ಮುಸ್ಲಿಂ ವಿದ್ಯಾರ್ಥಿ ಕಪಾಳಕ್ಕೆ ಹೊಡೆದ ಪ್ರಕರಣ: ಬಾಲಕನ ಶಾಲಾ ಶಿಕ್ಷಣ ಮುಗಿಯುವವರೆಗೆ ಶೈಕ್ಷಣಿಕ ವೆಚ್ಚ ಭರಿಸಿ; ಯೋಗಿ ಸರ್ಕಾರಕ್ಕೆ ಸುಪ್ರೀಂ ತಾಕೀತು

Date:

Advertisements

ಮುಸ್ಲಿಂ ವಿದ್ಯಾರ್ಥಿಯ ಕಪಾಳಕ್ಕೆ ಹೊಡೆದಿದ್ದ ಪ್ರಕರಣದ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್‌, “ಆ ಮುಸ್ಲಿಂ ಬಾಲಕನ ಶಾಲಾ ಶಿಕ್ಷಣ ಮುಗಿಯುವವರೆಗೂ ಆತನ ಶೈಕ್ಷಣಿಕ ವೆಚ್ಚವನ್ನು ಸರ್ಕಾರವೇ ಭರಿಸಬೇಕು” ಎಂದು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ತಾಕೀತು ಮಾಡಿದೆ.

2023ರ ಆಗಸ್ಟ್‌ನಲ್ಲಿ ಉತ್ತರ ಪ್ರದೇಶದ ಮುಜಫರ್ ನಗರದ ಶಾಲೆಯೊಂದರಲ್ಲಿ ಏಳು ವರ್ಷದ (2ನೇ ತರಗತಿ) ಮುಸ್ಲಿಂ ವಿದ್ಯಾರ್ಥಿಯ ಕಪಾಳಕ್ಕೆ ಹೊಡೆಯುವಂತೆ ತರಗತಿಯ ಇತರ ವಿದ್ಯಾರ್ಥಿಗಳಿಗೆ ಶಿಕ್ಷಕಿ ತ್ರಿಪ್ತಾ ತ್ಯಾಗಿ ಅವರು ಸೂಚಿಸಿದ್ದರು. ಬಾಲಕನ ಸಹಪಾಠಿಗಳು ಆತನ ಕೆನ್ನೆಗೆ ಹೊಡೆದಿದ್ದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬಳಿಕ, ಶಿಕ್ಷಕಿ ವಿರುದ್ಧ ಪ್ರಕರಣವೂ ದಾಖಲಾಗಿತ್ತು.

ಪ್ರಕರಣವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಪ್ರಕರಣವನ್ನು ಉಲ್ಲೇಖಿಸಿ ಸಾಮಾಜಿಕ ಕಾರ್ಯಕರ್ತ ತುಷಾರ್ ಗಾಂಧಿ ಅವರು 2009ರ ಶಿಕ್ಷಣ ಕಾಯ್ದೆ ಜಾರಿಗೆ ಸಂಬಂಧವಾಗಿ ಪಿಐಎಲ್‌ಅನ್ನೂ ಸಲ್ಲಿಸಿದ್ದರು. ಪ್ರಕರಣ ಮತ್ತು ಪಿಐಎಲ್‌ಅನ್ನು ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಅಭಯ್ ಎಸ್. ಓಕಾ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರಿದ್ದ ಪೀಠವು, “ಸಂತ್ರಸ್ತ ವಿದ್ಯಾರ್ಥಿಯ ಶಾಲಾ ಶಿಕ್ಷಣ ಮುಗಿಯುವವರೆಗೆ ಆತನ ಬೋಧನಾ ಶುಲ್ಕ, ಸಮವಸ್ತ್ರ, ಪುಸ್ತಕಗಳು ಹಾಗೂ ಸಾರಿಗೆ ಶುಲ್ಕ ಸೇರಿದಂತೆ ಎಲ್ಲ ರೀತಿಯ ಶೈಕ್ಷಣಿಕ ವೆಚ್ಚವನ್ನು ರಾಜ್ಯ ಸರ್ಕಾರವೇ ಪಾವತಿಸಬೇಕು. ಇದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ” ಎಂದು ನಿರ್ದೇಶಿಸಿದೆ.

