ನಾರಾಯಣ ಮೂರ್ತಿಯ ವಾರಕ್ಕೆ 70 ಗಂಟೆ ದುಡಿಮೆ ಹೇಳಿಕೆ: ನೆಟ್ಟಿಗರಿಂದ ಆಕ್ರೋಶ

Date:

Advertisements

ದೇಶದ ಕೆಲಸದ ಸಂಸ್ಕೃತಿಯನ್ನು ಮೇಲ್ದರ್ಜೆಗೇರಿಸಲು ಹಾಗೂ ಜಾಗತಿಕ ಮಟ್ಟದಲ್ಲಿನ ಪರಿಣಾಮಕಾರಿಯಾಗಿ ಸ್ಪರ್ಧಿಸಲು ಭಾರತದ ಯುವಜನರು ವಾರಕ್ಕೆ 70 ಗಂಟೆ ಕೆಲಸ ಮಾಡಲು ಸಿದ್ಧರಾಗಬೇಕು ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ಎನ್‌ ಆರ್ ನಾರಾಯಣ ಮೂರ್ತಿ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ವಾರಕ್ಕೆ 70 ಗಂಟೆ ದುಡಿಮೆಗೆ ಮೀಸಲಿಟ್ಟರೆ ಉತ್ಪಾದಕತೆಗಿಂತ ಕೆಲಸಗಾರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಕೆಲಸದ ಮೇಲೆ ಅತಿಯಾದ ಗಮನವು ದೈಹಿಕ ಮತ್ತು ಮಾನಸಿಕ ಆರೋಗ್ಯ ಸೇರಿದಂತೆ ಒಟ್ಟಾರೆ ಯೋಗಕ್ಷೇಮದಲ್ಲಿ ಕ್ಷೀಣತೆಗೆ ಕಾರಣವಾಗಬಹುದು ಎಂದು ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

70 ಗಂಟೆಗಳ ದೀರ್ಘ ಕಾಲ ಕೆಲಸ ಮಾಡುವುದರಿಂದ ವೈಯಕ್ತಿಕ ಮತ್ತು ಕೌಟುಂಬಿಕ ಜೀವನದ ಮೇಲೆ ಪರಿಣಾಮವನ್ನು ಬೀರುವುದರ ಬಗ್ಗೆ ಟೆಕ್ಕಿಗಳು ಪ್ರಶ್ನಿಸಿದ್ದಾರೆ.

Advertisements

ನಾರಾಯಣ ಮೂರ್ತಿಯವರ ಈ ಹೇಳಿಕೆಯು ಮಾಲೀಕರು ಮತ್ತು ಉದ್ಯೋಗಿಗಳ ನಡುವೆ ಬೆಳೆಯುತ್ತಿರುವ ಸಂಪತ್ತಿನ ಅಸಮಾನತೆಯನ್ನು ಎತ್ತಿ ತೋರಿಸುತ್ತದೆ. ನಿರಂತರ ದುಡಿಮೆಯಿಂದ ಉತ್ಪತ್ತಿ ಹೆಚ್ಚಳಕ್ಕಿಂತ ಅನಾನುಕೂಲವೇ ಹೆಚ್ಚು ಎಂದು ಹಲವರು ಟೀಕಿಸಿದ್ದಾರೆ.

ಬಾಲಿವುಡ್‌ ನಟ ವೀರ್‌ ದಾಸ್‌ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದು, ನೀವು ವಾರದಲ್ಲಿ 5 ದಿನ 70 ಗಂಟೆಗಳು ಕೆಲಸ ಮಾಡಬೇಕು ಎಂದರೆ ಬೆಳಗ್ಗೆ 9 ರಿಂದ ರಾತ್ರಿ 11 ಗಂಟೆಯವರೆಗೂ ಕೆಲಸ ಮಾಡಬೇಕು. ಈ ರೀತಿ ಮಾಡಿದರೆ ಬೆಳಗ್ಗೆ 7.30ಕ್ಕೆ ಹೊರಟು ರಾತ್ರಿ 12.30ಕ್ಕೆ ವಾಪಸ್‌ ಮನೆಗೆ ಬರಬೇಕಾಗುತ್ತದೆ. ಇದಕ್ಕಾಗಿ ನೀವು ನಿಮ್ಮ ಸುಖ ಸಂತೋಷ, ಖಾಸಗಿ ಬದುಕು ಎಲ್ಲವನ್ನು ತ್ಯಾಗ ಮಾಡಿ ಕಚೇರಿಯೇ ನಮ್ಮ ಜೀವನ ಎಂದುಕೊಂಡು ಇರಬೇಕಾಗುತ್ತದೆ ಎಂದಿದ್ದಾರೆ.

