೊಳಿಸುವ ಪ್ರಯತ್ನ ಇದಾಗಿದೆ. ಭಾರತದ ಅತ್ಯಂತ ಪ್ರಬಲ ಸಂಸ್ಥೆಯೊಂದು ವಂಚನೆಯಸಗಿದೆ” ಎಂದು ಹಿಂಡನ್‌ಬರ್ಗ್‌ ಆರೋಪಿಸಿದೆ.

“ಇಂದಿಗೂ ಕೂಡ ಅದಾನಿ ಸಂಸ್ಥೆ ನಮ್ಮ ಸಂಸ್ಥೆ ಕೈಗೊಳ್ಳಲಾದ ವರದಿ ಅಥವಾ ಹಲವಾರು ಮಾಧ್ಯಮ ತನಿಖೆಗಳ ಬಗ್ಗೆ ನೇರವಾಗಿ ಸ್ಪಷ್ಟನೆ ನೀಡಿಲ್ಲ ಬದಲಿಗೆ ಆಧಾರರಹಿತ, ದಾರಿ ತಪ್ಪಿಸುವ ನಿರಾಕರಣೆ ನೀಡುತ್ತ ಬಂದಿದೆ” ಎಂದು ಹಿಂಡನ್‌ಬರ್ಗ್‌ ತಿಳಿಸಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಜಾತಿ ಧರ್ಮ ಭಾಷೆಗಳ ಸಂಘರ್ಷ ತಡೆಗೆ ಗಾಂಧೀಜಿ ದಾರಿ ಮುಖ್ಯ: ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ

ʼʼಜಾತಿ,ಧರ್ಮಗಳ, ಮಧ್ಯೆ, ಭಾಷೆ ಮತ್ತು ಪ್ರದೇಶಗಳ ಮಧ್ಯೆ ವೈಷಮ್ಯ ಮಾಡಿಕೊಂಡು ಸಂಘರ್ಷ...

ಒಳ ಮೀಸಲಾತಿ | ಎಐಸಿಸಿ ಹಸ್ತಕ್ಷೇಪಕ್ಕೆ ಹೆಚ್ಚಿದ ಆಗ್ರಹ, ದೆಹಲಿ ಬಿಡದಿರಲು ಅಲೆಮಾರಿ ಸಂಸತ್ತು ತೀರ್ಮಾನ

ಒಳ ಮೀಸಲಾತಿ ವಿತರಣೆಯಲ್ಲಿ ಕರ್ನಾಟಕದ ಅಸ್ಪೃಶ್ಯ ದಲಿತ ಅಲೆಮಾರಿ ಸಮುದಾಯಗಳಿಗೆ ಆಗಿರುವ...

RSSಅನ್ನು ‘ಸರ್ವಾಧಿಕಾರಿ ದೃಷ್ಟಿಕೋನ ಹೊಂದಿರುವ ಕೋಮುವಾದಿ ಸಂಸ್ಥೆ’ ಎಂದಿದ್ದರು ಗಾಂಧಿ

ಆರ್‌ಎಸ್‌ಎಸ್‌ ತನ್ನ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ. ಆರ್‌ಎಸ್‌ಎಸ್‌ಅನ್ನು ಹೊಗಳಿರುವ ಪ್ರಧಾನಿ ಮೋದಿ ಅವರು,...

Download Eedina App Android / iOS

X