ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎಸ್‌ಪಿ- ಶರದ್ ಪವಾರ್ ಬಣ) ಮಹಿಳಾ ವಿಭಾಗವು ಅಧ್ಯಕ್ಷೆ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದೆ. ಮಹಿಳೆಯರ ಮೇಲೆ ದೌರ್ಜನ್ಯವಾದಾಗ ಒಂದು ಕೊಲೆ ಮಾಡಲು ಮಹಿಳೆಯರಿಗೆ ಅನುಮತಿ ಕೊಡಿ, ಶಿಕ್ಷೆಯಿಂದ ವಿನಾಯಿತಿ ದೊರಕಿಸಿ ಎಂದು ಒತ್ತಾಯಿಸಿದೆ.
ಶರದ್ ಪವಾರ್ ನೇತೃತ್ವದ ಪಕ್ಷದ ಮಹಿಳಾ ವಿಭಾಗದ ಅಧ್ಯಕ್ಷೆ ರೋಹಿಣಿ ಖಡ್ಸೆ ಅವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಪತ್ರ ಬರೆದಿದ್ದಾರೆ. “ಮಹಿಳೆಯರು ದಬ್ಬಾಳಿಕೆಯ ಮನಸ್ಥಿತಿ, ಅತ್ಯಾಚಾರಿ ಮನಸ್ಥಿತಿ, ನಿಷ್ಕ್ರಿಯ ಕಾನೂನು ಮತ್ತು ಸುವ್ಯವಸ್ಥೆಯನ್ನು ನಾಶ ಮಾಡಲು, ಕೊಲೆ ಮಾಡಲು ಬಯಸುತ್ತಾರೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ರಾಯಚೂರು | ದೇವದಾಸಿ ಮಹಿಳೆಯರ ಪಿಂಚಣಿ ಹೆಚ್ಚಳಕ್ಕೆ ಆಗ್ರಹ
ಮಹಿಳೆಯರ ವಿರುದ್ಧದ ಅಪರಾಧಗಳು ಹೆಚ್ಚುತ್ತಿವೆ ಎಂದು ಹೇಳಿರುವ ಖಡ್ಸೆ ಇತ್ತೀಚೆಗೆ ಮುಂಬೈನಲ್ಲಿ ನಡೆದ 12 ವರ್ಷದ ಬಾಲಕಿಯ ಮೇಲಿನ ಸಾಮೂಹಿಕ ಅತ್ಯಾಚಾರವನ್ನು ಉಲ್ಲೇಖಿಸಿದ್ದಾರೆ.
“ಎಲ್ಲ ಮಹಿಳೆಯರ ಪರವಾಗಿ ಒಂದು ಕೊಲೆ ಮಾಡಲು ಶಿಕ್ಷೆಯಿಂದ ವಿನಾಯಿತಿ ನೀಡಬೇಕೆಂದು ನಾವು ಒತ್ತಾಯಿಸುತ್ತೇವೆ” ಎಂದು ಖಡ್ಸೆ ಪತ್ರದಲ್ಲಿ ತಿಳಿಸಿದ್ದಾರೆ.
ಭಾರತವು ಮಹಿಳೆಯರಿಗೆ ಅತ್ಯಂತ ಅಸುರಕ್ಷಿತ ದೇಶವಾಗಿದೆ ಎಂದು ಹೇಳುವ ಸಮೀಕ್ಷಾ ವರದಿಯನ್ನು ಕೂಡಾ ಉಲ್ಲೇಖಿಸಿದ್ದಾರೆ. ಅಪಹರಣ ಮತ್ತು ಕೌಟುಂಬಿಕ ಹಿಂಸಾಚಾರ ಸೇರಿದಂತೆ ಹಲವು ಅಪರಾಧಗಳು ಮಹಿಳೆಯರ ವಿರುದ್ಧ ನಡೆಯುತ್ತಿವೆ ಎಂದಿದ್ದಾರೆ.
ಇದನ್ನು ಓದಿದ್ದೀರಾ? ಮಹಾ ಕುಂಭಮೇಳ | ಮಹಿಳೆಯರು ಸ್ನಾನ ಮಾಡುವ, ಬಟ್ಟೆ ಬದಲಾಯಿಸುವ ಚಿತ್ರಗಳ ಮಾರಾಟ!
ಹಾಗೆಯೇ “ಗಂಭೀರವಾಗಿ ಯೋಚಿಸಿ ನಂತರ ನಮ್ಮ ಬೇಡಿಕೆಯನ್ನು ಈಡೇರಿಸಲಾಗುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಹೇಳಿದ್ದಾರೆ.
ಕೊಲೆಗೆ ಅನುಮತಿ ನೀಡಲು ಸಾಧ್ಯವೇ?
2021ರ ಪ್ರಕಾರ, ಭಾರತದಲ್ಲಿ ಮಹಿಳೆಯರ ಜನಸಂಖ್ಯೆ 646 ಮಿಲಿಯನ್ ಆಗಿದೆ. 2010ರ ಲೆಕ್ಕಾಚಾರಕ್ಕಿಂತ ಶೇಕಡ 13.5ರಷ್ಟು ಏರಿಕೆಯಾಗಿದೆ. 2022ರ ಲೆಕ್ಕಾಚಾರದ ಪ್ರಕಾರ ಭಾರತದಲ್ಲಿ 685,992,675 ಮಹಿಳೆಯರು ಇದ್ದಾರೆ. ಈ ಲೆಕ್ಕಾಚಾರದಲ್ಲಿ ಎಲ್ಲಾ ಮಹಿಳೆಯರಿಗೂ ಒಂದು ಕೊಲೆ ಮಾಡಲು ಅವಕಾಶ ನೀಡುವುದು ಸರಿಯೇ ಎಂಬ ಚರ್ಚೆ ಇಲ್ಲಿ ಹುಟ್ಟುತ್ತದೆ. ಕೊಲೆ ಎಂಬುದು ಅಪರಾಧ ಆಗಿರುವಾಗ ಯಾರೇ ಆದರೂ ಅವರಿಗೆ ಕೊಲೆ ಮಾಡಲು ಅವಕಾಶ ನೀಡುವುದು ಎಷ್ಟು ಸರಿ? ಕೊಲೆಗೆ ಅವಕಾಶ ನೀಡಿದರೆ, ಸಂವಿಧಾನಕ್ಕೆ, ಕಾನೂನಿಗೆ ಏನು ಬೆಲೆಯಿದೆ ಎಂಬ ವಾದ, ಪ್ರಶ್ನೆ ಹುಟ್ಟುತ್ತದೆ.
