ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೈಜಯಂತ್ ಪಂಡಾ ನೇತೃತ್ವದ ಆಯ್ಕೆ ಸಮಿತಿಯು ಮಾಡಿದ ಹೆಚ್ಚಿನ ಶಿಫಾರಸುಗಳನ್ನು ಒಳಗೊಂಡ ಆದಾಯ ತೆರಿಗೆ ಮಸೂದೆಯ ಪರಿಷ್ಕೃತ ಆವೃತ್ತಿಯನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಿದರು.
ಆರು ದಶಕಗಳಷ್ಟು ಹಳೆಯದಾದ 1961ರ ಆದಾಯ ತೆರಿಗೆ ಕಾಯ್ದೆಯನ್ನು ಬದಲಿ ಫೆಬ್ರವರಿ 13ರಂದು ಮಂಡಿಸಲಾದ 2025ರ ಆದಾಯ ತೆರಿಗೆ ಮಸೂದೆಯನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ಇತ್ತೀಚೆಗೆ ಕೇಂದ್ರ ಸರ್ಕಾರ ಮಾಡಿದೆ. ಅದಾದ ಬಳಿಕ ಇಂದು(ಆಗಸ್ಟ್ 11) ಹೊಸ ಕರಡು ಮಸೂದೆಯನ್ನು ಮಂಡಿಸಲಾಗಿದೆ.
ಇದನ್ನು ಓದಿದ್ದೀರಾ? ಚುನಾವಣಾ ಬಾಂಡ್ | ನಿರ್ಮಲಾ ಸೀತಾರಾಮನ್ ರಾಜೀನಾಮೆ ನೀಡುತ್ತಾರಾ: ಸಿಎಂ ಪ್ರಶ್ನೆ
“ಗೊಂದಲವನ್ನು ತಪ್ಪಿಸಲು ಹಿಂದಿನ ಮಸೂದೆಯನ್ನು ಹಿಂಪಡೆಯಲಾಗಿದೆ. ಹೊಸ ಕರಡು 1961ರ ಕಾಯ್ದೆಯನ್ನು ಬದಲಿಸಲು ಆಧಾರವಾಗಿ ಕಾರ್ಯನಿರ್ವಹಿಸುತ್ತದೆ” ಎಂದು ಕೇಂದ್ರ ವಿತ್ತ ಸಚಿವೆ ಹೇಳಿದ್ದಾರೆ.
