ಈಶಾನ್ಯ ರಾಜ್ಯಗಳಲ್ಲಿ ಹಲವು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು ಪ್ರವಾಹ, ಭೂಕುಸಿತ ಉಂಟಾಗಿದೆ. ಸೋಮವಾರವರೆಗೆ ಮಳೆ ಆರ್ಭಟಕ್ಕೆ 36 ಮಂದಿ ಬಲಿಯಾಗಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ 5,50,000ಕ್ಕೂ ಹೆಚ್ಚು ಮಂದಿ ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಅಸ್ಸಾಂನಲ್ಲಿ 11, ಅರುಣಾಚಲ ಪ್ರದೇಶದಲ್ಲಿ 10, ಮೇಘಾಲಯದಲ್ಲಿ ಆರು, ಮಿಜೋರಾಂನಲ್ಲಿ ಐದು, ಸಿಕ್ಕಿಂನಲ್ಲಿ ಮೂರು ಮತ್ತು ತ್ರಿಪುರದಲ್ಲಿ ಒಂದು ಸಾವು ಸಂಭವಿಸಿದೆ. ಈ ನಡುವೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಿಎಂ ಕೇರ್ಸ್ ನಿಧಿಯ ಬಗ್ಗೆ ಪ್ರಶ್ನಿಸಿದ್ದಾರೆ. ಸಂತ್ರಸ್ತರಿಗೆ ಈ ನಿಧಿಯ ಮೂಲಕ ಸಹಾಯ ಮಾಡುವಂತೆ ಆಗ್ರಹಿಸಿದ್ದಾರೆ.
ಇದನ್ನು ಓದಿದ್ದೀರಾ? ಹಠಾತ್ ಪ್ರವಾಹ ಭೀತಿ: ಕರ್ನಾಟಕ ಸೇರಿ ಹಲವು ರಾಜ್ಯಗಳಿಗೆ ರೆಡ್ ಅಲರ್ಟ್
ಅಸ್ಸಾಂನಲ್ಲಿ ಅಪಾಯದ ಮಟ್ಟ ದಾಟಿದ 15 ನದಿಗಳು
ಅಸ್ಸಾಂನಲ್ಲಿ 15 ನದಿಗಳು ಅಪಾಯದ ಮಟ್ಟಕ್ಕಿಂತ ಹೆಚ್ಚು ಹರಿಯುತ್ತಿವೆ ಎಂದು ರಾಜ್ಯದ ಅಧಿಕೃತ ಬುಲೆಟಿನ್ ಹೇಳಿದೆ. ಹಾಗೆಯೇ 22 ಜಿಲ್ಲೆಗಳಲ್ಲಿ 535,000ಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ ಎಂದು ತಿಳಿಸಿದೆ. ಹಲವು ಪ್ರದೇಶಗಳಲ್ಲಿ ರಸ್ತೆ, ರೈಲು ಸೇವೆಗಳು ಅಸ್ತವ್ಯಸ್ತಗೊಂಡಿವೆ.
VIDEO | Assam: Flood situation remains grim in Dhekiajuli and Barchala areas of Sonitpur district; rescue efforts are underway.
— Press Trust of India (@PTI_News) June 3, 2025
(Full video available on PTI Videos – https://t.co/n147TvrpG7) pic.twitter.com/kwXy7MlpaD
ಸಿಕ್ಕಿಂನಲ್ಲಿ ಮೂವರು ಸೇನಾ ಸಿಬ್ಬಂದಿಗಳು ಸಾವು, 9 ಮಂದಿ ನಾಪತ್ತೆ
ಸಿಕ್ಕಿಂನ ಮಂಗನ್ ಜಿಲ್ಲೆಯಲ್ಲಿ, ಭಾರೀ ಮಳೆಯಿಂದ ಉಂಟಾದ ಭೂಕುಸಿತದಿಂದಾಗಿ ಮೂವರು ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಒಂಬತ್ತು ಮಂದಿ ನಾಪತ್ತೆಯಾಗಿದ್ದಾರೆ. ಮೃತರನ್ನು ಹವಾಲ್ದಾರ್ ಲಖ್ವಿಂದರ್ ಸಿಂಗ್, ಲ್ಯಾನ್ಸ್ ನಾಯಕ್ ಮುನೀಶ್ ಠಾಕೂರ್ ಮತ್ತು ಪೋರ್ಟರ್ ಅಭಿಷೇಕ್ ಲಖಾಡ ಎಂದು ಗುರುತಿಸಲಾಗಿದೆ. ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಲಾಚುಂಗ್ ಮತ್ತು ಚುಂಗ್ಥಾಂಗ್ ಪಟ್ಟಣಗಳಲ್ಲಿ ಸಿಲುಕಿಕೊಂಡಿದ್ದ 1,678 ಪ್ರವಾಸಿಗರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಭೂಕುಸಿತದಿಂದಾಗಿ ಪ್ರವಾಸಿ ತಾಣಗಳಿಗೆ ಹೋಗುವ ರಸ್ತೆ, ಸೇತುವೆಗಳಿಗೆ ಭಾರೀ ಹಾನಿಯಾಗಿದೆ. ಮೇಘಸ್ಫೋಟದಿಂದಾಗಿ ತೀಸ್ತಾ ನದಿಯ ನೀರು 35-40 ಅಡಿಗಳಷ್ಟು ಏರಿಕೆಯಾಗಿ ಪ್ರಾದೇಶಿಕ ಸಂಪರ್ಕ ಕಡಿತಗೊಂಡಿದೆ. ರಸ್ತೆ ಮತ್ತು ಹವಾಮಾನ ಪರಿಸ್ಥಿತಿಗಳನ್ನು ಪರಿಶೀಲಿಸಿದ ನಂತರವೇ ಪ್ರವಾಸಿಗರು ಪ್ರಯಾಣಿಸುವಂತೆ ರಾಜ್ಯ ಸರ್ಕಾರ ಸೂಚಿಸಿದೆ.
