ಉತ್ತರ ಪ್ರದೇಶದ ಸಂಭಲ್‌ನಲ್ಲಿ ಹಿಂದೂ ದೇವಾಲಯದ ಆಸ್ತಿಯನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇತ್ತೀಚೆಗೆ ಸಮೀಕ್ಷೆ ನಡೆಸಿದ್ದಾರೆ. ಈ ಬೆನ್ನಲ್ಲೇ, ಒತ್ತುವರಿ ಜಾಗದಲ್ಲಿ ನಿರ್ಮಿಸಿದ್ದ ಮನೆಗಳನ್ನು ಅಲ್ಲಿನ ಮುಸ್ಲಿಂ ನಿವಾಸಿಗಳು ಸ್ವಯಂಪ್ರೇರಿತರಾಗಿ ಕೆಡವಲು ಆರಂಭಿಸಿದ್ದಾರೆ ಎಂದು ವರದಿಯಾಗಿದೆ.
ಸಂಭಲ್‌ನ ಜಾಮಾ ಮಸೀದಿಯ ಸ್ಥಳದಲ್ಲಿ ಹಿಂದೆ ಹಿಂದೂ ದೇವಾಲಯವಿತ್ತು ಎಂಬ ವಾದದ ಮೇಲೆ ಮಸೀದಿಯಲ್ಲಿ ಸಮೀಕ್ಷೆ ನಡೆಸಲು ಇತ್ತೀಚೆಗೆ ನ್ಯಾಯಾಲಯ ಆದೇಶಿಸಿತ್ತು. ಅಧಿಕಾರಿಗಳು ಸಮೀಕ್ಷೆಗೆ ಹೋದಾಗ ಹಿಂಸಾಚಾರ ನಡೆದಿತ್ತು. ಈ ನಡುವೆಯೂ ಸ್ಥಳೀಯ ಅಧಿಕಾರಿಗಳು ಮಸೀದಿ ಮಾತ್ರವಲ್ಲದೆ, ಇನ್ನೂ ಹಲವಾರು ಪ್ರದೇಶಗಳಲ್ಲಿ ಒತ್ತುವರಿ ಸರ್ವೇ ನಡೆಸಿದ್ದರು. ದೇವಾಲಯದ ಜಾಗವನ್ನು ಒತ್ತುವರಿ ಮಾಡಿಕೊಂಡು ಕೆಲ ಮನೆಗಳನ್ನು ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದರು. ಒತ್ತುವರಿ ತೆರವು ಕಾರ್ಯಾಚರಣೆಯನ್ನೂ ನಡೆಸಿದ್ದರು.
ಈ ಬೆನ್ನಲ್ಲೇ, ಅಧಿಕಾರಿಗಳು ದೇವಾಲಯದ ಜಾಗವನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದಾರೆಂದು ಗುರುತಿಸಿದ್ದ ಮನೆಗಳನ್ನು ಸ್ವತಃ ಮುಸ್ಲಿಂ ನಿವಾಸಿಗಳು ಸ್ವಯಂಪ್ರೇರಿತರಾಗಿ ಕೆಡವಲು ಆರಂಭಿಸಿದ್ದಾರೆ. “ಈ ಮೂಲಕ ನಾವು ಕನಿಷ್ಠ ನಮ್ಮ ಅಗತ್ಯ ವಸ್ತುಗಳನ್ನಾದರೂ ರಕ್ಷಿಸಿಕೊಳ್ಳಬಹುದು. ಅಧಿಕಾರಿಗಳಿಗೆ ಧ್ವಂಸ ಮಾಡಲು ಅವಕಾಶ ಕೊಟ್ಟರೆ, ಅವರು ನಮಗೆ ಏನನ್ನೂ ಉಳಿಸುವುದಿಲ್ಲ. ಎಲ್ಲವನ್ನೂ ನಾಶ ಮಾಡುತ್ತಾರೆ” ಎಂದು ಸಂಭಲ್‌ನ ನಿವಾಸಿಯೊಬ್ಬರು ಹೇಳಿದ್ದಾರೆ.
#Hindutva hypocrisy at its peak#Muslim houses demolished in #Sambhal, India, over claims of an ancient temple near #JamaMasjid.
— Aditi Sharma (@Adititweets_) December 18, 2024
Meanwhile, they scream about Hindu minorities in #Bangladesh!#OneNationOneElectionBill #Maynata #Sambhal pic.twitter.com/CIHWDOz7ug