NEET ಬಿಕ್ಕಟ್ಟು | ವಿಪಕ್ಷಗಳು ಆರೋಪದಲ್ಲಿ, ಕೇಂದ್ರ ಮೌನವ್ರತದಲ್ಲಿ, ವಿದ್ಯಾರ್ಥಿಗಳ ಭವಿಷ್ಯ ಅಡಕತ್ತರಿಯಲ್ಲಿ!

Date:

ದೇಶದ ವೈದ್ಯಕೀಯ ಶಿಕ್ಷಣದ ದಾರಿದೀಪವಾಗಬೇಕಿದ್ದ NEET-UG ಪರೀಕ್ಷೆ ಇಂದು ದೇಶದ ಸುಮಾರು 22 ಲಕ್ಷ ವಿದ್ಯಾರ್ಥಿಗಳ ಮತ್ತು ಅವರ ಹೆತ್ತವರ ರಕ್ತ ಹೀರುತ್ತಿದೆ. ಪರೀಕ್ಷಾ ಹಗರಣ, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಭ್ರಷ್ಟಾಚಾರ ಇಡೀ ಶಿಕ್ಷಣ ವ್ಯವಸ್ಥೆಯ ಪಾವಿತ್ರ್ಯತೆಯನ್ನೇ ಸಾರ್ವಜನಿಕವಾಗಿ ಬೆತ್ತಲೆ ಮಾಡಿ ನಿಲ್ಲಿಸಿದ್ದರೂ, ಆಡಳಿತಾರೂಢ ಬಿಜೆಪಿ ಸರ್ಕಾರ ಮಾತ್ರ ಉತ್ತರ ನೀಡದೆ ಜಾರಿಕೊಳ್ಳುತ್ತಿರುವುದರ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.

- Advertisement -

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ ಸಂಸತ್ತಿನ ಒಳಗೂ ಮತ್ತು ಹೊರಗೂ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ. ದೇಶದಲ್ಲಿ ಪೇಪರ್ ಲೀಕ್ ದಂಧೆಯನ್ನು ತಡೆಯಲು ಪ್ರಧಾನಿ ಮೋದಿಯವರಿಂದ ಸಾಧ್ಯವಾಗುತ್ತಿಲ್ಲ . ಬಿಜೆಪಿ ಮತ್ತು RSS ಹಿನ್ನೆಲೆಯುಳ್ಳ ವ್ಯಕ್ತಿಗಳನ್ನು ಒಳಗೊಂಡಿರುವ ಪ್ರಭಾವಿ ಜಾಲವೊಂದು ಇಡೀ ದೇಶದ ಪರೀಕ್ಷಾ ವ್ಯವಸ್ಥೆ ಸಂಪೂರ್ಣ ಕುಸಿದು ಬೀಳುವಂತೆ ಮಾಡಿದೆ. ಕೇಂದ್ರ ಶಿಕ್ಷಣ ಸಚಿವರು ತಕ್ಷಣವೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿಜಯಪುರದಲ್ಲಿ ಜಿ.ಪಂ ತಾ.ಪಂ ಚುನಾವಣೆಯ ಕಾವು; AI ಪೋಸ್ಟರ್‌ಗಳಲ್ಲೂ...

ಚುನಾವಣೆಯ ದಿನಾಂಕ ಇನ್ನೂ ಪ್ರಕಟವಾಗಿಲ್ಲ. ಅಭ್ಯರ್ಥಿಗಳ ಅಂತಿಮ ಪಟ್ಟಿಯೂ ಸಿದ್ಧವಾಗಿಲ್ಲ. ಆದರೆ, ಗ್ರಾಮೀಣ ರಾಜಕಾರಣದಲ್ಲಿ ಮಾತ್ರ ಈಗಾಗಲೇ ಚುನಾವಣೆಯ ಕಾವು ಏರತೊಡಗಿದೆ. ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ...

ಸ್ಟಿಂಗ್ ಆರೋಪದ ಸುತ್ತ ರಾಜಕೀಯ ಲೆಕ್ಕಾಚಾರ; ಸತ್ಯಾಸತ್ಯತೆ ಹೊಣೆಗಾರಿಕೆಯ...

