ಬಹುಪತ್ನಿತ್ವ, ಬಾಲ್ಯ ವಿವಾಹ ತ್ಯಜಿಸಿ: ಬಾಂಗ್ಲಾದೇಶಿ ಮುಸ್ಲಿಂಮರಿಗೆ ಅಸ್ಸಾಂ ಸಿಎಂ ಷರತ್ತು

Date:

Advertisements

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಬಂಗಾಳಿ ಮಾತನಾಡುವ ಬಾಂಗ್ಲಾದೇಶಿ ಮುಸ್ಲಿಮರಿಗೆ ರಾಜ್ಯದಲ್ಲಿ ಸ್ಥಳೀಯರೆಂದು ಗುರುತಿಸಿಕೊಳ್ಳಲು ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನಗೊಳಿಸಿದ ನಂತರ ಈ ಹೇಳಿಕೆ ನೀಡಿದ್ದಾರೆ.

ಅಸ್ಸಾಂನಲ್ಲಿ ‘ಮಿಯಾ’ ಎಂದು ಗುರುತಿಸಲಾಗುವ ಸಮುದಾಯದ ಜನರು ಕೆಲವು ಪದ್ಧತಿಗಳು ಹಾಗೂ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಎರಡು ಮಕ್ಕಳ ಕುಟುಂಬ, ಬಹುಪತ್ನಿತ್ವ ನಿಷೇಧ ಹಾಗೂ ಅಪ್ರಾಪ್ತ ಬಾಲಕಿಯರೊಂದಿಗೆ ವಿವಾಹ ತ್ಯಜಿಸುವ ಕೆಲವು ಅಗತ್ಯಗಳನ್ನು ಈಶಾನ್ಯ ರಾಜ್ಯದಲ್ಲಿ ಸ್ಥಳೀಯ ಗುರುತನ್ನು ಪಡೆದುಕೊಳ್ಳಲು ಮಿಯಾ ಸಮುದಾಯ ಪಾಲಿಸಲೇಬೇಕು ಎಂದು ಅಸ್ಸಾಂ ಸಿಎಂ ಪ್ರತಿಪಾದಿಸಿದ್ದಾರೆ.

ಬಂಗಾಳಿ ಮಾತನಾಡುವ ಮುಸ್ಲಿಮರು ಸ್ಥಳೀಯರೋ ಅಥವಾ ಅಲ್ಲವೋ ಎಂಬುದು ಬೇರೆ ವಿಷಯ. ಅವರು ಸ್ಥಳೀಯರಾಗಲು ಪ್ರಯತ್ನಿಸುತ್ತಿದ್ದರೆ ನಮಗೆ ಸಮಸ್ಯೆಯಿಲ್ಲ. ಆದರೆ ಬಾಲ್ಯ ವಿವಾಹ, ಬಹುಪತ್ನಿತ್ವವನ್ನು ತ್ಯಜಿಸಿ ಮಹಿಳಾ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಹಿಮಂತ ಶರ್ಮಾ ಹೇಳಿದರು.

Advertisements

ಎರಡು, ಮೂರು ಪತ್ನಿಯರನ್ನು ಹೊಂದಬಾರದು. ಇದು ಅಸ್ಸಾಂ ಸಂಸ್ಕೃತಿಯಲ್ಲ. ಸ್ತ್ರೀಯರನ್ನು ದೇವರೆಂದು ಪೂಜಿಸುವ ಈ ನಾಡಿನಲ್ಲಿ ಅಸ್ಸಾಂ ಸಂಸ್ಕೃತಿಯ ಮೌಲ್ಯಗಳಿಗೆ ಗೌರವ ನೀಡಬೇಕು ಎಂದು ಹಿಮಂತ ಶರ್ಮಾ ಒತ್ತಿ ಹೇಳಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಚುನಾವಣೆ – ಐಪಿಎಲ್‌ ಕ್ರಿಕೆಟ್‌ನಲ್ಲಿ ಅಪ್ಪ-ಮಗನ ಆಟ

