ಮೇಲ್ಜಾತಿಗೆ ಸೇರಿದ ಕೆಲ ಪುಂಡರು ದಲಿತ ಯುವಕನೊಬ್ಬನನ್ನು ಅಮಾನುಷವಾಗಿ ಥಳಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ದಲಿತ ಯುವಕನೊಬ್ಬನ ಕತ್ತನ್ನು ಹಿಡಿದ ಮೇಲ್ಜಾತಿಯ ಯುವಕನೊಬ್ಬ “ಜೈ ಶ್ರೀರಾಮ್ ಮತ್ತು ಠಾಕೂರ್ ನಮ್ಮ ಅಪ್ಪ” ಎಂದು ಹೇಳುವಂತೆ ಹಲ್ಲೆ ನಡೆಸುವುದನ್ನು ಕಾಣಬಹುದು.
ಸಂತ್ರಸ್ತ ಸೂಚನೆಗಳನ್ನು ಅನುಸರಿಸುತ್ತಿದ್ದಂತೆ, ಆತನಿಗೆ ಕಪಾಳಮೋಕ್ಷ ಮಾಡಲಾಗಿದೆ. ಅನಂತರ ಠಾಕೂರ್‌ಗಳು ಯಾವಾಗಲೂ ದಲಿತರ ಮುಖ್ಯಸ್ಥರಾಗಿರುತ್ತಾರೆ ಎಂದು ಮೇಲ್ಜಾತಿ ಯುವಕ ಹೇಳಿದ್ದಾನೆ.
ಈ ಸುದ್ದಿ ಓದಿದ್ದೀರಾ? ರಾಹುಲ್ ಗಾಂಧಿ ಶಿಕ್ಷೆಗೆ ತಡೆ ನಿರಾಕರಿಸಿದ್ದ ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ವರ್ಗಾವಣೆ
ಮಧ್ಯ ಪ್ರದೇಶದಲ್ಲಿ ದಲಿತರ ಮೇಲೆ ಈ ರೀತಿಯ ಹಲವು ದೌರ್ಜನ್ಯ ಘಟನೆಗಳು ನಡೆದಿವೆ. ಬಿಜೆಪಿ ಮುಖಂಡನೊಬ್ಬ ಆದಿವಾಸಿ ಯುವಕನೊಬ್ಬನ ಮೇಲೆ ಮೂತ್ರ ವಿಸರ್ಜಿಸಿದ ಘಟನೆ ವರದಿಯಾಗಿತ್ತು.
ಅಲ್ಲದೆ ದಲಿತ ಯುವಕರ ಮೇಲೆ ಲೈಂಗಿಕ ದೌರ್ಜನ್ಯದ ಸುಳ್ಳು ಆರೋಪ ಹೊರಿಸಿ ಬಲವಂತವಾಗಿ ಮಲ ತಿನ್ನಿಸಿದ ಹೀನ ಕೃತ್ಯ ಕೂಡ ಕೆಲ ದಿನಗಳ ಹಿಂದೆ ನಡೆದಿತ್ತು.