ಪದ್ಮ ಪ್ರಶಸ್ತಿ 2025 | ಕರ್ನಾಟಕದ ವೆಂಕಪ್ಪ, ಭೀಮವ್ವ, ಡಾ. ವಿಜಯಲಕ್ಷ್ಮಿ ಸೇರಿ 30 ಮಂದಿಗೆ ಪದ್ಮಶ್ರೀ ಘೋಷಣೆ

Date:

Advertisements

ಕೇಂದ್ರ ಸರ್ಕಾರ ಕೊಡಮಾಡುವ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳಿಗೆ 2025ರ ಪುರಸ್ಕೃತರ ಪಟ್ಟಿಯನ್ನು ಸರ್ಕಾರ ಪ್ರಕಟಿಸಿದೆ. ಕರ್ನಾಟಕದ ಜಾನಪದ ಗಾಯಕ ವೆಂಕಪ್ಪ ಅಂಬಾಜಿ, ತೊಗಲುಬೊಂಬೆ ಆಟ ಕಲಾವಿದೆ ಭೀಮವ್ವ ದೊಡ್ಡಬಾಳಪ್ಪ, ಕಲಬುರಗಿ ಮೂಲದ ಕ್ಯಾನ್ಸರ್‌ ತಜ್ಞೆ ಡಾ. ವಿಜಯಲಕ್ಷ್ಮಿ ದೇಶಮಾನೆ ಸೇರಿದಂತೆ 30 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ.

ಪ್ಯಾರಾಲಿಂಪಿಕ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಪ್ಯಾರಾಲಿಂಪಿಯನ್ ಹರ್ವಿಂದರ್ ಸಿಂಗ್, ಬ್ರೆಜಿಲ್‌ನ ಹಿಂದು ಆಧ್ಯಾತ್ಮಿಕ ನಾಯಕ ಜೋನಾಸ್ ಮಾಸೆಟ್ಟಿ, ಭಾರತದ ಪರಂಪರೆಯ ಬಗ್ಗೆ ನಿರಂತರವಾಗಿ ಬರೆದಿರುವ ಹಗ್ ಮತ್ತು ಕೊಲೀನ್ ಗ್ಯಾಂಟ್ಜರ್ ದಂಪತಿಗಳಿಗೂ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಗರ್ಭಕಂಠದ ಕ್ಯಾನ್ಸರ್ ಪತ್ತೆ, ತಡೆಗಟ್ಟುವಿಕೆ ಮತ್ತು ನಿರ್ವಹಣೆಯಲ್ಲಿ ವಿಶೇಷ ತಜ್ಞರಾಗಿರುವ ದೆಹಲಿಯ ಸ್ತ್ರೀರೋಗ ತಜ್ಞೆ ಡಾ. ನೀರ್ಜಾ ಭಟ್ಲಾ, ಭೋಜ್‌ಪುರದ ಸಮಾಜ ಸೇವಕ ಭೀಮ್ ಸಿಂಗ್ ಭವೇಶ್, ದಕ್ಷಿಣ ಭಾರತೀಯ ಸಂಗೀತ ಮತ್ತು ಸಂಸ್ಕೃತಿಗೆ ಪ್ರಮುಖವಾದ ಶಾಸ್ತ್ರೀಯ ತಾಳವಾದ್ಯವಾದಲ್ಲಿ ಖ್ಯಾತಿ ಗಳಿಸಿರುವ ಪಿ. ದಚ್ಚನಮೂರ್ತಿ, ನಾಗಾಲ್ಯಾಂಡ್‌ನ ನೋಕ್ಲಾಕ್‌ನ ಹಣ್ಣಿನ ರೈತ ಎಲ್ ಹ್ಯಾಂಗ್ಥಿಂಗ್ ಕೂಡ ಪದ್ಮಶ್ರೀಗೆ ಭಾಜನರಾಗಿದ್ದಾರೆ.

