ಅಸ್ಸಾಂನಲ್ಲಿ ನಾಗಾಂವ್ ಜಿಲ್ಲೆಯಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ ಮನೆಯೊಂದರ ಬಾತ್‌ರೂಮ್‌ನಲ್ಲಿ ಬರೋಬ್ಬರಿ 35 ಹಾವುಗಳು ಪತ್ತೆಯಾಗಿದ್ದು, ಈ ವಿಡಿಯೋ ಭಾರೀ ವೈರಲ್ ಆಗಿದೆ.
ಸುದ್ದಿ ಸಂಸ್ಥೆ ಎಎನ್‌ಐ ಈ ವಿಡಿಯೋವನ್ನು ಹಂಚಿಕೊಂಡಿದ್ದು, ದೊಡ್ಡ ಬಂಡೆಯಿಂದ ಹೊರಕ್ಕೆ ಹಲವಾರು ಹಾವುಗಳು ಬರುತ್ತಿರುವುದು ಕಂಡು ಬಂದಿದೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ವಿಡಿಯೋದಲ್ಲಿ ಹಾವುಗಳನ್ನು ಬಕೆಟ್‌ನಲ್ಲಿ ಹಾಕಿಟ್ಟಿರುವುದು ಕಂಡು ಬಂದಿದೆ.
ಇದನ್ನು ಓದಿದ್ದೀರಾ? ಹಾವುಗಳು ನುಗ್ಗುತ್ತಿವೆ ಎಚ್ಚರ; ಕೊಲ್ಲಬೇಡಿ ಕಾಲ್ ಮಾಡಿ
“ಅಸ್ಸಾಂನ ನಾಗಾಂವ್ ಜಿಲ್ಲೆಯ ಕಲಿಯಾಬೋರ್ ಪ್ರದೇಶದ ಮನೆಯೊಂದರಲ್ಲಿ ಸುಮಾರು 35 ಹಾವುಗಳು ಕಂಡುಬಂದಿದೆ. ಪ್ರಾಣಿ ಪ್ರೇಮಿ ಸಂಜಿಬ್ ದೇಕಾ ಅವರು ಹಾವುಗಳನ್ನು ವಶಪಡಿಸಿಕೊಂಡಿದ್ದಾರೆ” ಎಂದು ಎಎನ್‌ಐ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
#WATCH | Around 35 snakes crawl were found in a house in the Kaliabor area of Assam’s Nagaon district.
The snakes were recovered by Sanjib Deka who is an animal lover. pic.twitter.com/vOVcqzcbgM
— ANI (@ANI) May 27, 2024
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಜಿಬ್ ದೇಕಾ, “ಮನೆಯ ಮಾಲೀಕರು ಹಾವು ಇರುವ ಬಗ್ಗೆ ನನಗೆ ಮಾಹಿತಿ ನೀಡಿದ್ದು ನಾನು ಸ್ಥಳಕ್ಕೆ ತಲುಪಿದೆ. ಸ್ಥಳದಲ್ಲಿ ಹಲವಾರು ಹಾವುಗಳು ಹರಿದಾಡುತ್ತಿರುವುದನ್ನು ನಾನು ನೋಡಿದೆ. ಹೊಸದಾಗಿ ನಿರ್ಮಿಸಿದ ಮನೆಯ ಶೌಚಾಲಯದಲ್ಲಿ ಸುಮಾರು 35 ಹಾವುಗಳು ತೆವಳುತ್ತಿದ್ದವು. ನಾನು ಅಲ್ಲಿಂದ ಹಾವುಗಳನ್ನು ರಕ್ಷಿಸಿ ಜೋಯಿಸಗರ್ ದಲಾನಿ ಪ್ರದೇಶದಲ್ಲಿ ಹಾವುಗಳನ್ನು ಬಿಡುಗಡೆ ಮಾಡಿದೆ” ಎಂದು ಮಾಹಿತಿ ನೀಡಿದರು.
ಎಕ್ಸ್‌ನಲ್ಲಿ ಎಎನ್‌ಐ ಪೋಸ್ಟ್ ಮಾಡಿದ ಈ ವಿಡಿಯೋಗೆ 108.4 ಸಾವಿರ ವೀಕ್ಷಣೆಗಳು ಕಂಡು ಬಂದಿದೆ. “ಇದು ಶೌಚಾಲಯ ನಿರ್ಮಾಣಕ್ಕೆ ಉತ್ತಮ ಸ್ಥಳವಲ್ಲ, ಮತ್ತೆ ಇದೇ ಸ್ಥಳಕ್ಕೆ ಹಾವುಗಳು ಬರಬಹುದು” ಎಂದು ಬಳಕೆದಾರರೊಬ್ಬರು ಅಭಿಪ್ರಾಯಿಸಿದ್ದಾರೆ. ಇನ್ನೋರ್ವ ನೆಟ್ಟಿಗರು “ನನ್ನ ಮನೆಯಲ್ಲಿ ಇಷ್ಟೊಂದು ಹಾವುಗಳನ್ನು ನೋಡಿದರೆ ನಾನು ಖಂಡಿತವಾಗಿಯೂ ಸತ್ತು ಹೋಗುತ್ತೇನಷ್ಟೆ” ಎಂದು ಮತ್ತೋರ್ವ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಮಳೆಗಾಲ ಶುರು: ಹಾವುಗಳ ಬಗ್ಗೆ ಎಚ್ಚರಿಕೆ ವಹಿಸಲು ಬಿಬಿಎಂಪಿ ಮನವಿ
ಹಾವುಗಳ ಬಗ್ಗೆ ಎಚ್ಚರಿಕೆ ವಹಿಸಲು ಬಿಬಿಎಂಪಿ ಮನವಿ
ಮಳೆ ಆರಂಭವಾಗುತ್ತಿದ್ದಂತೆ ಬೆಂಗಳೂರಿನ ಜನ ವಸತಿ ಪ್ರದೇಶಗಳಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿದ್ದು ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಬಿಬಿಎಂಪಿ ಜನರಿಗೆ ಮನವಿ ಮಾಡಿದೆ. ಯಲಹಂಕ, ಕಲ್ಯಾಣ ನಗರ, ಎಚ್.ಬಿ.ಆರ್. ಲೇಔಟ್, ಮಾರತ್ತಹಳ್ಳಿ, ನಾಗರಭಾವಿ, ಬನಶಂಕರಿ ಸೇರಿ ಕೆಲವು ಪ್ರದೇಶಗಳಲ್ಲಿ ವಿವಿಧ ಜಾತಿಯ ಹಾವುಗಳು ಪತ್ತೆ ಆಗಿದ್ದು, ಬಿಬಿಎಂಪಿ ಸಹಾಯವಾಣಿಗೆ ನಿತ್ಯವೂ ಹತ್ತಾರು ಕರೆಗಳು ಬರುತ್ತಿವೆ.