10ನೇ ತರಗತಿ ಪಠ್ಯದಿಂದ ಪ್ರಜಾಪ್ರಭುತ್ವದ ವಿಷಯ ಕೈಬಿಟ್ಟ ಕೇಂದ್ರ ಸರ್ಕಾರ

Date:

Advertisements

ವಿಜ್ಞಾನ ಪಠ್ಯದಲ್ಲಿ ಪೀರಿಯಾಡಿಕ್‌ ಟೇಬಲ್‌ ಮಾಯ

ಮಕ್ಕಳಿಗೆ ಹೊರೆಯಾಗುತ್ತಿದೆ ಎಂದ ʼಎನ್‌ಸಿಇಆರ್‌ಟಿʼ

ಹತ್ತನೇ ತರಗತಿಯ ಪಠ್ಯಪುಸ್ತಕಗಳಿಂದ ಪ್ರಜಾಪ್ರಭುತ್ವದ ಕುರಿತು ಮತ್ತು ರಸಾಯನ ಶಾಸ್ತ್ರವನ್ನು ಅರಿಯಲು ಪ್ರಮುಖ ಅಧ್ಯಾಯವಾದ ʼಪೀರಿಯಾಡಿಕ್‌ ಟೇಬಲ್‌ʼ ಸೇರಿದಂತೆ 6 ಅಧ್ಯಾಯಗಳನ್ನು ಕೇಂದ್ರದ ʼಎನ್‌ಸಿಇಆರ್‌ಟಿʼ (ನ್ಯಾಶನಲ್‌ ಕೌನ್ಸಿಲ್‌ ಆಫ್‌ ಎಜುಕೇಶನಲ್‌ ರಿಸರ್ಚ್‌ ಆಂಡ್‌ ಟ್ರೈನಿಂಗ್‌) ಕೈಬಿಟ್ಟಿದೆ. ಈ ಅಧ್ಯಾಯಗಳು ಮಕ್ಕಳ ಓದಿಗೆ ಹೆಚ್ಚಿನ ಹೊರೆಯಾಗಲಿವೆ ಎಂಬ ಕಾರಣ ನೀಡಲಾಗಿದೆ.

Advertisements

ʼಪ್ರಜಾ ಸತ್ತಾತ್ಮಕ ರಾಜಕೀಯʼ ವಿಷಯದಲ್ಲಿ, ಐದನೇ ಅಧ್ಯಾಯವಾದ ʼಪಾಪ್ಯುಲರ್‌ ಸ್ಟ್ರಗಲ್ಸ್‌ ಆಂಡ್‌ ಮೂಮೆಂಟ್ಸ್‌ʼ, ಆರನೇ ಅಧ್ಯಾಯವಾದ ʼಪೊಲಿಟಿಕಲ್‌ ಪಾರ್ಟೀಸ್‌ʼ ಮತ್ತು ಎಂಟನೇ ಅಧ್ಯಾಯವಾದ ʼಚಾಲೆಂಜಸ್‌ ಟು ಡೆಮಾಕ್ರಸಿʼ ಈ ಮೂರು ಅಧ್ಯಾಯಗಳನ್ನು ಕೈ ಬಿಡಲಾಗಿದೆ.

ʼವಿಜ್ಞಾನʼ ವಿಷಯದಲ್ಲಿ, ಐದನೇ ಅಧ್ಯಾಯವಾದ ʼಪೀರಿಯಾಡಿಕ್‌ ಕ್ಲಾಸಿಫಿಕೇಶನ್‌ ಆಫ್‌ ಎಲಿಮೆಂಟ್ಸ್‌ʼ, 14ನೇ ಅಧ್ಯಾಯವಾದ ʼಸೋರ್ಸ್‌ ಆಫ್‌ ಎನರ್ಜಿʼ 16ನೇ ಅಧ್ಯಾಯವಾದ ʼಸಸ್ಟೇನೆಬಲ್‌ ಮ್ಯಾನೇಜ್‌ಮೆಂಟ್‌ ಆಫ್‌ ನ್ಯಾಚುರಲ್‌ ರೀಸೋರ್ಸಸ್‌ʼ ಈ ಮೂರು ಅಧ್ಯಾಯಗಳನ್ನು ಎನ್‌ಸಿಇಆರ್‌ಟಿ ಕೈ ಬಿಟ್ಟಿದೆ.