Advertisements

ವಿಚಾರಣೆ ವೇಳೆ ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಶದನ್ ಫರಾಸತ್, “ಬಾಲಕನ ಕೊನೆಯ ಸೆಮಿಸ್ಟರ್‌ನ ಬೋಧನಾ ಶುಲ್ಕವನ್ನು ಸರ್ಕಾರ ಪಾವತಿಸಿಲ್ಲ. ಸಮವಸ್ತ್ರದ ವೆಚ್ಚಗಳು ಇನ್ನೂ ಬಾಕಿ ಉಳಿದಿವೆ” ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

“ಬಾಲಕನ ಪೋಷಕರು ಕೃಷಿಕರಾಗಿದ್ದು, ಆರ್ಥಿಕ ಹೊರೆಯನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಘಟನೆಯ ಬಳಿಕ ಕುಟುಂಬವು ನಿರಂತರವಾಗಿ ಅವಮಾನ ಎದುರಿಸುತ್ತಿದೆ. ಇದನ್ನು ಪರಿಗಣಿಸಿ ರಾಜ್ಯ ಸರ್ಕಾರವು ಮಗುವಿನ ಶೈಕ್ಷಣಿಕ ವೆಚ್ಚವನ್ನು ಭರಿಸುವಂತೆ ಆದೇಶಿಸಬೇಕು” ಎಂದು ಮನವಿ ಮಾಡಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

5 COMMENTS

  1. ದಿನವೂ ನಮ್ಮ ಹಿಂದೂ ಮಕ್ಕಳು ಹೊಡೆಸಿಕೊಂಡು ಅಲ್ಲ ಕೊಲೆಯಾಗಿ ಅವರ ಮನೆ ಮಂದಿ ಅಳ್ತಾ ಇದ್ರೂ ಯಾವ ನನ್ ಮಕ್ಳೂ ತಿರುಗಿ ನೋಡುತ್ತಿಲ್ಲ . ಇದ್ಯಾವ ಕಿತ್ತೋದ ನ್ಯಾಯ…ಥೂ

    • ಅಂಥಹ ಘಟನೆ ನಡೆದ ಬಗ್ಗೆ ನಿಮಗೆ ಮಾಹಿತಿ ಇದ್ದರೆ ನೀವು ಕೂಡ ಕೋರ್ಟ್ಗೆ ಹೋಗಬಹುದು

  2. ನಿಮ್ಮ ಚಾನಲ್ ನೋಡ್ತಿದ್ರೆ ನೀವು ಬೇರೆ ಪ್ರಾಪಾಗೆಂಡಾ ತಗೊಂಡಂಗಿದೆ. ಏನ ಗನಾಂಧಾರಿ ಮಾತಾಡಿದಾನೆ ರಾಹುಲಾ? ಏನ್ ಮಾಡ್ಬೇಕ್ ಅನ್ನೋದ ಗೊತ್ತಿದ್ಯಾ ರಾಹುಲ್ ಗೆ? ಎಲ್ಲರೂ ಏನ್ ತಪ್ ಮಾಡಿದಾರೆ ಅಂತ ಸುಲಭವಾಗಿ ಹೇಳಬಹುದು. ಕೆಳಗೆ ಬಿದ್ದವನ ಮೇಲೆ ಮತ್ತಷ್ಟು ಕಲ್ಲು ಎಸೆಯುವ ಕೆಲಸ ಎಲ್ಲಾ ಕಳ್ಳರು ಮಾಡ್ತಾರೆ. ತುರ್ತು ಸಂಧರ್ಭದಲ್ಲಿ ರಾಜಕೀಯ ಬಿಟ್ಟು ಮಾತಾಡಿ ಚಟಗಳನ್ನ ತೀರಿಸಿಕೊಳ್ಳೋದಿಕ್ಕೆ ಯುದ್ಧದ ಸಂದರ್ಭಗಳೇ ಬೇಕಾ?
    ಆಲೋಚನಾ ದಾಟಿಯನ್ನ ಸರಿಪಡಿಸಿಕೊಳ್ಳೋ ಅಗತ್ಯ ಇದೆ. ನೋಡಿ ಯೋಚನೆ ಮಾಡಿ. ನಿಮ್ಮ ನ್ಯೂಸ್ ಚಾನಲ್ ಬಗ್ಗೆ ಗೌರವ ಇದೆ. ವಿಷಯ ಗಂಭೀರವಾಗಿದ್ರೆ ಮಾತ್ರ ಇಂತಹ ವಿಷಯ ಚರ್ಚಿಸಿ & ಪ್ರಕಟಿಸಿ‌.

  3. This incident is nil when you compare the tortures Hindus are undergoing in the hands of Muslims in Pakistan , but no justice there , this clearly shows the quality of Hindus and muslims

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X