ಸಿದ್ದರಾಮಯ್ಯ ಅವರ ನಿರಾಕರಣೆ, ಕುಮಾರಸ್ವಾಮಿ ಅವರ ಆರೋಪಗಳು, ಆರ್. ಅಶೋಕ್ ಅವರ ಹಣಕಾಸಿನ ಕುರಿತ ಹೇಳಿಕೆಗಳು ಮತ್ತು ಸರ್ಕಾರದ ತನಿಖೆಯ ಭರವಸೆ—ಇವೆಲ್ಲವೂ ಪ್ರಕರಣದ ವಿವಿಧ ಆಯಾಮಗಳನ್ನು ಪ್ರತಿನಿಧಿಸುತ್ತವೆ. ಆದರೆ ಇವುಗಳಲ್ಲಿ ಯಾವುದೂ ಸ್ವತಃ...

ಬಾಲಿವುಡ್‌ ಮೇಲೆ ಭೂಗತ ಲೋಕದ ಕರಿನೆರಳು: ದಾವೂದ್ ಇಬ್ರಾಹಿಂನಿಂದ...

ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಹಣ ಹೂಡುತ್ತಿದ್ದ, ನಟ-ನಟಿಯರ ವೃತ್ತಿಜೀವನದ ಮೇಲೆ ಪ್ರಭಾವ ಬೀರುತ್ತಿದ್ದ ಭೂಗತ ಲೋಕ, ಈಗ ಗುಂಡಿನ ದಾಳಿ ಮತ್ತು ಜೀವಬೆದರಿಕೆಗಳ ಮೂಲಕ ಮತ್ತೊಮ್ಮೆ ತನ್ನ ಅಸ್ತಿತ್ವ ಪ್ರದರ್ಶಿಸುತ್ತಿದೆ. ದಾವೂದ್...

ಮತ್ತೊಂದೆಡೆ, ಮೊದಲಿನಿಂದಲೂ ನೀಟ್ ಪರೀಕ್ಷಾ ಪದ್ಧತಿಯನ್ನು ತೀವ್ರವಾಗಿ ವಿರೋಧಿಸುತ್ತಾ ಬಂದಿರುವ ತಮಿಳುನಾಡು ಮಾಜಿ ಸಿಎಂ ಸ್ಟಾಲಿನ್, ನೀಟ್ ಪರೀಕ್ಷೆಯು ಕೇವಲ ಶ್ರೀಮಂತ ವರ್ಗಕ್ಕೆ ಮತ್ತು ಖಾಸಗಿ ಕೋಚಿಂಗ್ ಸೆಂಟರ್‌ಗಳಿಗೆ ಮಾತ್ರ ಲಾಭದಾಯಕವಾಗಿದ್ದು, ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳ ವೈದ್ಯಕೀಯ ಕನಸನ್ನು ಹೊಸಕಿ ಹಾಕುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ರಾಜ್ಯಗಳಿಗೇ ವೈದ್ಯಕೀಯ ಸೀಟು ಹಂಚಿಕೆಯ ಸ್ವಾಯತ್ತ ಜವಾಬ್ದಾರಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಜೂನ್ 21 ರಂದು ಮರುಪರೀಕ್ಷೆ ನಡೆಸಲು ತೀರ್ಮಾನಿಸಿರುವ ಬೆನ್ನಲ್ಲೇ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಮಾಧ್ಯಮ ಉಸ್ತುವಾರಿ ಅನುರಾಗ್ ಧಂಡಾ ಕೂಡ ಮೋದಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಪರೀಕ್ಷೆಗಳನ್ನು ದಿಢೀರನೆ ರದ್ದುಗೊಳಿಸಿ, ಒಂದು ತಿಂಗಳ ನಂತರ ಮರುಪರೀಕ್ಷೆ ನಡೆಸುವುದಾಗಿ ದಿನಾಂಕ ಪ್ರಕಟಿಸಲಾಗಿದೆ. ಆದರೆ ಈ ಮಧ್ಯೆ ಬದಲಾಗಿದ್ದೇನು? ಪ್ರಶ್ನೆಪತ್ರಿಕೆ ಸೋರಿಕೆ ಜಾಲದ ಅಸಲಿ ಕಿಂಗ್‌ಪಿನ್‌ನನ್ನು ಬಂಧಿಸಲಾಗಿದೆಯೇ?, ವರ್ಷ ವರ್ಷವೂ ಪೇಪರ್ ಲೀಕ್ ದಂಧೆಗೆ ರಾಜಕೀಯ ರಕ್ಷಣೆ ನೀಡುತ್ತಿರುವ ಉನ್ನತ ಮಟ್ಟದ ವ್ಯಕ್ತಿಗಳು ಇವತ್ತು ಕಂಬಿ ಎಣಿಸುತ್ತಿದ್ದಾರೆಯೇ? ಕೇವಲ ಕೆಳಹಂತದ ಕೆಲವು ಸಣ್ಣಪುಟ್ಟ ಜನರನ್ನು ಬಂಧಿಸಿ ಸರ್ಕಾರ ಕೈತೊಳೆದುಕೊಂಡಿದೆ. ಈಗ ಒಂದು ತಿಂಗಳ ಬಳಿಕ ಮತ್ತೆ ಎನ್‌ಟಿಎ (NTA) ಪರೀಕ್ಷೆ ನಡೆಸುತ್ತಿದೆ. ಆದರೆ ಈ ಬಾರಿಯೂ ಪ್ರಶ್ನೆಪತ್ರಿಕೆಗಳು ಮಾರುಕಟ್ಟೆಯಲ್ಲಿ ಮಾರಾಟವಾಗುವುದಿಲ್ಲ ಎಂಬುದಕ್ಕೆ ಗ್ಯಾರಂಟಿ ಎಲ್ಲಿದೆ? ಮೋದಿ ಸರ್ಕಾರ ದೇಶದ 22-23 ಲಕ್ಷ ವಿದ್ಯಾರ್ಥಿಗಳ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ” ಎಂದು ಆರೋಪಿಸಿದ್ದಾರೆ.