ಅದೇ ರೀತಿ ನಾರಾಯಣ ಮೂರ್ತಿ ಅವರನ್ನು ಕಿಚಾಯಿಸಿರುವ ವೀರ್‌ ದಾಸ್, “ಜೀವನ ಕಷ್ಟ. ನೀವು ಹುಡುಗಿಯನ್ನು ಭೇಟಿಯಾಗುತ್ತೀರಿ, ಪ್ರೀತಿಯಲ್ಲಿ ಬೀಳುತ್ತೀರಿ, ಮದುವೆಯಾಗುತ್ತೀರಿ. ನೀವು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ಆಕೆಯ ತಂದೆ ಬಯಸುತ್ತಾರೆ. ನೀವು ಕಷ್ಟಪಟ್ಟು ಕೆಲಸ ಮಾಡಲು ಸಾಧ್ಯವಿಲ್ಲ, ನೀವು ಸಂತೋಷ ಬಯಸಲು ಇಂಗ್ಲೆಂಡ್‌ಗೆ ಓಡಿ ಹೋಗುತ್ತೀರಿ” ಎಂದಿದ್ದಾರೆ.

ನಾರಾಯಣ ಮೂರ್ತಿ ಅವರ ಹೇಳಿಕೆಯು ಮಹಿಳೆಯರನ್ನು ಕೆಲಸದ ಸ್ಥಳದಿಂದ ಹೊರಹಾಕುವ ಪ್ರಯತ್ನವಲ್ಲದೆ ಮತ್ತೇನಿಲ್ಲ. 70 ಗಂಟೆ ಕೆಲಸ ಮಾಡುವುದರಿಂದ ಮಹಿಳೆಯ ಮನೆಗೆಲಸ, ಆರೈಕೆ ಮತ್ತು ಮಕ್ಕಳ ಪಾಲನೆಯ ಮೇಲೆ ಪರಿಣಾಮ ಬೀರುತ್ತದೆ. ಪುರುಷರು ಆಕೆಯ ಕೆಲಸವನ್ನು ಹಂಚಿಕೊಳ್ಳುವುದಿಲ್ಲ. ಆದ ಕಾರಣ ಆಕೆ ಕೆಲಸದಿಂದ ಹೊರಗುಳಿಯುವುದನ್ನು ಬಿಟ್ಟು ಬೇರೆ ಆಯ್ಕೆ ಇರುವುದಿಲ್ಲ ಎಂದು ಹಲವು ಮಹಿಳೆಯರು ಅಭಿಪ್ರಾಯಪಟ್ಟಿದ್ದಾರೆ.

ಈ ಹೇಳಿಕೆಯು ಕಿರಿಯ ಉದ್ಯೋಗಿಗಳನ್ನು ಅಲ್ಲದೆ ಕಡಿಮೆ ವೇತನ ಪಡೆಯುತ್ತಿರುವವರನ್ನು ಶೋಷಿಸುತ್ತದೆ ಮತ್ತು ಅತಿಯಾಗಿ ಕೆಲಸ ಮಾಡಿಸುವ ಸಾಧ್ಯತೆಯಿರುತ್ತದೆ ಎಂದು ಹಲವರು ತಿಳಿಸಿದ್ದಾರೆ.

“ಕಾರ್ಮಿಕರಿಗೆ ಗೌರವಯುತ ಜೀವನವನ್ನು ಖಾತ್ರಿಪಡಿಸಲು ಭಾರತದ ಸಂವಿಧಾನ ಪಿತಾಮಹ ಡಾ. ಬಿ. ಆರ್‌ ಅಂಬೇಡ್ಕರ್ ಅವರು 1942 ರಲ್ಲಿ ನಿತ್ಯ 8 ಗಂಟೆಗಳ ಕೆಲಸದ ನಿಯಮವನ್ನು ಜಾರಿಗೆ ತಂದರು. ಇದು ಅಷ್ಟೇನೂ ಕಾರ್ಯಗತವಾಗಿಲ್ಲ. ಈಗ.. ನಾರಾಯಣ ಮೂರ್ತಿ ಅವರು ವಾರಕ್ಕೆ 70 ಗಂಟೆಗಳ ಕೆಲಸವನ್ನು ಜಾರಿಗೊಳಿಸಲು ಬಯಸುತ್ತಿದ್ದಾರೆ. ಶುದ್ಧ ಸಸ್ಯಾಹಾರ, ಜಾತಿ ವ್ಯವಸ್ಥೆ ಮತ್ತು ಮಹಿಳೆಯರು ಗುಲಾಮರಂತೆ ಬಳಸುವುದಲ್ಲದೆ ಮತ್ತೇನಿಲ್ಲ” ಎಂದು ಹಲವರು ಆಕ್ರೋಶ ಹೊರ ಹಾಕಿದ್ದಾರೆ.