ಇದನ್ನು ಓದಿದ್ದೀರಾ? ಮಣಿಪುರ | ನಿರಾಶ್ರಿತರ ಕೇಂದ್ರಗಳಿಗೆ ರಾಹುಲ್ ಗಾಂಧಿ ಭೇಟಿ; ಸಂತ್ರಸ್ತರೊಂದಿಗೆ ಸಂವಾದ
ಮಣಿಪುರದಲ್ಲಿ 19,000 ಮಂದಿ ಸ್ಥಳಾಂತರ
ಮಣಿಪುರದಲ್ಲಿ, ಪ್ರವಾಹ ಕಾರಣ 19,000ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. 3,365 ಮನೆಗಳು ಮತ್ತು 103 ಪ್ರದೇಶಗಳಿಗೆ ಹಾನಿಯಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಿಂದ ಸ್ಥಳಾಂತರಿಸಲ್ಪಟ್ಟವರಿಗೆ ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ಶಿಬಿರಗಳನ್ನು ಸ್ಥಾಪಿಸಲಾಗಿದೆ. ನಿರಂತರ ಮಳೆಯಿಂದಾಗಿ ಇಂಫಾಲ್ ನದಿ ಒಡ್ಡು ಅನೇಕ ಬಾರಿ ಒಡೆದು, ಇಂಫಾಲ್ ಪೂರ್ವವನ್ನು ಮುಳುಗಿಸಿದೆ.
As floods kill at least 34 in northeast India, a man braves a swollen river on a wooden bridge in #ArunachalPradesh#India #Flood #Landslide #Asia #Assam #Manipur #Sikkim #Flashflood #Rain #Climate #Weather #Viral pic.twitter.com/EG4BTye4Xj
— Earth42morrow (@Earth42morrow) June 2, 2025
ಅರುಣಾಚಲ ಪ್ರದೇಶದಲ್ಲಿ ಹತ್ತು ಮಂದಿ ಸಾವು
ಅರುಣಾಚಲ ಪ್ರದೇಶದಲ್ಲಿ, ಪ್ರವಾಹ ಮತ್ತು ಭೂಕುಸಿತದಿಂದಾಗಿ ಹತ್ತು ಮಂದಿ ಸಾವನ್ನಪ್ಪಿದ್ದಾರೆ. 23 ಜಿಲ್ಲೆಗಳಾದ್ಯಂತ 156 ಹಳ್ಳಿಗಳ 938 ನಿವಾಸಿಗಳು ಬಾಧಿತರಾಗಿದ್ದಾರೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ. ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ತ್ರಿಪುರ ಮತ್ತು ಮಿಜೋರಾಂ ಪ್ರವಾಹ ಸ್ಥಿತಿ
ತ್ರಿಪುರದಲ್ಲಿ, ಮಳೆ ಕಡಿಮೆಯಾಗಿ ನದಿಗಳ ಮಟ್ಟ ಕಡಿಮೆಯಾಗುತ್ತಿದ್ದಂತೆ ಪರಿಸ್ಥಿತಿ ಸುಧಾರಿಸುತ್ತಿದೆ. ಆದರೂ 10,000ಕ್ಕೂ ಹೆಚ್ಚು ಜನರು ಪರಿಹಾರ ಶಿಬಿರಗಳಲ್ಲಿ ಉಳಿದಿದ್ದಾರೆ. ವಿಪತ್ತು ನಿರ್ವಹಣಾ ಉಸ್ತುವಾರಿ ಶರತ್ ದಾಸ್ ಅವರು 66 ಪರಿಹಾರ ಶಿಬಿರಗಳು ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚಿನವು ಪಶ್ಚಿಮ ತ್ರಿಪುರದಲ್ಲಿವೆ ಎಂದು ಹೇಳಿದ್ದಾರೆ.
ಮಿಜೋರಾಂನಲ್ಲಿ, ಭಾರೀ ಮಳೆಯಿಂದಾಗಿ 212 ರಸ್ತೆಗಳನ್ನು ಮುಚ್ಚಲಾಗಿದೆ, ಶಾಲೆಗಳನ್ನು ಮುಚ್ಚಲಾಗಿದೆ. ಮೇ 24ರಿಂದ ಮೂವರು ಮಯನ್ಮಾರ್ ನಿರಾಶ್ರಿತರು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
