ಹೊಸದಾಗಿ ನಿರ್ಮಾಣಗೊಂಡಿದ್ದ ರಾಷ್ಟ್ರೀಯ ಹೆದ್ದಾರಿಯು ಉದ್ಘಾಟನೆಗೂ ಮುನ್ನವೇ ಪ್ರವಾಹದಲ್ಲಿ ಕೊಚ್ಚಿಹೋಗಿರುವ ಘಟನೆ ರಾಜಸ್ಥಾನದ ಜುಂಜುನು ಜಿಲ್ಲೆಯಲ್ಲಿ ನಡೆದಿದೆ.
ಜುಂಜುನು ಜಿಲ್ಲೆಯಲ್ಲಿ ಹರಿಯುವ ಕತ್ಲಿ ನದಿಯ ದಡದಲ್ಲಿರುವ ಬಘೂಲಿ ಮತ್ತು ಜಹಾಜ್ ಗ್ರಾಮಗಳ ಮೂಲಕ ಹಾದುಹೋಗಿರುವ ರಸ್ತೆ ಕೊಚ್ಚಿ ಹೋಗಿದೆ. ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಭಾರೀ ಮಳೆಯಾಗಿದ್ದು, ಮಂಗಳವಾರ 86 ಮಿ.ಮೀ. ಮಳೆಯಾಗಿದೆ. ಕತ್ಲಿ ನದಿ ತುಂಬಿ ಹರಿಯುತ್ತಿದ್ದು, ಪ್ರವಾಹಕ್ಕೆ ರಸ್ತೆ ಕೊಚ್ಚಿ ಹೋಗಿದೆ.
ಕತ್ಲಿ ನದಿಯ ದಡದಲ್ಲಿ ವ್ಯಾಪಕ ಒತ್ತುವರಿಗಳು ನಡೆಯುತ್ತಿದ್ದು, ನದಿ ಹರಿವಿನ ಪ್ರದೇಶದ ಕಿರಿದಾಗಿದೆ. ಹೀಗಾಗಿ, ನೀರು ನದಿಯನ್ನು ಮೀರಿ ಹರಿಯುತ್ತಿದೆ. ಹೀಗಾಗಿ, ನದಿ ಒತ್ತುವರಿಯನ್ನು ತೆರವುಗೊಳಿಸುವಂತೆ ಬಘೋಲಿ ಮತ್ತು ಜಹಾಜ್ ಗ್ರಾಮಸ್ಥರು ಆಗ್ರಹಿಸಿದ್ದಾರೆ.
Video: Newly Built Road Washed Away Before Inauguration In Rajasthan https://t.co/8EKTAOcye5 pic.twitter.com/Lb0GvEsqki
— NDTV (@ndtv) July 8, 2025
ಪ್ರವಾಹದಲ್ಲಿ ರಸ್ತೆ ಕೊಚ್ಚಿಹೋಗುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ರಸ್ತೆಯನ್ನು ಆರು ತಿಂಗಳ ಹಿಂದೆಯಷ್ಟೇ ನಿರ್ಮಾಣ ಮಾಡಲಾಗಿತ್ತು. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆಗೆ ಆದೇಶಿಸಲಾಗಿದೆ.