NCERT 1

ಕಳೆದ ವರ್ಷ ಇದೇ 10ನೇ ತರಗತಿಯ ಪಠ್ಯದಿಂದ ʼಥಿಯರಿ ಆಫ್‌ ಎವಲ್ಯೂಷನ್‌ʼ ಅಧ್ಯಾಯವನ್ನು ತೆಗೆದು ಹಾಕಲಾಗಿತ್ತು. ಅದೇ ಸಂದರ್ಭದಲ್ಲೇ ವಿಜ್ಞಾನ ಪ್ರಜಾಪ್ರಭುತ್ವ ರಾಜಕಾರಣ ವಿಷಯಗಳಲ್ಲಿನ 6 ಅಧ್ಯಾಯಗಳನ್ನು ಕೂಡ ʼಎನ್‌ಸಿಇಆರ್‌ಟಿʼ ಕೈ ಬಿಟ್ಟಿದೆ. ಇತ್ತೀಚೆಗೆ ಪಠ್ಯಪುಸ್ತಕಗಳು ಮಾರುಕಟ್ಟೆಯಲ್ಲಿ ಲಭ್ಯವಾಗಿರುವ ಹಿನ್ನೆಲೆ ನಿರ್ದಿಷ್ಟ ಅಧ್ಯಾಯಗಳು ಮಾಯವಾಗಿರುವುದು ವಿದ್ಯಾರ್ಥಿಗಳು ಮತ್ತು ಪೋಷಕರ ಗಮನಕ್ಕೆ ಬಂದಿದೆ.

ಕೊರೊನಾ ಸಾಂಕ್ರಾಮಿಕದಿಂದಾಗಿ ಮನೆಯಲ್ಲೇ ಅಭ್ಯಾಸ ಮಾಡುವ ಮಕ್ಕಳಿಗೆ ನಿರ್ದಿಷ್ಟ ಅಧ್ಯಾಯಗಳು ಹೊರೆಯಾಗಿ ಪರಿಣಮಿಸಲಿವೆ. ಕೆಲವು ಅಧ್ಯಾಯಗಳು ಪ್ರಸ್ತುತವಲ್ಲ. ಹೀಗಾಗಿ ಆಯ್ದ ಅಧ್ಯಾಯಗಳನ್ನು ಪಠ್ಯಕ್ರಮದಿಂದ ತೆಗೆದಿರುವುದಾಗಿ ಎನ್‌ಸಿಇಆರ್‌ಟಿ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿತ್ತು.

“10ನೇ ತರಗತಿ ಮುಗಿಸಿದ ಬಳಿಕ ಪದವಿ ಪೂರ್ವ ಶಿಕ್ಷಣಕ್ಕೆ ಕಾಲಿಡುವ ವಿದ್ಯಾರ್ಥಿಗಳು ವಿಜ್ಞಾನ ವಿಭಾಗ ಆಯ್ದುಕೊಂಡರೆ ಅವರಿಗೆ ʼಪೀರಿಯಾಡಿಕ್‌ ಟೇಬಲ್‌ʼನ ಪರಿಚಯವಿಲ್ಲದೆ ಅವರಿಗೆ ಕೆಮಿಸ್ಟ್ರಿಯ ಬಗ್ಗೆ ತಿಳಿಯಲು ಸಾಧ್ಯವಿಲ್ಲ. ಹಾಗೆಯೇ ಪ್ರಜಾಪ್ರಭುತ್ವ ಮತ್ತು ಇತಿಹಾಸದ ಬಗ್ಗೆ ತಿಳಿಯದೇ ಉನ್ನತ ಮಟ್ಟದ ಶಿಕ್ಷಣಕ್ಕೆ ಕಾಲಿಟ್ಟರೆ ಮಕ್ಕಳು ಗೊಂದಲಕ್ಕೆ ಸಿಲುಕಿಕೊಳ್ಳುತ್ತಾರೆ” ಪೋಷಕರು ಮತ್ತು ಶಿಕ್ಷಣ ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

Download Eedina App Android / iOS

X