ಯುವ ಜನರು ಕುಟುಂಬ, ತಮಗಾಗಿ ಸಮಯ ನೀಡಲಾಗದೆ ಕೆಲಸದ ಹೊರೆಯಿಂದಾಗಿ ಈಗಾಗಲೇ ಚಿಕ್ಕ ವಯಸ್ಸಿನಲ್ಲಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಹೀಗಿರುವಾಗ ದಿನಕ್ಕೆ 12 ಗಂಟೆಗಳ ಸರಾಸರಿಯಲ್ಲಿ ದುಡಿಯಬೇಕು ಎಂದು ಕರೆ ನೀಡುವುದು ದೇಶದ ಆರೋಗ್ಯ ವ್ಯವಸ್ಥೆಯೇ ಕುಸಿದುಬೀಳಲು ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಕಾರ್ಪೊರೇಟ್ ಕಂಪೆನಿಗಳು ದೇಶದ ಪ್ರಗತಿ ನೆಪವೊಡ್ಡಿ ತಮ್ಮ ಲಾಭಕ್ಕಾಗಿ ಬೇಳೆ ಬೇಯಿಸಿಕೊಳ್ಳುವ ಹುನ್ನಾರ ಇದು ಎಂದು ಮತ್ತು ಕೆಲವರು ಕಿಡಿಕಾರಿದ್ದಾರೆ.

“ಮದುವೆಯಾಗಬೇಡಿ, ಮಕ್ಕಳು ಮಾಡಿಕೊಳ್ಳಬೇಡಿ. ಕೆಲಸ ಜೀವನದ ಸಮತೋಲನದ ಬಗ್ಗೆ ಯೋಚಿಸಲೂ ಹೋಗಬೇಡಿ. ಕಂಪೆನಿಗಳಿಗಾಗಿ 12 ಗಂಟೆ ಕಾಲ ಕೆಲಸ ಮಾಡಿ. ಇದರಿಂದ ಅವರು ಲಕ್ಷಗಟ್ಟಲೆ ಲಾಭ ಗಳಿಸಬಹುದು ಹಾಗೂ ನಿಮಗೆ ಕಡಲೆಬೀಜದಷ್ಟು ನೀಡಬಹುದು (ಅಲ್ಪ ವೇತನ). ಅದ್ಭುತ ಸಲಹೆ” ಎಂದು ಟೀಕಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕತಾರ್: 8 ಮಾಜಿ ಭಾರತೀಯ ನೌಕಾಪಡೆ ಸಿಬ್ಬಂದಿಗೆ ಮರಣದಂಡನೆ

3ಒನ್4 ಕ್ಯಾಪಿಟಲ್‌ನ ಪಾಡ್‌ಕಾಸ್ಟ್ ‘ದಿ ರೆಕಾರ್ಡ್‌’ನ ಉದ್ಘಾಟನಾ ಸಂಚಿಕೆಯಲ್ಲಿ ಇನ್‌ಫೋಸಿಸ್‌ನ ಮಾಜಿ ಸಿಎಫ್‌ಒ ಮೋಹನ್‌ದಾಸ್ ಪೈ ಜತೆ ಸಂಭಾಷಣೆ ನಡೆಸಿದ ನಾರಾಯಣ ಮೂರ್ತಿ, ಭಾರತದಲ್ಲಿ ಯುವಪೀಳಿಗೆ ಕೆಲಸದಲ್ಲಿ ಕಳೆಯುವ ಸಮಯ ವಿಶ್ವದಲ್ಲೇ ಅತ್ಯಂತ ಕಡಿಮೆಯಾಗಿದೆ. ಇದನ್ನು ಹೆಚ್ಚಿಸಲು ದೇಶದ ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಎರಡನೆಯ ಮಹಾಯುದ್ಧದ ನಂತರ, ಜಪಾನ್ ಮತ್ತು ಜರ್ಮನಿ ಇದನ್ನು ಮಾಡುವ ಮೂಲಕ ಅಭಿವೃದ್ಧಿಯ ಪರ್ವವನ್ನು ಮುಟ್ಟಿದವು. ಹೀಗಾಗಿ ಇದನ್ನು ನಾವು ಅನುಸರಿಸಬೇಕು ಎಂದಿದ್ದರು.

