ಮುಂಬೈ ನ ಬಿಎಂಡಬ್ಲ್ಯು ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಏಕನಾಥ್ ಶಿಂಧೆ ಬಣದ ನಾಯಕ ರಾಜೇಶ್ ಶಾ ಪುತ್ರ ಮಿಹಿರ್ ಶಾನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಮಿಹಿರ್ ಭಾನುವಾರ (ಜುಲೈ 7) ನಡೆಸಿದ ಅಪಘಾತದಿಂದ ಮಹಿಳೆಯೊಬ್ಬರು ಸಾವಿಗೀಡಾಗಿದ್ದರು.
ಮುಂಬೈನ ವಾರ್ಲೆ ಪ್ರದೇಶದಲ್ಲಿ ಮೀನು ಮಾರಾಟಗಾರರಾದ ದಂಪತಿ ಪ್ರದೀಪ್ ನಖ್ವಾ ಹಾಗೂ ಕಾವೇರಿ ನಖ್ವಾ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ವೇಗವಾಗಿ ಬಂದ ಮಿಹಿರ್ ಶಾ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿಹೊಡೆದಿದೆ. ಸ್ಕೂಟರ್‌ನಿಂದ ಪ್ರದೀಪ್ ನಕ್ವಾ ಅವರು ಕೆಳಗೆ ಬಿದ್ದ ನಂತರ ಕಾವೇರಿ ನಖ್ವಾ ಅವರು ಕಾರಿನಡಿ ಸಿಲುಕಿದ್ದಾರೆ. ಕಾವೇರಿ ಅವರನ್ನು 100 ಮೀಟರ್‌ವರೆಗೂ ಕಾರು ಎಳೆದೊಯ್ದಿದೆ. ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.
ಈ ಸುದ್ದಿ ಓದಿದ್ದೀರಾ? ಮುಂಬೈ | ಶಿವಸೇನಾ ನಾಯಕನ ಪುತ್ರನಿಂದ ಹಿಟ್ ಆ್ಯಂಡ್ ರನ್: ಮಹಿಳೆಯನ್ನು 100 ಮೀಟರ್ ಎಳೆದೊಯ್ದ ಕಾರು
ಬಿಎಂಡಬ್ಲ್ಯು ಕಾರು ರಾಜೇಶ್ ಶಾ ಹೆಸರಿನಲ್ಲಿ ನೋಂದಣಿಯಾಗಿದ್ದು, ಪೊಲೀಸರು ಈಗಾಗಲೇ ರಾಜೇಶ್ ಶಾ ಹಾಗೂ ಚಾಲಕನನ್ನು ಬಂಧಿಸಿದ್ದಾರೆ.
ಈ ನಡುವೆ ಸುದ್ದಿಗಾರರೊಂದಿಗೆ ದುಃಖವನ್ನು ವ್ಯಕ್ತಪಡಿಸಿದ ಸಂತ್ರಸ್ತೆ ಕಾವೇರಿ ನಖ್ವಾ ಅವರ ಪತಿ ಪ್ರದೀಪ್ ನಖ್ವಾ, “ನಾನು ಆತನಿಗೆ ನಿಲ್ಲಿಸು ಎಂದು ಹೇಳಿದರೂ ಆತ ನಿಲ್ಲಿಸದೆ ವೇಗವಾಗಿ ಚಲಾಯಿಸುತ್ತಿದ್ದ. ಮೃತಪಡುವಾಗ ಆಕೆ ತುಂಬ ನೋವನ್ನು ಅನುಭವಿಸರಬೇಕು. ಇದು ಎಲ್ಲರಿಗೂ ಗೊತ್ತಿದ್ದರೂ ಯಾರೂ ಏನು ಮಾಡುತ್ತಿಲ್ಲ. ಬಡವರ ನೋವು ಯಾರು ಕೇಳುವವರಿಲ್ಲ” ಎಂದು ತಿಳಿಸಿದ್ದಾರೆ.
VIDEO | Mumbai BMW hit-and-run case: "I asked him to stop, yet he didn't stop; he ran away. She (the deceased) must have been in so much pain. Everyone knows this but no one is doing anything. There is no one for the poor," says Pradeep Liladhar Nakhwa, husband of deceased Kaveri… pic.twitter.com/jMKLlPzHrZ
— Press Trust of India (@PTI_News) July 9, 2024