ಪ್ರಧಾನಿ ನರೇಂದ್ರ ಮೋದಿ ಭೇಟಿಯ ಭದ್ರತೆಯ ಭಾಗವಾಗಿ ರಸ್ತೆಯುದ್ದಕ್ಕೂ ಕಟ್ಟಲಾಗಿದ್ದ ಹಗ್ಗಕ್ಕೆ ಸಿಲುಕಿ ಬೈಕ್ ಸವಾರನೊಬ್ಬ ಮೃತಪಟ್ಟ ಘಟನೆ ಕೇರಳ ದ ಕೊಚ್ಚಿಯಲ್ಲಿ ನಡೆದಿದೆ.
ಮೃತರನ್ನು ವಡುತಲ ನಿವಾಸಿ ಮನೋಜ್ ಉನ್ನಿ ಎಂದು ಗುರುತಿಸಲಾಗಿದ್ದು, ಘಟನೆಯು ಭಾನುವಾರ(ಏ.14) ರಾತ್ರಿ 10.30 ಗಂಟೆಗೆ ಸಂಭವಿಸಿದೆ.
ಹಗ್ಗಕ್ಕೆ ಸಿಲುಕಿ ಗಾಯಗೊಂಡಿದ್ದ ಉನ್ನಿಯನ್ನು ಪೊಲೀಸರು ಆಸ್ಪತ್ರೆಗೆ ಕರೆದೋಯ್ದರು ಬದುಕಿಸಲು ಸಾಧ್ಯವಾಗಲಿಲ್ಲ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಯಲಾಗುತ್ತಿರುವ ಸುಳ್ಳುಗಳು, ಬೆತ್ತಲಾಗುತ್ತಿರುವ ಬಿಜೆಪಿ
ರಸ್ತೆಯುದ್ದಕ್ಕೂ ಯಾವುದೇ ಎಚ್ಚರಿಕೆಯನ್ನು ನೀಡದೆ ಹಗ್ಗವನ್ನು ಕಟ್ಟಲಾಗಿದ್ದು, ಸಾರ್ವಜನಿಕರಿಗೆ ಹಾಗೂ ಬೈಕ್ ಸವಾರರಿಗೆ ರಾತ್ರಿಯಲ್ಲಿ ಹಗ್ಗವಿರುವುದನ್ನು ಪತ್ತೆಹಚ್ಚಲು ಕಷ್ಟವಾಗುತ್ತದೆ ಎಂದು ಉನ್ನಿಯ ಕುಟುಂಬಸ್ಥರು ತಿಳಿಸಿದ್ದಾರೆ.
ಪ್ರಧಾನಿ ಭೇಟಿಯ ಭದ್ರತೆ ಭಾಗವಾಗಿ ಹಗ್ಗಗಳನ್ನು ಕಟ್ಟಲಾಗಿದೆ.ಆದಾಗ್ಯೂ, ರಾತ್ರಿಯಲ್ಲಿ ಸಾರ್ವಜನಿಕರಿಗೆ ಗೋಚರಿಸುವ ಹಾಗೆ ರಿಬ್ಬನ್ ರೀತಿಯ ಯಾವುದೇ ವಸ್ತುಗಳನ್ನು ಕಟ್ಟಿಲ್ಲ” ಎಂದು ಮೃತನ ಸಂಬಂಧಿಕರೊಬ್ಬರು ಹೇಳಿದ್ದಾರೆ.
ಬಿಜೆಪಿಯ ಚುನಾವಣಾ ಪ್ರಚಾರದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಕೇರಳದ ಎರಡು ಸಾರ್ವಜನಿಕ ಸ್ಥಳ್ಗಗಳಲ್ಲಿ ಸಾರ್ವಜನಿಕ ಭಾಷಣ ಮಾಡಲಿದ್ದಾರೆ.