“ಭಾರತದ ಕೆಲಸದ ಉತ್ಪಾದಕತೆ ವಿಶ್ವದಲ್ಲೇ ಅತ್ಯಂತ ಕಡಿಮೆಯಾಗಿದೆ. ನಾವು ಸರ್ಕಾರದ ಮಟ್ಟದಲ್ಲಿ ಭ್ರಷ್ಟಾಚಾರವನ್ನು ಕಡಿಮೆ ಮಾಡದ ಹೊರತು ಮತ್ತು ಅಧಿಕಾರಶಾಹಿಯ ವಿಳಂಬವನ್ನು ನಿಗ್ರಹಿಸದ ಹೊರತು, ಪ್ರಚಂಡ ಪ್ರಗತಿಯನ್ನು ಸಾಧಿಸಿದ ದೇಶಗಳೊಂದಿಗೆ ನಾವು ಸ್ಪರ್ಧಿಸಲು ಸಾಧ್ಯವಿಲ್ಲ” ಎಂದು ಈ ಸಂದರ್ಭದಲ್ಲಿ ಹೇಳಿದ್ದರು.

 

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ದಿನಕ್ಕೆ ೧೨ ಗಂಟೆ ಕೆಲಸ ಮಾಡಬೇಕೆಂಬ ಕೇಂದ್ರ ಸರ್ಕಾರದ ತೀರ್ಮಾನದ ಹಿಂದೆ ನಿಂತು ಕೆಲಸ ಮಾಡಿದ ಇಂತಹ ಜನ ಈಗ ದೇಶದ ಅಭಿವೃದ್ಧಿ ದೃಷ್ಟಿಯಿಂದ ಯುವಜನತೆ ವಾರಕ್ಕೆ ೭೦ ಗಂಟೆ ಕೆಲಸ ಮಾಡಬೇಕೆಂದು ಉಪದೇಶ ನೀಡುತ್ತಿದ್ದಾರೆ.

    ಕಂಪನಿಗಳ ಮಾಲೀಕರ ಪರವಾದ ತೀರ್ಮಾನಗಳನ್ನೇ ಕೇಂದ್ರ ಸರ್ಕಾರ ತರುತ್ತಿರುವುದನ್ವ ನಾರಾಯಣ ಮೂರ್ತಿ ಸಮರ್ಥಿಸಲು ಬಳಸುತ್ತಿರುವ ಭಾಷೆಯನ್ನು ನೋಡಿ. ೮ ಗಂಟೆಯ ಕೆಲಸದ ಹಿಂದೆ ಇವರು ಹೇಳುತ್ತಿರುವ ‘ದೇಶದ’ ಜನರ ಒಳಿತು ಇದೆ. ಇವರು ಹೇಳುತ್ತಿರುವ ವಾರಕ್ಕೆ ೭೦ ಗಂಟೆಯ ಕೆಲಸದ ಹಿಂದೆ ‘ಭಾರತ’ ದೇಶದ ಪ್ರಜೆಗಳ ಒಳಿತು ಇಲ್ಲ. ಜನರನ್ನ, ಅವರ ಶ್ರಮವನ್ನ ಗೌರವದಿಂದ ಕಂಡ ಜನ ಇವರಲ್ಲ. ದೇಶದ ಜನರ ಶ್ರಮ ಕದಿಯಲು ‘ದೇಶದ ಪ್ರಗತಿಯ ದೃಷ್ಟಿಯಿಂದ’ ಎಂಬ ನಯವಂಚಕ ತನದ ಮಾತನ್ನು ಆಡುತ್ತಾ ಹೆಚ್ಚಿನ ಸಮಯದ ಕೆಲಸಕ್ಕೆ ಒತ್ತಾಯಿಸದಿರಲಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X