ನರೇಂದ್ರ ಮೋದಿ ಜೂನ್ 9 ಸಂಜೆ 6 ಗಂಟೆಗೆ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಇಂದು ನಡೆದ ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಬಿಜೆಪಿ ನಾಯಕ ಪ್ರಲ್ಹಾದ್ ಜೋಷಿ ತಿಳಿಸಿದ್ದಾರೆ.
543 ಸದಸ್ಯ ಬಲದ ಲೋಕಸಭೆಯಲ್ಲಿ ಬಹುಮತಕ್ಕೆ 272 ಸಂಖ್ಯೆ ಬೇಕಾಗಿದ್ದು, ಎನ್‌ಡಿಎ ಒಕ್ಕೂಟ 293 ಸಂಸದರನ್ನು ಹೊಂದಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಜನರೊಂದಿಗೆ ನೊಂದು ಬೆಂದು ಬಂಗಾರವಾದ ರಾಹುಲ್ ಗಾಂಧಿ
ಬಹುಮತ ಇಲ್ಲದಿರುವ ಕಾರಣದಿಂದ ಸರ್ಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ನೂತನ ಸರ್ಕಾರದಲ್ಲಿ ಮಿತ್ರ ಪಕ್ಷಗಳ ಪ್ರಾತಿನಿಧ್ಯದ ಪಾಲಿನ ಸೌಹಾರ್ದಯುತ ಸೂತ್ರಕ್ಕಾಗಿ ಹಿರಿಯ ಬಿಜೆಪಿ ನಾಯಕರಾದ ಅಮಿತ್ ಶಾ, ರಾಜನಾಥ್ ಸಿಂಗ್ ಹಾಗೂ ಜೆ ಪಿ ನಡ್ಡಾ ಅವರು ಒಕ್ಕೂಟದ ನಾಯಕರೊಂದಿಗೆ ಮಾತುಕತೆ ನಡೆಸಿದರು.
ಜೂ.4 ರಂದು ಪ್ರಕಟಗೊಂಡ ಫಲಿತಾಂಶದಲ್ಲಿ ಬಿಜೆಪಿ 240, ಕಾಂಗ್ರೆಸ್ 99, ಎಸ್‌ಪಿ 37, ಟಿಎಂಸಿ 29, ಡಿಎಂಕೆ 23, ಟಿಡಿಪಿ 16 ಹಾಗೂ ಜೆಡಿಯು 12 ಸ್ಥಾನ ಪಡೆದಿರುವ ಪ್ರಮುಖ ಪಕ್ಷಗಳಾಗಿವೆ.
