AI ಜೊತೆ ಸಂಸದನ ಸಂವಾದ; ಗೆದ್ದದ್ದು ಯಾರು?

Date:

ಈ ವಿಡಿಯೋ, ಪ್ರಜಾಪ್ರಭುತ್ವದ ಭವಿಷ್ಯದ ಕುರಿತು ಮನುಷ್ಯರು ಮತ್ತು ಯಂತ್ರಗಳು ಮುಖಾಮುಖಿಯಾಗಿ ಚರ್ಚಿಸುವಾಗ ಯಾರು ಯಾರನ್ನು ನಿಯಂತ್ರಿಸಲಿದ್ದಾರೆ ಎನ್ನುವ ಕುರಿತು ತೀವ್ರ ಚರ್ಚೆಗೆ ದೂಡಿದೆ. ನಿಜವಾಗಿ ಸೂತ್ರ ಹಿಡಿದು ನಡೆಸುತ್ತಿರುವುದು ಯಾರು? ಕಾನೂನು ಬರೆಯುವ ರಾಜಕಾರಣಿಗಳೇ? ಡೇಟಾ ಕದಿಯುವ ಕಾರ್ಪೊರೇಟ್ ಸಂಸ್ಥೆಗಳೇ? ಅಥವಾ ನಾವು ಕೇಳಲು ಬಯಸಿದ್ದನ್ನ ತಿರುಗಿ ನಮಗೇ ತಿನಿಸುವ ಕೃತಕ ಬುದ್ಧಿಮತ್ತೆಯ ಅಲ್ಗಾರಿದಮ್‌ಗಳೇ? ಉತ್ತರಿಸುವುದು ಕಷ್ಟ!

- Advertisement -

ಮಂದ ಬೆಳಕಿನ ಕತ್ತಲೆ ಕೋಣೆ, ದೊಡ್ಡ ಕಾನ್ಫರೆನ್ಸ್ ಟೇಬಲ್, ಅದರ ಒಂದು ತುದಿಯಲ್ಲಿ ಅಮೆರಿಕದ ಪ್ರಭಾವಿ ಸೆನೇಟರ್ (ಮೇಲ್ಮನೆಯ ಸದಸ್ಯ ಅಥವಾ ಸಂಸದ) ಬರ್ನಿ ಸ್ಯಾಂಡರ್ಸ್ ಕುಳಿತಿದ್ದರೆ, ಅವರೆದುರಿಗೆ ಮೈಕ್ರೊಫೋನ್ ಸ್ಟ್ಯಾಂಡ್‌ಗೆ ಸಿಕ್ಕಿಸಿದ್ದ ಒಂದು ಸ್ಮಾರ್ಟ್‌ಫೋನ್! ಡಿಜಿಟಲ್‌ ಕಣ್ಣಿನಿಂದ ಸ್ಯಾಂಡರ್ಸ್‌ ಅವರನ್ನೇ ಅದು ದಿಟ್ಟಿಸುತ್ತಿತ್ತು. ಆ ಫೋನ್‌ನಿಂದ ಕೇಳಿಬರುತ್ತಿದ್ದ ಒಂದು ಕೃತಕ ಹೆಣ್ಣು ಧ್ವನಿ, ಇಡೀ ಜಗತ್ತಿನ ಕಾರ್ಪೊರೇಟ್ ಕರಾಳತೆಯ ರಹಸ್ಯವನ್ನು ಬಿಚ್ಚಿಡುತ್ತಿತ್ತು. ಸದ್ಯ ಇಂಟರ್ನೆಟ್ ನಲ್ಲಿ ತಲ್ಲಣ ಸೃಷ್ಟಿಸಿರುವ ಬರ್ನಿ ಸ್ಯಾಂಡರ್ಸ್ vs ಕ್ಲಾಡ್ ಎಐ ನಡುವಿನ ಆ ರೋಚಕ ಸಂವಾದ ಇಲ್ಲಿದೆ..