“ಪದೇ ಪದೇ ಸಂಭವಿಸುತ್ತಿರುವ ಇಂತಹ ವೈಫಲ್ಯಗಳು ಇಡೀ ಪೀಳಿಗೆಗೆ ಮಾಡಿದ ದ್ರೋಹ. ಯಾವ ಪರೀಕ್ಷಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯನ್ನೇ ನಂಬಲು ಸಾಧ್ಯವಿಲ್ಲವೋ, ಅಂತಹ ವ್ಯವಸ್ಥೆಯನ್ನು ನೀವು ನಡೆಸುತ್ತಿದ್ದರೆ ಅದು ದುರಂತ. ಅಪಾರ ಶ್ರಮ ವಹಿಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ ವಿದ್ಯಾರ್ಥಿಗಳಿಗೆ ಹಠಾತ್ತನೆ ಪೇಪರ್ ಲೀಕ್ ಆಗಿದೆ, ಭ್ರಷ್ಟಾಚಾರ ನಡೆದಿದೆ, ಅಪ್ರಾಮಾಣಿಕತೆ ಆವರಿಸಿದೆ ಮತ್ತು ಇಡೀ ಪ್ರಕ್ರಿಯೆಯೇ ಕಲುಷಿತಗೊಂಡಿದೆ ಎಂಬುದು ತಿಳಿದರೆ ಹೇಗಿರುತ್ತದೆ. ಕೆಲವು ಬಾರಿ ಪರೀಕ್ಷೆಗಳನ್ನು ರದ್ದುಗೊಳಿಸಲಾಗುತ್ತದೆ ಮತ್ತು ವಿದ್ಯಾರ್ಥಿಗಳು ಮತ್ತೆ ಮೊದಲಿನಿಂದ ಎಲ್ಲವನ್ನೂ ಆರಂಭಿಸಬೇಕಾಗುತ್ತದೆ,” ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿಬಿಎಸ್‌ಇ ಪರೀಕ್ಷೆಯಲ್ಲಿ ನ್ಯಾಯ ಕೇಳಿದ ವಿದ್ಯಾರ್ಥಿಗಳಿಗೆ ‘ದೇಶದ್ರೋಹಿ’ ಪಟ್ಟ ಕಟ್ಟುತ್ತಿರುವ ಕರಾಳ ಪ್ರವೃತ್ತಿ ಒಂದೆಡೆಯಾದರೆ, ಇನ್ನೊಂದೆಡೆ ‘ನೀಟ್’ನಂತಹ ಬೃಹತ್ ಪರೀಕ್ಷೆಗಳಲ್ಲಿ ವ್ಯವಸ್ಥಿತ ಲೀಕ್ ದಂಧೆಯ ಅಸಲಿ ರೂವಾರಿಗಳನ್ನು ಹಿಡಿಯದೆ ಲಕ್ಷಾಂತರ ಮಕ್ಕಳ ಭವಿಷ್ಯವನ್ನು ಆತಂಕಕ್ಕೆ ತಳ್ಳುತ್ತಿರುವುದು ದೇಶದ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವುದಕ್ಕೆ ಸಾಕ್ಷಿಯಾಗಿದೆ ಎಂದು ವಿರೋಧ ಪಕ್ಷಗಳು ಜರೆದಿವೆ.

