“ನನ್ನ ಹೋರಾಟ ಕೊನೆಗೊಂಡಿಲ್ಲ, ಈಗಷ್ಟೇ ಶುರುವಾಗಿದೆ” ಎಂದು ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಹೇಳಿದ್ದಾರೆ.
ಇತ್ತೀಚೆಗೆ ನಡೆದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 50 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಬರೀ ನೂರು ಗ್ರಾಂ ತೂಕ ಹೆಚ್ಚಳದ ಕಾರಣದಿಂದಾಗಿ ಅನರ್ಹಗೊಂಡಿದ್ದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ಹರಿಯಾಣದ ರೋಹ್ತಕ್ ಸರ್ವಖಾಪ್ ಪಂಚಾಯತ್ ಭಾನುವಾರ ಚಿನ್ನದ ಪದಕವನ್ನು ನೀಡಿ ಗೌರವಿಸಿತು.
ಈ ವೇಳೆ ಮಾತನಾಡಿದ ಫೋಗಟ್, “ನನ್ನ ಹೋರಾಟ ಕೊನೆಗೊಂಡಿಲ್ಲ, ಈಗಷ್ಟೇ ಶುರುವಾಗಿದೆ. ನಮ್ಮ ಹೆಣ್ಣುಮಕ್ಕಳ ಗೌರವಕ್ಕಾಗಿ ಹೋರಾಟ ಈಗಷ್ಟೇ ಶುರುವಾಗಿದೆ. ನಮ್ಮ ಧರಣಿ ಸತ್ಯಾಗ್ರಹದಲ್ಲಿ ನಾವು ಅದನ್ನೇ ಹೇಳಿದ್ದೇವೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಭಾರತೀಯರ ಮನ ಗೆದ್ದ ವಿನೇಶ್ ಫೋಗಟ್‌ಗೆ ಪ್ರೀತಿಯ ಸ್ವರ್ಣ ಸ್ವಾಗತ
“ನಾನು ಪ್ಯಾರಿಸ್‌ನಲ್ಲಿ ಆಡಲು ಸಾಧ್ಯವಾಗದಿದ್ದಾಗ, ನಾನು ತುಂಬಾ ದುರದೃಷ್ಟಕರ ವ್ಯಕ್ತಿ ಎಂದು ಭಾವಿಸಿದೆ. ಆದರೆ ಭಾರತಕ್ಕೆ ಹಿಂದಿರುಗಿದ ನಂತರ, ಇಲ್ಲಿ ಎಲ್ಲರ ಪ್ರೀತಿ ಮತ್ತು ಬೆಂಬಲವನ್ನು ನೋಡಿದ ನಂತರ ನಾನು ತುಂಬಾ ಅದೃಷ್ಟಶಾಲಿ ಎಂದು ಭಾವಿಸುತ್ತೇನೆ” ಎಂದು ತಿಳಿಸಿದರು.
ಕಳೆದ ವರ್ಷ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಮುಖ್ಯಸ್ಥ ಮತ್ತು ಬಿಜೆಪಿ ನಾಯಕ ಬ್ರಿಜ್‌ಭೂಷಣ್ ಶರಣ್ ಅವರ ಮೇಲೆ ವಿನೇಶ್ ಫೋಗಟ್ ಸೇರಿದಂತೆ ಹಲವಾರು ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಹೆಚ್ಚಾಗಿ ಹರಿಯಾಣದ ಕುಸ್ತಿಪಟುಗಳು ಈ ಹೋರಾಟದ ಭಾಗವಾಗಿದ್ದರು.
Rohtak: The Sarv Khap Panchayat honored Olympic wrestler Vinesh Phogat with a gold medal, alleging she was cheated out of a medal due to conspiracy. Vinesh praised the gesture and declared her fight for daughters' respect has just begun, hinting at future revelations about the… pic.twitter.com/nKFMWVGilA
— IANS (@ians_india) August 25, 2024