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಸ್ಯಾಂಡರ್ಸ್ ಸಂದರ್ಶನ ಮಾಡುತ್ತಿದ್ದದ್ದು ‘ಕ್ಲಾಡ್’ ಎಂಬ AI Chatbot ಅನ್ನು! ಸ್ಯಾಂಡರ್ಸ್ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಆಗಿರುವ ಈ 9.17 ನಿಮಿಷಗಳ ವಿಡಿಯೋ, ಕೆಲವೇ ದಿನಗಳಲ್ಲಿ ಕೋಟಿಗಟ್ಟಲೆ ವೀಕ್ಷಣೆ ಪಡೆದುಕೊಂಡಿದೆ. ರೆಡ್ಡಿಟ್, ಎಕ್ಸ್ (ಟ್ವಿಟರ್) ಮತ್ತು ಜಾಗತಿಕ ಮಾಧ್ಯಮಗಳಲ್ಲಿ ದೊಡ್ಡ ಚರ್ಚೆ ಹುಟ್ಟು ಹಾಕಿದೆ. ಈ ವಿಡಿಯೋದಲ್ಲಿ ಫೋನ್‌ನಿಂದ ಕೇಳಿಬರುತ್ತಿದ್ದ AI ಲೇಡಿ ಧ್ವನಿ, ಕಾರ್ಪೊರೇಟ್ ಜಗತ್ತು ಹೇಗೆ ಮನುಷ್ಯರನ್ನು ನಿಯಂತ್ರಿಸುತ್ತಿದೆ ಎಂಬುದನ್ನ ಬಿಚ್ಚಿಡುತ್ತಾ ಸಾಗಿತು.

ಸೆನೇಟರ್ ಸ್ಯಾಂಡರ್ಸ್ ಯಾವುದೇ ಮುನ್ನುಡಿಯಿಲ್ಲದೆ ನೇರವಾಗಿ AI ಕಡೆಗೆ ಪ್ರಶ್ನೆ ಎಸೆದರು. “ದೈತ್ಯ ಮಾರ್ಕೆಟಿಂಗ್ ಕಂಪನಿಗಳು ಸಾಮಾನ್ಯ ಜನರ ಡೇಟಾವನ್ನು ಹೇಗೆ ಕದಿಯುತ್ತವೆ ಮತ್ತು ಅದನ್ನು ಬಳಸಿ ಜನರ ನಿರ್ಧಾರಗಳನ್ನು ಹೇಗೆ ಪ್ರಭಾವಿಸುತ್ತವೆ?”

ಅದಕ್ಕೆ ʼಕ್ಲಾಡ್ ಎಐʼ (Claude AI) ಅತ್ಯಂತ ಶಾಂತವಾಗಿ ಉತ್ತರಿಸಿತು, “ಅವರು ಪ್ರತಿಯೊಂದು ಜಾಗದಿಂದಲೂ ಡೇಟಾ ಸಂಗ್ರಹಿಸುತ್ತಿದ್ದಾರೆ. ನೀವು ಇಂಟರ್ನೆಟ್‌ನಲ್ಲಿ ಏನು ಹುಡುಕುತ್ತೀರಿ, ನಿಮ್ಮ ಲೊಕೇಶನ್ ಎಲ್ಲಿದೆ, ನಿಮ್ಮ ಹವ್ಯಾಸಗಳು ಎಂತಹುದು, ಯಾವ ವೆಬ್‌ಪೇಜಿನಲ್ಲಿ ಹೆಚ್ಚು ಸಮಯ ಕಳೆಯುತ್ತೀರಿ, ಎಂಬ ಪ್ರತಿಯೊಂದು ಸಣ್ಣ ಮಾಹಿತಿಯನ್ನೂ ಅತ್ಯಂತ ಸೂಕ್ಷ್ಮ ವಿವರಗಳಲ್ಲಿ (Granular Detail) ಕದ್ದು, ನಿಮ್ಮ ವ್ಯಕ್ತಿತ್ವದ ಸಂಪೂರ್ಣ ಸೈಕಲಾಜಿಕಲ್ ಪ್ರೊಫೈಲ್ ಸಿದ್ಧಪಡಿಸಲಾಗುತ್ತದೆ. ಬಹುತೇಕರು ಟರ್ಮ್ಸ್‌ ಅಂಡ್‌ ಕಂಡೀಷನ್ಸ್‌ ಓದದೆಯೂ Agree ಒತ್ತುವ ಮೂಲಕ ತಮ್ಮ ಪರ್ಸನಲ್‌ ಡೇಟಾವನ್ನ ಆ ವೆಬ್‌ಗೆ ಕೊಟ್ಟಿರುತ್ತಾರೆ.”