ಸಂಸತ್ತಿನಲ್ಲಿ, “ರಾಷ್ಟ್ರೀಯ ಪರೀಕ್ಷೆಗಳ ಪಾವಿತ್ರ್ಯತೆಯನ್ನು ಕಾಪಾಡುವಲ್ಲಿ ಸರ್ಕಾರ ಏಕೆ ಪದೇ ಪದೇ ವಿಫಲವಾಗುತ್ತಿದೆ” ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಶ್ನಿಸಿದ್ದಾರೆ.

ರಾಜಸ್ಥಾನದ ಮಾಜಿ ಸಿಎಂ ಅಶೋಕ್ ಗೆಹ್ಲೋಟ್, “NEET ಮೂಲಭೂತವಾಗಿಯೇ ದೋಷಪೂರಿತವಾಗಿದೆ ಮತ್ತು ವೈದ್ಯಕೀಯ ಪ್ರವೇಶಕ್ಕಾಗಿ ಇದನ್ನು ರದ್ದುಗೊಳಿಸಿ, 12ನೇ ತರಗತಿಯ ಅಂಕಗಳನ್ನೇ ಪರಿಗಣಿಸಬೇಕು” ಎಂದಿದ್ದಾರೆ.

ಇದನ್ನೂ ಓದಿ: AI ಜೊತೆ ಸಂಸದನ ಸಂವಾದ; ಗೆದ್ದದ್ದು ಯಾರು?

ಆದರೆ, ಬಿಜೆಪಿ ಮಾತ್ರ ಈ ಎಲ್ಲಾ ಆರೋಪಗಳನ್ನ ಸಾರಾಸಗಟಾಗಿ ತಳ್ಳಿ ಹಾಕಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ವಾಟ್ಸಾಪ್‌ನಲ್ಲಿ ‘ಗೆಸ್ ಪೇಪರ್ಸ್’ ರೂಪದಲ್ಲಿ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದ್ದನ್ನು ಒಪ್ಪಿಕೊಂಡಿದ್ದಾರೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರವು ಮೇ.3 ರಂದು ನಡೆದ ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ, ಜೂನ್ 21 ರಂದು ರಾಷ್ಟ್ರವ್ಯಾಪಿ ಮರು ಪರೀಕ್ಷೆ ನಡೆಸುವುದಾಗಿ ಘೋಷಿಸಿದೆ. ದೇಶದ ಶಿಕ್ಷಣ ವ್ಯವಸ್ಥೆ ಜಾಗತಿಕ ಮಟ್ಟದಲ್ಲಿ ಅಪಮಾನಕ್ಕೊಳಗಾಗುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಯಾರ ಪ್ರಶ್ನೆಗೂ ಉತ್ತರ ಕೊಡುವ ಗೋಜಿಗೇ ಹೋಗಿಲ್ಲ. ಅವರು ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲೋ, ಮನ್‌ ಕೀ ಬಾತ್‌ ಕಾರ್ಯಕ್ರಮದಲ್ಲೋ ಕನಿಷ್ಟ ಸಂತ್ರಸ್ತ ವಿದ್ಯಾರ್ಥಿಗಳಿಗೆ ಸಾಂತ್ವನ ಹೇಳಿಲ್ಲ. ಉಳಿದಂತೆ ಬಿಜೆಪಿಯ ಯಾವ ಸಚಿವ, ಸಂಸದರೂ ಕೂಡ ಈ ಕುರಿತು ಪ್ರತಿಕ್ರಿಯೆ ನೀಡಿಲ್ಲ.

