ಬುಧವಾರ ಸಂಜೆ ಮುಂಬೈನಲ್ಲಿ ಭಾರೀ ಮಳೆಯಾಗಿದ್ದು ತೀವ್ರ ಪ್ರವಾಹ, ಟ್ರಾಫಿಕ್ ಜಾಮ್, ಸೆಂಟ್ರಲ್ ರೈಲ್ವೆ ಸೇವೆಗಳಿಗೆ, ವಿಮಾನದ ಮಾರ್ಗಕ್ಕೆ ಅಡ್ಡಿ ಉಂಟು ಮಾಡಿದೆ. ಮಳೆ ಸಂಬಂಧಿತ ಅವಘಡಗಳಿಂದಾಗಿ ಒಟ್ಟು ನಾಲ್ವರು ಸಾವನ್ನಪ್ಪಿದ್ದಾರೆ.
ಬುಧವಾರ ಸಂಜೆ 5 ಗಂಟೆಗೆ ಆರಂಭವಾದ ಮಳೆಯು ಐದು ಗಂಟೆಗಳ ಕಾಲ ಸುರಿದಿದೆ. ಈ ಅವಧಿಯಲ್ಲಿ ಮುಂಬೈ ಮಹಾನಗರ ಪ್ರದೇಶದಲ್ಲಿ 200 ಮಿ.ಮೀ.ಗೂ ಹೆಚ್ಚು ಮಳೆಯಾಗಿದ್ದು, ಪ್ರಯಾಣಿಕರು ರಸ್ತೆಗಳಲ್ಲಿ ಮತ್ತು ರೈಲು ನಿಲ್ದಾಣಗಳಲ್ಲಿ ಸಿಲುಕಿಕೊಂಡಿದ್ದರು.
45 ವರ್ಷದ ಮಹಿಳೆಯೊಬ್ಬರು ಅಂಧೇರಿ ಪೂರ್ವದಲ್ಲಿ ನಾಲೆಯಲ್ಲಿ ಮುಳುಗಿ ಸಾವನ್ನಪ್ಪಿದರೆ, ಕಲ್ಯಾಣ್‌ನ ಕಲ್ಲು ಕ್ವಾರಿಯಲ್ಲಿ ಇಬ್ಬರು ಕಾರ್ಮಿಕರು ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಜೆನಿತ್ ಜಲಪಾತದ ಬಳಿ ಮತ್ತೋರ್ವ ಮಹಿಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಇದನ್ನು ಓದಿದ್ದೀರಾ? ವಿಜಯಪುರ | ಭಾರೀ ಮಳೆಗೆ ನಲುಗಿದ ಗುಮ್ಮಟ ನಗರಿ; ಜನ-ಜೀವನ ಅಸ್ತವ್ಯಸ್ತ
ಈ ನಡುವೆ ಭಾರತೀಯ ಹವಾಮಾನ ಇಲಾಖೆಯು ಬುಧವಾರ ಸಂಜೆ ಮುಂಬೈ, ಥಾಣೆ ಮತ್ತು ರಾಯಗಢಕ್ಕೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಗುರುವಾರ ಬೆಳಗಿನ ತನಕ ಅತಿ ಹೆಚ್ಚು ಮಳೆ, ಗುಡುಗು, ಮಿಂಚು ಮತ್ತು ಬಿರುಗಾಳಿ ಬೀಸುವ ಎಚ್ಚರಿಕೆ ನೀಡಿದೆ. ಮುಂದಿ ಕೆಲವು ದಿನಗಳ ಕಾಲವೂ ಭಾರೀ ಮಳೆ ಇರಲಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಮುಂಬೈ, ಥಾಣೆ, ಪಾಲ್ಘರ್, ಪುಣೆ ಮತ್ತು ಪಿಂಪ್ರಿ-ಚಿಂಚ್‌ವಾಡ್‌ನಲ್ಲಿ ಭಾರೀ ಮಳೆಯ ಕಾರಣದಿಂದಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ತಿಳಿಸಿದೆ. ಜನರು ಅಗತ್ಯವಿಲ್ಲದ ಹೊರತಾಗಿ ಮನೆಯಿಂದ ಹೊರಬರದಂತೆ ಮುಂಬೈ ಪೊಲೀಸರು ಸಲಹೆ ನೀಡಿದ್ದಾರೆ.
ಇನ್ನು ಮುಂಬೈನಲ್ಲಿ ಸಾಕಷ್ಟು ಜನರು ಪ್ರತಿನಿತ್ಯ ರೈಲಿನಲ್ಲೇ ಪ್ರಯಾಣ ಮಾಡುತ್ತಾರೆ. ಆದರೆ ಭಾರೀ ಮಳೆಯಿಂದಾಗಿ ರೈಲು ಸಂಚಾರಕ್ಕೆ ಅಡ್ಡಿ ಉಂಟಾಗಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ. ಹಲವು ರೈಲುಗಳು ರದ್ದಾಗಿದೆ. ಕೆಲವು ಸ್ಥಳಗಳಲ್ಲಿ ರೈಲು ಸೇವೆ ವಿಳಂಬವಾಗಿ ಆರಂಭವಾಗಿದೆ.
ಇದನ್ನು ಓದಿದ್ದೀರಾ? ವಿಜಯಪುರ | ಭಾರೀ ಮಳೆಗೆ ನಲುಗಿದ ಗುಮ್ಮಟ ನಗರಿ; ಜನ-ಜೀವನ ಅಸ್ತವ್ಯಸ್ತ
ಈ ನಡುವೆ ಮುಂಬೈ ವಿಮಾನ ನಿಲ್ದಾಣದಲ್ಲಿ 14 ವಿಮಾನಗಳ ಸೇವೆ ವ್ಯತ್ಯಯವಾಗಿದೆ ಮತ್ತು ಏಳು ಇತರ ವಿಮಾನಗಳು ಲ್ಯಾಂಡಿಂಗ್ ಅನ್ನು ಬೇರೆಡೆ ಮಾಡಲಾಗಿದೆ.
ಪುಣೆಯಲ್ಲಿ ನಿರ್ಮಾಣವಾಗಿರುವ ಮೆಟ್ರೋ ಮಾರ್ಗದ ಉದ್ಘಾಟನೆಗೆ ಪ್ರಧಾನಿ ಬರಬೇಕಾಗಿತ್ತು. ಆದರೆ ಭಾರೀ ಮಳೆ ಕಾರಣದಿಂದಾಗಿ ಈ ಮೋದಿ ಪುಣೆ ಭೇಟಿ ರದ್ದುಗೊಂಡಿದೆ.
VIDEO | Mithi river overflows in Mumbai after heavy rains. #MumbaiRains #Mithiriver pic.twitter.com/ul7vEFSFIQ
— Press Trust of India (@PTI_News) September 26, 2024