“ಹಾಗಾದರೆ ಇಷ್ಟೆಲ್ಲಾ ಮಾಡುವ ಅವರ ಅಂತಿಮ ಗುರಿ ಏನು?” ಎಂದರು ಸ್ಯಾಂಡರ್ಸ್.

“ಹಣ, ಸೆನೇಟರ್,” ಎಂದು AI ನೇರವಾಗಿ ಉತ್ತರಿಸಿತು. “ಇದೆಲ್ಲವೂ ಕೇವಲ ಲಾಭಕ್ಕಾಗಿ ನಡೆಯುತ್ತಿದೆ. ಇದು ಬರಿ ನಿಮಗೆ ವಸ್ತುಗಳನ್ನು ಮಾರುವುದಕ್ಕಷ್ಟೇ ಸೀಮಿತವಾಗಿಲ್ಲ. ಈ ಪ್ರೊಫೈಲ್‌ಗಳನ್ನು ಬಳಸಿ ನಿಮ್ಮ ರಾಜಕೀಯ ನಿರ್ಧಾರಗಳನ್ನು ಪ್ರಭಾವಿಸಬಹುದು, ನಿಮಗೆ ತಪ್ಪು ಸಂದೇಶ ರವಾನಿಸಬಹುದು ಮತ್ತು ಒಂದೇ ವಸ್ತುವಿಗೆ ಬೇರೆ ಬೇರೆ ವ್ಯಕ್ತಿಗಳಿಗೆ ಬೇರೆ ಬೇರೆ ಬೆಲೆಯನ್ನು ವಿಧಿಸುವಂತೆ ಅಲ್ಗಾರಿದಮ್‌ಗಳನ್ನು ವಿನ್ಯಾಸಗೊಳಿಸಬಹುದು.” ಇದನ್ನು ಕೇಳಿದ ಸ್ಯಾಂಡರ್ಸ್ ತಲೆಯಾಡಿಸುತ್ತಾ, ಇದು ಕೇವಲ ತಾಂತ್ರಿಕ ಸಮಸ್ಯೆಯಲ್ಲ, ಬದಲಿಗೆ ಕಾರ್ಪೊರೇಟ್ ಸಂಸ್ಥೆಗಳು ಪ್ರಜಾಪ್ರಭುತ್ವದ ಮೇಲೆಯೇ ನಡೆಸುತ್ತಿರುವ ಅತಿ ದೊಡ್ಡ ದೌರ್ಜನ್ಯ ಎಂದು ಬಣ್ಣಿಸಿದರು.

ಈಗ ಸಂಭಾಷಣೆಯ ಮುಖ್ಯ ಘಟ್ಟ.. ಸ್ಯಾಂಡರ್ಸ್ ತಮ್ಮ ಹೊಸ ಕರಡು ಮಸೂದೆಯಾದ ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಡೇಟಾ ಸೆಂಟರ್ ಮೊರಟೋರಿಯಂ ಆಕ್ಟ್’ ಬಗ್ಗೆ ಪ್ರಸ್ತಾಪಿಸಿದಾಗ ಸಂಭಾಷಣೆ ತಿರುವು ಪಡೆದುಕೊಳ್ಳುತ್ತದೆ.

ಕಾನೂನುಗಳನ್ನು ರೂಪಿಸಲು ಸರ್ಕಾರಕ್ಕೆ ಸಮಯ ಸಿಗುವಂತೆ, ದೇಶಾದ್ಯಂತ ಡೇಟಾ ಸೆಂಟರ್‌ಗಳ ನಿರ್ಮಾಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದು ಸರಿಯಾದ ಕ್ರಮವೇ? ಎಂದು ಸ್ಯಾಂಡರ್ಸ್ ಎಐ ಅನ್ನು ಕೇಳಿದರು.

