ಈ ವಾರದ ನಂತರ ಇಬ್ಬರು ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಪ್ರಕ್ರಿಯೆಗೆ ಹೊಸ ಸವಾಲುಗಳು ಎದುರಾಗಿದ್ದು,ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಸಂದರ್ಭ 2023ರ ಆದೇಶವನ್ನು ಉಲ್ಲೇಖಿಸಿ ಪ್ರಸ್ತುತ ನೇಮಕಾತಿಗೆ ತಡೆ ನೀಡುವಂತೆ ಮಧ್ಯ ಪ್ರದೇಶದ ಕಾಂಗ್ರೆಸ್ ನಾಯಕರೊಬ್ಬರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಆಯುಕ್ತ ಅರುಣ್ ಗೋಯಲ್ ಇತ್ತೀಚಿಗೆ ನೀಡಿದ ರಾಜೀನಾಮೆ ಹಾಗೂ ಕಳೆದ ತಿಂಗಳು ಅನುಪ್ ಚಂದ್ರ ಪಾಂಡೆ ನಿವೃತ್ತಿ ಒಳಗೊಂಡು ಎರಡು ಚುನಾವಣಾ ಆಯುಕ್ತರ ಹುದ್ದೆ ಖಾಲಿಯಿವೆ. ಮುಖ್ಯ ಆಯುಕ್ತ ರಾಜೀವ್ ಕುಮಾರ್ ಒಳಗೊಂಡ ಮೂವರು ಆಯುಕ್ತರು ಈ ವಾರದ ನಂತರ ಲೋಕಸಭಾ ಚುನಾವಣಾ ಘೋಷಿಸುವ ಸಾಧ್ಯತೆಯಿದೆ.
ಪ್ರಧಾನ ಮಂತ್ರಿಯ ಮೂರು ಸದಸ್ಯರ ಸಮಿತಿಯ ಶಿಫಾರಸ್ಸಿನೊಂದಿಗೆ ರಾಷ್ಟ್ರಪತಿಗಳು ಕೇಂದ್ರ ಚುನಾವಣಾ ಆಯುಕ್ತರನ್ನು ನೇಮಕ ಮಾಡುತ್ತಾರೆ. ಸಮಿತಿಯಲ್ಲಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಕೂಡ ಇರಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿಯ ಬಾಂಡ್ ಬಹಿರಂಗಗೊಳಿಸಲು ಎಸ್‌ಬಿಐ ಏಕೆ ಹಿಂಜರಿಯುತ್ತಿದೆ?
ಉನ್ನತ ಮಟ್ಟದ ಸಮಿತಿ ಮಾರ್ಚ್ 15ರೊಳಗೆ ನೇಮಕಾತಿಯನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ.
ಮಧ್ಯ ಪ್ರದೇಶದ ನಾಯಕಿಯಾದ ಜಯಾ ಠಾಕೂರ್ ಅವರು 2023ರ ಸಾಂವಿಧಾನಿಕ ಪೀಠದ ಆದೇಶವನ್ನು ಉಲ್ಲೇಖಿಸಿದ್ದು, ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಸಂದರ್ಭ ಸಮಿತಿಯಲ್ಲಿ ಪ್ರಧಾನಿ, ವಿಪಕ್ಷ ನಾಯಕ ಹಾಗೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು ಇರಬೇಕೆಂದು ತಿಳಿಸಿದ್ದಾರೆ.
ನೂತನ ಕಾನೂನು ಅಸಂವಿಧಾನಿಕ ಎಂದು ಹೇಳಿರುವ ಠಾಕೂರ್ ಅವರು, ಚುನಾವಣಾ ಆಯುಕ್ತರ ನೇಮಕಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ 2023ರಲ್ಲಿ ನೀಡಿರುವ ತೀರ್ಪನ್ನು ಪರಿಗಣಿಸುವಂತೆ ಕೋರಿದ್ದಾರೆ. ನೇಮಕಾತಿ ಸಮಿತಿಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರನ್ನು ಸೇರಿಸಿಕೊಳ್ಳುವುದು ಪಾರದರ್ಶಕತೆಯ ಪ್ರಕ್ರಿಯೆಯನ್ನು ಖಚಿತಪಡಿಸುತ್ತದೆ ಎಂದು ತಿಳಿಸಿದ್ದಾರೆ.
2023ರ ಆದೇಶದಂತೆ, ಸಂಸತ್ತು ಕಾನೂನನ್ನು ರಚಿಸುವವರೆಗೂ ತೀರ್ಪು ಉತ್ತಮವಾಗಿರುತ್ತದೆ ಎಂದು ಹೇಳಿದರು.
ಕೇಂದ್ರ ಸರ್ಕಾರವು ಕಳೆದ ಡಿಸೆಂಬರ್‌ನಲ್ಲಿ ಮುಖ್ಯ ಚುನಾವಣಾ ಆಯುಕ್ತರ ನೇಮಕಕ್ಕೆ ಸಂಬಂಧಿಸಿದಂತೆ ನೂತನ ಕಾನೂನನ್ನು ಜಾರಿಗೆ ತಂದಿದ್ದು, ನೂತನ ಕಾನೂನಿನ ಅನ್ವಯ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ಬದಲಿದೆ ಕೇಂದ್ರ ಸಚಿವರು ಸಮಿತಿಯಲ್ಲಿ ