ಸೋಮವಾರ ನ್ಯಾಯಾಧೀಶರಾಗಿ ನೇಮಕಾತಿ ಮಾಡುವ ವಿಚಾರದಲ್ಲಿ ಮಹತ್ವದ ತೀರ್ಪನ್ನು ನೀಡಿದೆ. “ದೃಷ್ಟಿಹೀನತೆ ಇರುವವರು ಜಿಲ್ಲಾ ಕೋರ್ಟ್‌ನಲ್ಲಿ ನ್ಯಾಯಾಧೀಶರಾಗಲು ಅರ್ಹರು, ಅಂಗವೈಕಲ್ಯ ನೆಪದಲ್ಲಿ ಯಾರ ನೇಮಕಾತಿಯನ್ನು ಕೂಡಾ ತಡೆಯಲಾಗದು” ಎಂದು ಉನ್ನತ ನ್ಯಾಯಾಲಯ ಹೇಳಿದೆ.
ನ್ಯಾಯಮೂರ್ತಿ ಜೆ ಬಿ ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠವು ಸುಮೋಟೋ ಪ್ರಕರಣದ ವಿಚಾರಣೆಯ ವೇಳೆ ಈ ತೀರ್ಪನ್ನು ನೀಡಿದೆ.
ಇದನ್ನು ಓದಿದ್ದೀರಾ? ಡಿನೋಟಿಫಿಕೇಷನ್ ಪ್ರಕರಣ | ಕೇಂದ್ರ ಸಚಿವ ಕುಮಾರಸ್ವಾಮಿ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
ದೃಷ್ಟಿಹೀನತೆ ಹೊಂದಿರುವ ಮಧ್ಯಪ್ರದೇಶ ಮೂಲದ ಅಭ್ಯರ್ಥಿಯ ತಾಯಿಯು ಕಳೆದ ವರ್ಷ ಮುಖ್ಯ ನ್ಯಾಯಮೂರ್ತಿ ಪತ್ರವೊಂದನ್ನು ಬರೆದಿದ್ದರು. ಮಧ್ಯಪ್ರದೇಶ ನ್ಯಾಯಾಂಗ ಸೇವೆ ನೇಮಕಾತಿಯಲ್ಲಿ ನಿಯಮವನ್ನು ಪ್ರಶ್ನಿಸಿದ್ದರು.
ಈ ನಿಯಮದಿಂದಾಗಿ ದೃಷ್ಟಿಹೀನತೆ ಹೊಂದಿರುವ ತನ್ನ ಪುತ್ರನ ನೇಮಕಾತಿ ಮಾಡಲಾಗಿಲ್ಲ ಎಂದು ಹೇಳಿದ್ದಾರೆ. ಈ ಪತ್ರವನ್ನು ಪಡೆದ ಬಳಿಕ ಸುಪ್ರೀಂ ಕೋರ್ಟ್ ಸುಮೋಟೋ ಪ್ರಕರಣವನ್ನು ದಾಖಲಿಸಿಕೊಂಡು, ಸ್ವಯಂಪ್ರೇರಿತವಾಗಿ ಪ್ರಕರಣದ ತನಿಖೆ ನಡೆಸಲು ಮುಂದಾದರು.
ಜಿಲ್ಲಾ ಕೋರ್ಟ್‌ಗಳಲ್ಲಿ ದೃಷ್ಟಿಹೀನರ ನೇಮಕಾತಿಗೆ ತಡೆ ನೀಡುವ ಮಧ್ಯಪ್ರದೇಶ ನಿಯಮವನ್ನು ಸುಪ್ರೀಂ ಕೋರ್ಟ್ ರದ್ದು ಪಡಿಸಿದೆ. ತೀರ್ಪು ನೀಡಿದ ನ್ಯಾಯಮೂರ್ತಿ ಮಹಾದೇವನ್, “ವಿಕಲಚೇತನರು ಎಂಬ ಕಾರಣಕ್ಕೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಯಾವುದೇ ವ್ಯಕ್ತಿಯ ನೇಮಕಾತಿಯನ್ನು ತಡೆಯಲಾಗದು” ಎಂದು ಹೇಳಿದ್ದಾರೆ.
