ಮತ್ತೆ ಒಂದು ಸಾವಿರ ಉದ್ಯೋಗ ಕಡಿತಕ್ಕೆ ಮುಂದಾದ ಓಲಾ ಎಲೆಕ್ಟ್ರಿಕ್

Date:

ನವೆಂಬರ್‌ನಲ್ಲಿ ಸುಮಾರು 500 ಮಂದಿಯನ್ನು ಉದ್ಯೋಗದಿಂದ ತೆಗೆದುಹಾಕಿದ್ದ ಓಲಾ ಎಲೆಕ್ಟ್ರಿಕ್ ಈಗ ಮತ್ತೆ ಒಂದು ಸಾವಿರ ಉದ್ಯೋಗ ಕಡಿತಕ್ಕೆ ಮುಂದಾಗಿದೆ ಎಂದು ವರದಿಯಾಗಿದೆ. ಗುತ್ತಿಗೆ ಕೆಲಸಗಾರರನ್ನು ಕೂಡಾ ಉದ್ಯೋಗದಿಂದ ತೆಗೆದುಹಾಕಲು ಓಲಾ ಎಲೆಕ್ಟ್ರಿಕ್ ಸಜ್ಜಾಗಿದೆ ಎಂದು ಬ್ಲ್ಯೂಬರ್ಗ್ ವರದಿ ಮಾಡಿದೆ.

- Advertisement -

ಲಾಭ ಹೆಚ್ಚಿಸುವ ನಿಟ್ಟಿನಲ್ಲಿ ಸಂಸ್ಥೆ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ. ಕಳೆದ ನವೆಂಬರ್‌ನಲ್ಲಿ 500 ಉದ್ಯೋಗಗಳನ್ನು ಕೆಲಸದಿಂದ ತೆಗೆದುಹಾಕಲಾಗಿದ್ದು, ಡಿಸೆಂಬರ್ 31ರ ಲೆಕ್ಕಾಚಾರದಂತೆ ಸಂಸ್ಥೆಯಲ್ಲಿ 3,824 ಉದ್ಯೋಗಿಗಳು ಉಳಿದಿದ್ದಾರೆ. 2023ರಲ್ಲಿ ಸಂಸ್ಥೆಯಲ್ಲಿದ್ದ ಉದ್ಯೋಗಿಗಳ ಸಂಖ್ಯೆಗೆ ಹೋಲಿಸಿದರೆ, 2024ರಲ್ಲಿ ಓಲಾ ಎಲೆಕ್ಟ್ರಿಕ್‌ನಲ್ಲಿ ಉದ್ಯೋಗಿಗಳ ಸಂಖ್ಯೆ ಶೇಕಡ 1.8ರಷ್ಟು ಕಡಿಮೆಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಇದನ್ನು ಓದಿದ್ದೀರಾ? ಕೆಟ್ಟು ನಿಲ್ಲುತ್ತಿವೆ ‘ಓಲಾ ಇವಿ’; ಓಲಾ ಸಿಇಒ ಅಗರ್ವಾಲ್ ಮತ್ತು ಕುನಾಲ್ ಕಮ್ರಾ ನಡುವೆ ಟ್ವೀಟ್ ವಾರ್

ಕೋವಿಡ್‌ ಸಾಂಕ್ರಾಮಿಕದ ನಂತರದಿಂದ ನಷ್ಟ, ಲಾಭ ಹೆಚ್ಚಿಸುವ ಉದ್ದೇಶ, ಸಂಸ್ಥೆಯ ಪುನರ್‌ ರಚನೆ ನೆಪದಲ್ಲಿ ಹಲವು ಸಂಸ್ಥೆಗಳು ಉದ್ಯೋಗ ಕಡಿತ ಮಾಡುತ್ತಾ ಬಂದಿದೆ. ಇಂದಿಗೂ ಉತ್ತಮ ಲಾಭ ಪಡೆಯುತ್ತಿರುವ ಸಂಸ್ಥೆಗಳು ಕೂಡಾ ಉದ್ಯೋಗ, ವೇತನ ಕಡಿತಗೊಳಿಸಿ, ಇರುವ ಉದ್ಯೋಗಿಗಳ ಮೇಲೆ ಎಲ್ಲಾ ಕೆಲಸದ ಹೊರೆಯನ್ನು ಹಾಕುತ್ತಿದೆ. ಹೆಚ್ಚಿನ ಅವಧಿ ದುಡಿಸುತ್ತಿದೆ.