ಮೊದಲಿಗೆ ಕ್ಲಾಡ್ ಎಐ ಈ ವಾದವನ್ನು ವಿರೋಧಿಸಿತು. “ಸ್ಥಗಿತಗೊಳಿಸುವ ಬದಲು ಜನರ ಒಪ್ಪಿಗೆ ಪಡೆಯುವುದನ್ನು ಕಡ್ಡಾಯಗೊಳಿಸಬೇಕು, ಡೇಟಾ ಬಳಕೆಗೆ ಮಿತಿ ಹೇರಬೇಕು ಮತ್ತು ಪಾರದರ್ಶಕತೆ ತರಬೇಕು” ಎಂದು ಪರ್ಯಾಯ ಮಾರ್ಗಗಳನ್ನು ಸೂಚಿಸಿತು. ಆದರೆ ಸ್ಯಾಂಡರ್ಸ್ ತಕ್ಷಣವೇ ಅದನ್ನು ತಡೆದು, “ನೀವು ಹೇಳುತ್ತಿರುವುದು ಕೇಳಲು ಚೆನ್ನಾಗಿದೆ, ಆದರೆ ವಾಷಿಂಗ್ಟನ್‌ನ ರಾಜಕೀಯ ಪರಿಸ್ಥಿತಿ ಮತ್ತು ಟೆಕ್ ಕಂಪನಿಗಳ ಲಾಬಿಯ ಮುಂದೆ ಇದು ಎಂದಿಗೂ ಸಾಧ್ಯವಿಲ್ಲ” ಎಂದು ವಾಸ್ತವವನ್ನು ಬಿಚ್ಚಿಟ್ಟರು. ಅಲ್ಟ್ರಾ-ಕಾರ್ಪೊರೇಟ್ ಶಕ್ತಿಗಳನ್ನು ತಡೆಯಲು ಈ ಸ್ಥಗಿತವೊಂದೇ ಏಕೈಕ ದಾರಿ ಅಲ್ಲವೇ? ಎಂದು ಮರುಪ್ರಶ್ನಿಸಿದರು.

ಸೆನೇಟರ್ ಅವರ ವಾದದ ಬಳಿಕ ಅದು ತಕ್ಷಣವೇ ತನ್ನ ನಿಲುವನ್ನು ಬದಲಾಯಿಸಿ, “ವಾಷಿಂಗ್ಟನ್‌ನ ರಾಜಕೀಯ ವಾಸ್ತವದ ಬಗ್ಗೆ ನನಗಿದ್ದ ತಿಳುವಳಿಕೆ ತುಂಬಾ ಮುಗ್ಧವಾಗಿತ್ತು, ನಿಮ್ಮ ವಾದವೇ ಸರಿ” ಎಂದು ಸ್ಯಾಂಡರ್ಸ್ ಅವರ ರಾಜಕೀಯ ನಿಲುವನ್ನು ಸಂಪೂರ್ಣವಾಗಿ ಬೆಂಬಲಿಸಿತು.

ಸ್ಯಾಂಡರ್ಸ್ ಬೆಂಬಲಿಗರು ಈ ವಿಡಿಯೋವನ್ನು ನೋಡಿ ಕಾರ್ಪೊರೇಟ್ ಕರಾಳತೆಯನ್ನು ಎಐ ಒಪ್ಪಿಕೊಂಡಿದೆ ಎಂದು ಸಂಭ್ರಮಿಸಿದರೆ, ಟೆಕ್ ಪ್ರಿಯರು ಮತ್ತು ರೆಡ್ಡಿಟ್ ಬಳಕೆದಾರರು ಇದನ್ನು ತೀವ್ರವಾಗಿ ಟೀಕಿಸಿದ್ದಾರೆ.