ಮದರಸಾಗಳನ್ನು ಬಿಟ್ಟು ವೈದ್ಯಕೀಯ, ಇಂಜಿನಿಯರಿಂಗ್ ಹಾಗೂ ಇತರ ಶಿಕ್ಷಣಗಳತ್ತ ಮಿಯಾ ಸಮುದಾಯದವರು ಪ್ರಾಮುಖ್ಯ ಕೊಡಬೇಕು. ಹೆಣ್ಣು ಮಕ್ಕಳಿಗೆ ಶಿಕ್ಷಣಕ್ಕೆ ಒತ್ತು ನೀಡಿ ಪೂರ್ವಜರ ಆಸ್ತಿಯಲ್ಲಿ ಸಮಾನ ಪಾಲು ನೀಡಬೇಕು ಎಂದು ಹಿಮಂತ ಶರ್ಮಾ ತಿಳಿಸಿದರು.

ಹಿಮಂತ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರ 2023ರಲ್ಲಿ ಎರಡು ಹಂತಗಳಲ್ಲಿ ಬಾಲ್ಯ ವಿವಾಹವನ್ನು ನಿಷೇಧಿಸಿದೆ. ಕಳೆದ ವರ್ಷದ ಫೆಬ್ರವರಿಯಲ್ಲಿ ಬಾಲ್ಯ ವಿವಾಹವಾದ 3483 ಮಂದಿಯ ವಿರುದ್ಧ 4515 ಪ್ರಕರಣಗಳನ್ನು ದಾಖಲಿಸಲಾಗಿದ್ದರೆ, ಅಕ್ಟೋಬರ್‌ನಲ್ಲಿ 915 ಮಂದಿಯನ್ನು ಬಂಧಿಸಿ 710 ಪ್ರಕರಣಗಳನ್ನು ದಾಖಲಿಸಲಾಗಿತ್ತು.

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಮಾತನಾಡಿದ್ದ ಹಿಮಂತ ಶರ್ಮಾ, ಬಹುಪತ್ನಿತ್ವ, ಬಾಲ್ಯ ವಿವಾಹ ಮುಂತಾದ ಆಚರಣೆಗಳನ್ನು ಬಿಡದ ಹೊರತು ಮಿಯಾ ಸಮುದಾಯದವರ ಮತಗಳು ಬಿಜೆಪಿಗೆ ಅಗತ್ಯವಿಲ್ಲ ಎಂದು ಹೇಳಿದ್ದರು

ಬಂಗಾಳಿ ಮಾತನಾಡುವ ಮುಸ್ಲಿಂ ಸಮುದಾಯದವರು ಮೂಲತಃ ಬಾಂಗ್ಲಾದೇಶದಿಂದ ಆಗಮಿಸಿ ಅಸ್ಸಾಂನ ವಿವಿಧ ಕಡೆ ನೆಲಸಿದ್ದಾರೆ ಎಂದು ಬಿಜೆಪಿಯ ಆರೋಪವಾಗಿದೆ. 126 ಅಸ್ಸಾಂ ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು 30 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಗೆಲುವಿಗೆ ಮಿಯಾ ಸಮುದಾಯ ಪ್ರಾಬಲ್ಯ ಹೊಂದಿದ್ದಾರೆ. ಆದರೆ ವಾಸ್ತವದಲ್ಲಿ ಹಿಂದೂ ಮತ್ತು ಮುಸ್ಲಿಂ ಎರಡೂ ಸಮುದಾಯದವರು ವಲಸಿಗರಾಗಿ ಆಗಮಿಸಿ ಅಸ್ಸಾಂನಲ್ಲಿ ನೆಲಸಿದ್ದಾರೆ ಎಂದು ಹೇಳಲಾಗುತ್ತದೆ.