Advertisements

ಗೋವಾ ಮೂಲದ ಸ್ವಾತಂತ್ರ್ಯ ಹೋರಾಟಗಾರ್ತಿ ಲಿಬಿಯಾ ಲೋಬೊ ಸರ್ದೇಸಾಯಿ, ಪಶ್ಚಿಮ ಬಂಗಾಳದ ಧಕ್ ಆಟಗಾರ ಗೋಕುಲ್ ಚಂದ್ರ ದಾಸ್, ಕುವೈತ್‌ನ ಯೋಗ ಸಾಧಕಿ ಶೈಖಾ ಎ ಜೆ ಅಲ್ ಸಬಾ ಅವರಿಗೂ ಪದ್ಮಶ್ರೀ ನೀಡಲು ಸರ್ಕಾರ ಆಯ್ಕೆ ಮಾಡಿದೆ.

2025ರಲ್ಲಿ ಪದ್ಮಶ್ರೀಗೆ ಆಯ್ಕೆಯಾದವರ ಪಟ್ಟಿ;
ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತ (ಕರ್ನಾಟಕ)

ವೆಂಕಪ್ಪ ಅಂಬಾಜಿ ಸುಗಟೇಕರ್ (ಕರ್ನಾಟಕ)

ಡಾ. ವಿಜಯಲಕ್ಷ್ಮಿ ದೇಶಮಾನೆ (ಕರ್ನಾಟಕ)

ಎಲ್ ಹ್ಯಾಂಗ್‌ಥಿಂಗ್ (ನಾಗಾಲ್ಯಾಂಡ್)

ಹರಿಮನ್ ಶರ್ಮಾ (ಹಿಮಾಚಲ ಪ್ರದೇಶ)

ಜುಮ್ಡೆ ಯೊಮ್ಗಮ್ ಗಾಮ್ಲಿನ್ (ಅರುಣಾಚಲ ಪ್ರದೇಶ)

ಜೋಯ್ನಾಚರಣ್ ಬತಾರಿ (ಅಸ್ಸಾಂ)

ನರೇನ್ ಗುರುಂಗ್ (ಸಿಕ್ಕಿಂ)

ವಿಲಾಸ್ ಡಾಂಗ್ರೆ (ಮಹಾರಾಷ್ಟ್ರ)

ಶೈಖಾ ಎ ಜೆ ಅಲ್ ಸಬಾಹ್ (ಕುವೈತ್)

ನಿರ್ಮಲಾ ದೇವಿ (ಬಿಹಾರ)

ಭೀಮ್ ಸಿಂಗ್ ಭಾವೇಶ್ (ಬಿಹಾರ)

ರಾಧಾ ಬಹಿನ್ ಭಟ್ (ಉತ್ತರಾಖಂಡ)

ಸುರೇಶ್ ಸೋನಿ (ಗುಜರಾತ್)

ಪಾಂಡಿ ರಾಮ್ ಮಾಂಡವಿ (ಛತ್ತೀಸ್‌ಗಢ)

ಜೋನಾಸ್ ಮಾಸೆಟ್ (ಬ್ರೆಜಿಲ್)

ಜಗದೀಶ್ ಜೋಶಿಲಾ (ಮಧ್ಯಪ್ರದೇಶ)

ಹರ್ವಿಂದರ್ ಸಿಂಗ್ (ಹರಿಯಾಣ)

ಭೇರು ಸಿಂಗ್ ಚೌಹಾಣ್ (ಮಧ್ಯಪ್ರದೇಶ)

ಪಿ ದಚ್ಚನಮೂರ್ತಿ (ಪುದುಚೇರಿ)

ಲಿಬಿಯಾ ಲೋಬೋ ಸರ್ದೇಸಾಯಿ (ಗೋವಾ)

ಗೋಕುಲ್ ಚಂದ್ರ ದಾಸ್ (ಪಶ್ಚಿಮ ಬಂಗಾಳ)

ಹಗ್ ಗಂಟ್ಜರ್ (ಉತ್ತರಾಖಂಡ)

ಕೊಲೀನ್ ಗ್ಯಾಂಟ್ಜರ್ (ಉತ್ತರಾಖಂಡ)

ಡಾ. ನೀರ್ಜಾ ಭಟ್ಲಾ (ದೆಹಲಿ)

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X