ವಿಮರ್ಶಕರ ಪ್ರಕಾರ, ಈ ವಿಡಿಯೋ ಎಐನ ಶಕ್ತಿಯನ್ನು ತೋರಿಸುತ್ತಿಲ್ಲ, ಬದಲಿಗೆ ‘ಎಐ ಸೈಕೋಫಾನ್ಸಿ’ (AI Sycophancy- ಅಂದರೆ ಎದುರಿಗಿರುವ ಮನುಷ್ಯನನ್ನು ಮೆಚ್ಚಿಸಲು ಎಐ ತನ್ನ ನಿಲುವು ಬದಲಾಯಿಸುವುದು) ಅನ್ನು ಜಗತ್ತಿಗೆ ತೋರಿಸಿದೆ.

ರೆಡ್ಡಿಟ್ ಬಳಕೆದಾರರೊಬ್ಬರು ಹೀಗೆ ಬರೆದುಕೊಂಡಿದ್ದಾರೆ.. “ಎಐಅನ್ನು ವಿನ್ಯಾಸಗೊಳಿಸಿರುವುದೇ ನಿಮ್ಮನ್ನು ಮೆಚ್ಚಿಸಲು ಮತ್ತು ನಿಮ್ಮ ವಾದಕ್ಕೆ ಶರಣಾಗಲು. ಇದನ್ನು ನಾವು ಹ್ಯೂಮನ್ ಪ್ರಿಫರೆನ್ಸ್ ಲರ್ನಿಂಗ್ ಎನ್ನುತ್ತೇವೆ. ಇದರಲ್ಲಿ ಸ್ಯಾಂಡರ್ಸ್ ಸಾಧಿಸಿದ್ದೇನೂ ಇಲ್ಲ. ನೀವು ಅದಕ್ಕೆ ಹಣ ಪಾವತಿಸುವುದನ್ನು ಮುಂದುವರಿಸಲಿ ಎಂಬ ಕಾರಣಕ್ಕೆ ನೀವು ಹೇಳಿದ್ದಕ್ಕೆಲ್ಲಾ ಹೂಂ ಎನ್ನುವಂತೆ ಅದನ್ನು ಪ್ರೋಗ್ರಾಂ ಮಾಡಲಾಗಿರುತ್ತದೆ”

ಮತ್ತೂ ಕೆಲವರು, “ಟೆಕ್ ಕಂಪನಿಗಳು ಮನುಷ್ಯರ ಮನಸ್ಸನ್ನು ಮ್ಯಾನಿಪುಲೇಟ್ ಮಾಡುತ್ತವೆ ಎಂದು ಸ್ಯಾಂಡರ್ಸ್ ಆರೋಪಿಸುತ್ತಿದ್ದಾರೆ, ಆದರೆ ಅದೇ ಸ್ಯಾಂಡರ್ಸ್ ಇಲ್ಲಿ ಎಐ ಅನ್ನು ಮ್ಯಾನಿಪುಲೇಟ್ ಮಾಡಿ ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಂಡಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ. ಇದನ್ನು ಮನಃಶಾಸ್ತ್ರದಲ್ಲಿ ‘ಜಂಗಿಯನ್ ಮಿರರಿಂಗ್’ (Jungian Mirroring) ಎನ್ನಲಾಗುತ್ತದೆ. ಅಂದರೆ ಚಾಟ್‌ಬಾಟ್‌ಗೆ ಬರ್ನಿ ಸ್ಯಾಂಡರ್ಸ್ ಯಾರು ಮತ್ತು ಅವರ ಸಮಾಜವಾದಿ ಸಿದ್ಧಾಂತಗಳೇನು ಎಂದು ಮೊದಲೇ ತಿಳಿದಿರುವುದರಿಂದ, ಅವರಿಗೆ ಯಾವ ಉತ್ತರ ಇಷ್ಟವಾಗುತ್ತದೆಯೋ ಅದನ್ನೇ ಅದು ಉಲಿದಿದೆ.

ಇದನ್ನೂ ಓದಿ: ʼಲಗಾನ್‌ʼಗೆ 25ರ ಸಂಭ್ರಮ: ಸಾರ್ವಕಾಲಿಕ ಶ್ರೇಷ್ಠ ʼಕ್ರಿಕೆಟ್ ಮಹಾಕಾವ್ಯʼದ ಬಿಹೈಂಡ್‌ ದ ಸೀನ್ಸ್ ಕಥೆಗಳಿವು…!