ವರದಿಗಳ ಪ್ರಕಾರ ಒಟ್ಟು ಮುಸ್ಲಿಂ ಸಮುದಾಯದವರಲ್ಲಿ ಶೇ.37 ರಷ್ಟು ಅಸ್ಸಾಂ ಮಾತನಾಡಿದರೆ, ಶೇ,63 ರಷ್ಟು ಮಿಯಾ ಸಮುದಾಯದ ಬಂಗಾಳಿ ಸಮುದಾಯದವರಿದ್ದಾರೆ ಎನ್ನಲಾಗಿದೆ.

2022ರಲ್ಲಿ ಅಸ್ಸಾಂ ಸರ್ಕಾರ ಬಾಂಗ್ಲಾದೇಶದ ವಲಸೆ ಮುಸ್ಲಿಂ ಸಮುದಾಯದರನ್ನು ಪ್ರತ್ಯೇಕಿಸಿ ಅಸ್ಸಾಂ ಮಾತನಾಡುವ ಸುಮಾರು 40 ಲಕ್ಷ ಮುಸ್ಲಿಂಮರನ್ನು ಸ್ಥಳೀಯ ಅಸ್ಸಾಂ ಮುಸ್ಲಿಂಮರು ಎಂದು ಮಾನ್ಯತೆ ನೀಡಿತ್ತು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಣ್ಣಾಮಲೈ ಕೈಯಿಂದ ಪ್ರಶಸ್ತಿ ಪಡೆಯಲು ವಿದ್ಯಾರ್ಥಿ ನಕಾರ

ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿದ್ದ ವಿದ್ಯಾರ್ಥಿಯೊಬ್ಬ ಬಿಜೆಪಿ ನಾಯಕ ಕೆ ಅಣ್ಣಾಮಲೈ ಅವರಿಂದ...

ಆಸ್ಪತ್ರೆ ನಿರ್ಮಾಣ ಹಗರಣ: ಎಎಪಿಯ ಸೌರಭ್ ಭಾರದ್ವಾಜ್ ನಿವಾಸದ ಮೇಲೆ ಇಡಿ ದಾಳಿ

ದೆಹಲಿ ಆರೋಗ್ಯ ಸಚಿವರಾಗಿದ್ದ ಅವಧಿಯಲ್ಲಿ ಆಸ್ಪತ್ರೆಗಳ ನಿರ್ಮಾಣದಲ್ಲಿ ಹಗರಣ ನಡೆದಿದೆ ಎಂಬ...

VP-Polls | ಸುದರ್ಶನ್‌ ರೆಡ್ಡಿ ವಿರುದ್ಧದ ಅಮಿತ್‌ ಶಾ ಹೇಳಿಕೆ ಖಂಡಿಸಿದ ನಿವೃತ್ತ ನ್ಯಾಯಮೂರ್ತಿಗಳು

ಸಾಲ್ವಾ ಜುಡುಮ್‌ ತೀರ್ಪಿನ ಕುರಿತು ವಿರೋಧ ಪಕ್ಷದ ಉಪರಾಷ್ಟ್ರಪತಿ ಅಭ್ಯರ್ಥಿ ಬಿ....

ಪ್ರಧಾನಿಯ ಪದವಿ ವಿವರ ಬಹಿರಂಗಪಡಿಸುವ ಅಗತ್ಯವಿಲ್ಲ: ದೆಹಲಿ ಹೈಕೋರ್ಟ್ ತೀರ್ಪು

ದೆಹಲಿ ವಿಶ್ವವಿದ್ಯಾಲಯವು ಪ್ರಧಾನಿ ನರೇಂದ್ರ ಮೋದಿಯ ಪದವಿ ವಿವರಗಳನ್ನು ಬಹಿರಂಗಪಡಿಸುವ ಅಗತ್ಯವಿಲ್ಲ...

Download Eedina App Android / iOS

X