ತ್ರಿಪುರಾ ಪೂರ್ವ ಲೋಕಸಭಾ ಕ್ಷೇತ್ರದ ಭಾಗವಾದ ಧಲೈ ಜಿಲ್ಲೆಯ ದೂರದ ಬುಡಕಟ್ಟು ಗ್ರಾಮದ 600 ಕ್ಕೂ ಹೆಚ್ಚು ಮತದಾರರು ಶುಕ್ರವಾರ ಚುನಾವಣೆ ಬಹಿಷ್ಕಾರ ಮಾಡಿದ್ದಾರೆ. ಗ್ರಾಮದ 7 ಕಿ.ಮೀ ರಸ್ತೆ ದುರಸ್ತಿಯಾಗದ ಕಾರಣ ಚುನಾವಣೆ ಬಹಿಷ್ಕರಿಸಲಾಗಿದೆ ಎಂದು ಚುನಾವಣಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುಮಾರು 900 ಗ್ರಾಮಸ್ಥರು ತಮ್ಮ ಸಮುದಾಯಕ್ಕೆ ರಸ್ತೆಯು ಅತೀ ಮುಖ್ಯ ಎಂದಿದ್ದಾರೆ. ಹಾಗೆಯೇ ಹಲವಾರು ತಿಂಗಳುಗಳಿಂದ ಈ ರಸ್ತೆಯ ದುರಸ್ತಿಗಾಗಿ ಒತ್ತಾಯಿಸುತ್ತಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಕೋಲಾರ | ಮೂಲಭೂತ ಸೌಕರ್ಯ ಕೊರತೆ : ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು
“ನಿಗದಿಯಂತೆ, ತ್ರಿಪುರಾ ಪೂರ್ವ ಲೋಕಸಭಾ ಕ್ಷೇತ್ರದ ರೈಮಾ ವ್ಯಾಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಸದೈ ಮೋಹನ್ ಪಾರಾ ಮತಗಟ್ಟೆಗೆ ಚುನಾವಣಾ ತಂಡವು ತಲುಪಿದೆ” ಎಂದು ಗಂಡಚೆರಾ (ರೈಮಾ ವ್ಯಾಲಿ) ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಅರಿಂದಮ್ ದಾಸ್ ಪಿಟಿಐಗೆ ತಿಳಿಸಿದರು.
ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಗ್ರಾಮಸ್ಥರು ಪ್ರತಿಭಟಿಸಿದ್ದು ಮತಗಟ್ಟೆಯ ಹೊರಗೆ ನಿಂತಿದ್ದಾರೆ. ಆದರೆ ಮತ ಚಲಾಯಿಸಲು ಮತಗಟ್ಟೆಗೆ ಬಂದಿಲ್ಲ ಎಂದು ಅಧಿಕಾರಿ ಹೇಳಿದರು. ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆಯ ಬಗ್ಗೆಯೂ ದೂರು ನೀಡಿದ್ದಾರೆ. ಈ ಬಗ್ಗೆ ತಿಳಿದ ಬಳಿಕ ಅಧಿಕಾರಿಗಳ ತಂಡ ಸದಾಯಿ ಮೋಹನ್ ಪಾರಾಕ್ಕೆ ಧಾವಿಸಿ ಮತದಾರರ ಮನವೊಲಿಸಿ ಮತದಾನ ಮಾಡುವಂತೆ ಮನವಿ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ರಾಯಚೂರು | ಏಮ್ಸ್ ಮಂಜೂರು ಮಾಡದಿದ್ದರೆ ಚುನಾವಣೆ ಬಹಿಷ್ಕಾರ; ಎಚ್ಚರಿಕೆ
“ಪ್ರಜಾಪ್ರಭುತ್ವದ ಹಬ್ಬದಲ್ಲಿ ಗ್ರಾಮಸ್ಥರು ಸೇರುತ್ತಾರೆ ಎಂದು ನಾವು ಭಾವಿಸುತ್ತೇವೆ ಮತ್ತು ಆಡಳಿತವು ಅವರ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸುತ್ತದೆ” ಎಂದು ಚುನಾವಣಾಧಿಕಾರಿ ತಿಳಿಸಿದರು.
“ಧಲೈ ಜಿಲ್ಲೆಯ ಮಲ್ದಪರ (ಸದಾಯಿ ಮೋಹ ಪಾರಾ) ಮತ್ತು ಗುಮತಿ ಜಿಲ್ಲೆಯ ಅಂಪಿಯಲ್ಲಿ ಎರಡು ಮತಗಟ್ಟೆಗಳ ಮತದಾರರು ತಮ್ಮ ರಸ್ತೆ ಮತ್ತು ನೀರಿನ ಪೂರೈಕೆಯ ಬೇಡಿಕೆಯನ್ನು ಪರಿಹರಿಸದ ಕಾರಣ ಮತದಾನ ಮಾಡುವುದಿಲ್ಲ ಎಂಬ ಮಾಹಿತಿ ಲಭಿಸಿದೆ. ಅಧಿಕಾರಿಗಳು ಮತದಾನ ಮಾಡುವಂತೆ ಗ್ರಾಮಸ್ಥರ ಮನವೊಲಿಸಲು ಅಲ್ಲಿಗೆ ಹೋಗಿದೆ” ಎಂದು ರಾಜ್ಯ ಸಂಸದೀಯ ವ್ಯವಹಾರಗಳ ಸಚಿವ ರತನ್ ಲಾಲ್ ನಾಥ್ ಮಾಧ್ಯಮಗಳಿಗೆ ಹೇಳಿದರು.