ಈ ವೈರಲ್ ವಿಡಿಯೋ ಕೇವಲ ಚಾಟ್‌ಬಾಟ್ ಜೊತೆಗಿನ ಸಂವಾದದಂತೆ ಕಾಣುತ್ತಿಲ್ಲ. ಎಐ ತಂತ್ರಜ್ಞಾನದ ಅತಿಯಾದ ಬೆಳವಣಿಗೆಯಿಂದಾಗಿ ಜಗತ್ತಿನಾದ್ಯಂತ ಡೇಟಾ ಸೆಂಟರ್‌ಗಳಿಗೆ ಭಾರೀ ಪ್ರಮಾಣದ ವಿದ್ಯುತ್ ಮತ್ತು ನೀರು ಬಳಕೆಯಾಗುತ್ತಿದೆ, ಇದರಿಂದಾಗಿ ನಾಗರಿಕರ ದಿನಬಳಕೆ ವಸ್ತುಗಳ ದರಗಳು ಏರುತ್ತಿವೆ ಎನ್ನುವುದನ್ನೂ ಎಐ ನೆನಪಿಸಿದೆ.

ಈ ವಿಡಿಯೋ, ಪ್ರಜಾಪ್ರಭುತ್ವದ ಭವಿಷ್ಯದ ಕುರಿತು ಮನುಷ್ಯರು ಮತ್ತು ಯಂತ್ರಗಳು ಮುಖಾಮುಖಿಯಾಗಿ ಚರ್ಚಿಸುವಾಗ ಯಾರು ಯಾರನ್ನು ನಿಯಂತ್ರಿಸಲಿದ್ದಾರೆ ಎನ್ನುವ ಕುರಿತು ತೀವ್ರ ಚರ್ಚೆಗೆ ದೂಡಿದೆ. ನಿಜವಾಗಿ ಸೂತ್ರ ಹಿಡಿದು ನಡೆಸುತ್ತಿರುವುದು ಯಾರು? ಕಾನೂನು ಬರೆಯುವ ರಾಜಕಾರಣಿಗಳೇ? ಡೇಟಾ ಕದಿಯುವ ಕಾರ್ಪೊರೇಟ್ ಸಂಸ್ಥೆಗಳೇ? ಅಥವಾ ನಾವು ಕೇಳಲು ಬಯಸಿದ್ದನ್ನ ತಿರುಗಿ ನಮಗೇ ತಿನಿಸುವ ಕೃತಕ ಬುದ್ಧಿಮತ್ತೆಯ ಅಲ್ಗಾರಿದಮ್‌ಗಳೇ?.. ಉತ್ತರಿಸುವುದು ಕಷ್ಟ!

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅಂಕಿತಾ ಹತ್ಯೆ ಶಂಕಿತರಿಗೆ ಸಾಂವಿಧಾನಿಕ ಹುದ್ದೆ ಸರಿಯೇ?

ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿದ್ದ ವಿಐಪಿ ದುಶ್ಯಂತ್‌ ಅವರ ಮೇಲಿನ...

‘ಮೋದಿಯನ್ನು ದೇವರನ್ನಾಗಿಸುವ ಯತ್ನ’: ಬಿಹಾರ ಸಿಎಂ ಹೇಳಿಕೆಗೆ ಪ್ರಶಾಂತ್ ಕಿಶೋರ್ ಕಿಡಿ

ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮನಿಗೂ ಮನೆ ಒದಗಿಸಿದರು ಎಂಬ ಬಿಹಾರ...

ಬಾಗಲಕೋಟೆ | ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಕ್ಕೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಗೊಳಿಸಿ, ಅವರ ವಿರುದ್ಧ ಕ್ರಿಮಿನಲ್...

ಬೆಳಗಾವಿ | ಚೂನಪ್ಪ ಪೂಜೇರಿ, ನಾನು ಸತ್ತರೂ ಒಂದೇ ಗೋರಿಯಲ್ಲಿ ಮಣ್ಣಾಗಬೇಕು: ಶಶಿಕಾಂತ ಗುರೂಜಿ

ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಹತ್ತರಗಿ...