ನಟಿ ರಶ್ಮಿಕಾ ಮಂದಣ್ಣ ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ತನ್ನ ವೃತ್ತಿಜೀವನವನ್ನು ಆರಂಭಿಸಿ, ಪ್ಯಾನ್-ಇಂಡಿಯಾ ತಾರೆಯಾಗಿ ಮಿಂಚುತ್ತಿದ್ದಾರೆ. ಅವರು ಉತ್ತರ ಮತ್ತು ದಕ್ಷಿಣ ಭಾರತದ ಚಿತ್ರರಂಗವನ್ನು ‘ಭಾರತೀಯ ಚಲಚಿತ್ರೋದ್ಯಮ’ ಎಂದು ಕರೆಯಬೇಕೆಂಬ ಒಳನೋಟವನ್ನು ಅವರು ಹಂಚಿಕೊಂಡಿದ್ದಾರೆ.
“ನಾವು ಸಿನಿಮಾ ಉದ್ಯಮವನ್ನು ಭಾರತೀಯ ಚಲನಚಿತ್ರೋದ್ಯಮ ಎಂದು ಕರೆಯುವ ಸಮಯ ಬಂದಿದೆ ಎಂಬುದಾಗಿ ನಾನು ಭಾವಿಸುತ್ತೇನೆ. ನಾವೆಲ್ಲರೂ ಮನರಂಜನಾ ಉದ್ಯಮದಲ್ಲಿದ್ದೇವೆ. ಒಂದೇ ದೇಶದಲ್ಲಿದ್ದೇವೆ. ನಮ್ಮ ದೇಶದ ಎಲ್ಲ ಚಿತ್ರೋದ್ಯಮಗಳು ಒಂದೇ ಎಂದು ನಾವು ಒಪ್ಪಿಕೊಳ್ಳುವ ಸಮಯ ಬಂದಿದೆ” ಎಂದು ಇತ್ತೀಚೆಗೆ ಹಿಂದೂಸ್ತಾನ್ ಟೈಮ್ಸ್ ಜೊತೆ ನಡೆಸಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಶಿವಮೊಗ್ಗ | ಗೀತಾರನ್ನು ಸಂಸದೆಯಾಗಿ ನೋಡುವ ಆಸೆ ಇದೆ: ನಟ ಶಿವ ರಾಜ್‌ಕುಮಾರ್
“ನಾವು ಕೆಲವು ಹುಚ್ಚು ಮತ್ತು ಕೂಲ್ ಆದ ಸಿನಿಮಾಗಳನ್ನು ಮಾಡಲು ಇಲ್ಲಿದ್ದೇವೆ. ಅಡೆತಡೆಗಳು ಕಡಿಮೆಯಾಗುತ್ತಿವೆ. ಜನರು ಯಾವುದೇ ಭಾಷೆಗೆ ಸೇರಿದವರಾಗಿದ್ದರೂ ವಿಭಿನ್ನ ಉದ್ಯಮ ಮತ್ತು ವಿಭಿನ್ನ ಭಾಷೆಗಳಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ ಎಂಬ ಅಂಶ ನನಗೆ ತುಂಬಾ ಖುಷಿ. ನಾನು ಬದಲಾವಣೆಯ ಭಾಗವಾಗಿದ್ದೇನೆ ಎಂಬುದು ನನಗೆ ನಿಜವಾಗಿಯೂ ಹರ್ಷದಾಯಕವಾಗಿದೆ” ಎಂದು ಹೇಳಿದ್ದಾರೆ.
‘ಪುಷ್ಪ 2: ದಿ ರೂಲ್’ ಬಗ್ಗೆ ಮಾತನಾಡಿದ ರಶ್ಮಿಕಾ ಮಂದಣ್ಣ, “ನಾವು ಸುಮಾರು 50ಕ್ಕೂ ಹೆಚ್ಚು ದಿನಗಳ ಶೂಟಿಂಗ್ ಮಾಡುತ್ತಿದ್ದೇವೆ. ಆದರೆ, ಪ್ರೇಕ್ಷಕರು ನಮ್ಮಿಂದ ನಿರೀಕ್ಷೆ ಇಟ್ಟಿರುವುದರಿಂದ, ನಮ್ಮ ಜವಾಬ್ದಾರಿ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಸಾಕಷ್ಟು ಕಠಿಣ ಪರಿಶ್ರಮವಿದೆ” ಎಂದು ಹೇಳಿದ್ದಾರೆ.