ಮೊದಲ ಹಂತದ 102 ಕ್ಷೇತ್ರಗಳಿಗೆ ನಡೆಯಲಿರುವ ಲೋಕಸಭೆ ಚುನಾವಣೆ ಗೆ ನಾಮಪತ್ರ ಸಲ್ಲಿಕೆ ಇಂದಿನಿಂದ ಆರಂಭಗೊಂಡಿದೆ. ಕೇಂದ್ರಾಡಳಿತ ಪ್ರದೇಶಗಳು ಒಳಗೊಂಡು 21 ರಾಜ್ಯಗಳಿಗೆ ಏ.19 ರಂದು ನಡೆಯುವ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಸಲು ಅಧಿಸೂಚನೆ ಹೊರಡಿಸಲಾಗಿದೆ.
ಅಧಿಸೂಚನೆಯ ಪ್ರಕಾರ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಮಾ.27. ಆದಾಗ್ಯೂ ಹಬ್ಬದ ಹಿನ್ನೆಲೆಯಲ್ಲಿ ಬಿಹಾರ ರಾಜ್ಯದ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ದಿನಾಂಕವನ್ನು ಮಾ.28ರ ವರೆಗೂ ವಿಸ್ತರಿಸಲಾಗಿದೆ.
ನಾಮಪತ್ರ ಪರಿಶೀಲನೆಯ ಅವಧಿಯನ್ನು ಮಾ.28ರವರೆಗೂ ಇರುತ್ತದೆ.ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಮಾ.30(ಬಿಹಾರ ಹೊರತುಪಡಿಸಿ).
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಇದು ಬಿಜೆಪಿ-ಜೆಡಿಎಸ್ ನಡುವಿನ ಬಿರುಕಲ್ಲ, ಬಿಕ್ಕಟ್ಟಲ್ಲ, ಆಟ
18ನೇ ಲೋಕಸಭಾ ಅವಧಿಯ ಚುನಾವಣೆಗಳು ಏಪ್ರಿಲ್ 19ರಿಂದ ಆರಂಭಗೊಂಡು ಜೂನ್ 1ರವರೆಗೂ ಒಟ್ಟು ಏಳು ಹಂತಗಳಲ್ಲಿ ನಡೆಯಲಿದೆ.
ಮೊದಲ ಹಂತದ ಚುನಾವಣೆಯು ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಮಧ್ಯ ಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ,ತಮಿಳುನಾಡು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ, ಲಕ್ಷದ್ವೀಪ ಹಾಗೂ ಪುದುಚೆರಿಯಲ್ಲಿ ನಡೆಯಲಿವೆ.
ಎಲ್ಲ ಹಂತಗಳ ಮತ ಎಣಿಕೆಯು ಜೂ.4 ರಂದು ನಡೆಯಲಿದೆ.