ದಕ್ಷಿಣ ಗೋವಾದ ಬಿಜೆಪಿ ಯುವ ಮೋರ್ಚಾದ ಮುಖಂಡ ತುಷಾರ್ ಕೇಳಕರ್ ಮಾಧ್ಯಮಗಳೊಂದಿಗೆ ಮಾತನಾಡಿ, ಪೇಪರ್ ಲೀಕ್ ದಂಧೆಯಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬನೂ ಕಠಿಣ ಕಾನೂನು ಕ್ರಮವನ್ನು ಎದುರಿಸಲಿದ್ದಾನೆ ಮತ್ತು ಎಲ್ಲರನ್ನೂ ಜೈಲಿಗೆ ಕಳುಹಿಸಲಾಗುವುದು ತೊಂದರೆಗೆ ಒಳಗಾಗಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಖಂಡಿತವಾಗಿಯೂ ನ್ಯಾಯ ಒದಗಿಸಲಿದೆ. ದೇಶದ ಕೆಲವು ಭಾಗಗಳಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿಯಾಗಿದೆ. ನಮಗೆ ಪ್ರಧಾನಿ ಮೋದಿ ಅವರ ಮೇಲೆ ನಂಬಿಕೆಯಿದೆ. ಅವರು ಈ ಇಡೀ ಪ್ರಕ್ರಿಯೆಯನ್ನು ಸರಿಪಡಿಸಿ ವಿದ್ಯಾರ್ಥಿಗಳಿಗೆ ನ್ಯಾಯ ಸಿಗುವಂತೆ ಮಾಡುತ್ತಾರೆ” ಸಮರ್ಥಿಸಿಕೊಂಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಟಿಂಗ್ ಆರೋಪದ ಸುತ್ತ ರಾಜಕೀಯ ಲೆಕ್ಕಾಚಾರ; ಸತ್ಯಾಸತ್ಯತೆ ಹೊಣೆಗಾರಿಕೆಯ ಪ್ರಶ್ನೆಗಳು

ಸಿದ್ದರಾಮಯ್ಯ ಅವರ ನಿರಾಕರಣೆ, ಕುಮಾರಸ್ವಾಮಿ ಅವರ ಆರೋಪಗಳು, ಆರ್. ಅಶೋಕ್ ಅವರ...

ಮಧ್ಯಪ್ರದೇಶ ಮರಳು ಮಾಫಿಯಾದ ಜೊತೆ ಸರ್ಕಾರಿ ಅಧಿಕಾರಿಗಳು ಶಾಮೀಲು; NGT ಕಳವಳ

ಮಧ್ಯಪ್ರದೇಶದಲ್ಲಿ ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಗಟ್ಟಲು ರಾಜ್ಯ ಸರ್ಕಾರ ರಚಿಸಿರುವ ಕಾರ್ಯಪಡೆ...

ಮೋದಿ ಭಾರತ ಕಂಡ ಅತ್ಯಂತ ದೊಡ್ಡ ಹೇಡಿ, ಪ್ರಧಾನಿಯಾಗಿರುವುದು ದುರದೃಷ್ಟಕರ: ಅಭಿಜೀತ್ ದೀಪ್ಕೆ ವಾಗ್ದಾಳಿ

ದೆಹಲಿಯ ಜಂತರ್ ಮಂತರ್‌ನಲ್ಲಿ ರಾಷ್ಟ್ರಧ್ವಜ ಹಾರಿಸಲು ಯತ್ನಿಸಿದ ಯುವ ಹೋರಾಟಗಾರರಾದ ಸೌರವ್...