ಇವೆಲ್ಲವುದರ ನಡುವೆ ಓಲಾ ಎಲೆಕ್ಟ್ರಿಕ್ ಸ್ಥಿತಿ ವಿಭಿನ್ನವಾಗಿದೆ. ಇವಿ ಬಳಕೆಗೆ ಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ ಸಂಸ್ಥೆಯು ಹೆಚ್ಚು ರಿಯಾಯಿತಿಯನ್ನು ಗ್ರಾಹಕರಿಗೆ ನೀಡುತ್ತಿದೆ. ಆದರೆ ಇನ್ನೂ ಕೂಡಾ ಹೆಚ್ಚು ಲಾಭವನ್ನು ಪಡೆಯಲು ಸಾಧ್ಯವಾಗಿಲ್ಲ ಎಂದು ವರದಿಯಾಗಿದೆ.

ಇದನ್ನು ಓದಿದ್ದೀರಾ? ಕುನಾಲ್ ಕಮ್ರಾ ಜೊತೆ ಟ್ವೀಟ್‌ ವಾರ್ | ಓಲಾ ಷೇರು ಕುಸಿತ; ಭವಿಶ್ ದುರಹಂಕಾರದ ಫಲವೆಂದ ನೆಟ್ಟಿಗರು

ಉದ್ಯೋಗ ಕಡಿತದ ಬಗ್ಗೆ ವರದಿಯಾಗುತ್ತಿದ್ದಂತೆ ಓಲಾ ಸಂಸ್ಥೆಯು ಷೇರುಪೇಟೆಯಲ್ಲಿ ಭಾರೀ ಕುಸಿತ ಕಂಡಿದೆ. ಓಲಾ ಷೇರು ಮೌಲ್ಯ ಸುಮಾರು ಶೇಕಡ 5ರಷ್ಟು ಇಳಿದು 54.05 ರೂಪಾಯಿಗೆ ತಲುಪಿದೆ. ಆಗಸ್ಟ್ 9ರಂದು ಷೇರು ಮಾರುಕಟ್ಟೆಯಲ್ಲಿ ಲೀಸ್ಟ್ ಆದಾಗಿನಿಂದ ಸಂಸ್ಥೆಯು ಮಾರುಕಟ್ಟೆ ಮೌಲ್ಯವು ಸುಮಾರು ಶೇಕಡ 30ರಷ್ಟು ಕುಸಿದಿದೆ. ಹಾಗೆಯೇ ಸಂಸ್ಥೆಯ ಪ್ರಸ್ತುತ ಷೇರು ಬೆಲೆಯು 52 ವಾರಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯಾಂಗದ ಮೇಲೆ ಗೌರವವಿದೆ, ತಪ್ಪಾಗಿದ್ದರೆ ಕ್ಷಮೆಯಾಚಿಸುವೆ: ಸಂಜಯ್ ರಾವತ್

ಸುಪ್ರೀಂ ಕೋರ್ಟ್ ಕುರಿತು ತಾವು ನೀಡಿರುವ ಹೇಳಿಕೆಗಳು ಸೂಕ್ತವಲ್ಲ ಅಥವಾ ಅನುಚಿತ...

ವಿರಳಾತಿ ವಿರಳ ಪ್ರಕರಣ: ಮಾಲೆಗಾಂವ್ ಅಪ್ರಾಪ್ತೆಯ ಅತ್ಯಾಚಾರ, ಕೊಲೆ ಅಪರಾಧಿಗೆ ಮರಣದಂಡನೆ ಶಿಕ್ಷೆ

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವ್ ತಾಲೂಕಿನ ಡೋಂಗರಾಳೆ ಗ್ರಾಮದಲ್ಲಿ ಸಾಡೇನಾಲ್ಕು ವರ್ಷದ...

ತಿರಂಗಾ ಮಾರ್ಚ್ ನಡೆಸದಂತೆ ಅಭಿಜೀತ್ ದೀಪ್ಕೆಗೆ ದೆಹಲಿ ಪೊಲೀಸರಿಂದ ನೋಟಿಸ್: ಮನೆಯ ಬಳಿ ಬಿಗಿ ಭದ್ರತೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ದೆಹಲಿಯ...

​ಪ್ರತಿಭಟನೆಗಳ ವರದಿಗಾರಿಕೆಗೆ ಭಾರತೀಯ ಪ್ರೆಸ್ ಕೌನ್ಸಿಲ್‌ನಿಂದ ನೂತನ ಮಾರ್ಗದರ್ಶಿ ಸೂತ್ರಗಳ ಬಿಡುಗಡೆ

ಪ್ರತಿಭಟನೆಗಳು ಮತ್ತು ಧರಣಿ ಸತ್ಯಾಗ್ರಹಗಳ ಸಂದರ್ಭದಲ್ಲಿ ಪತ್ರಕರ್ತರ ಸುರಕ್ಷತೆಯನ್ನು ಕಾಯ್ದುಕೊಳ್ಳಲು, ಜವಾಬ್ದಾರಿಯುತ...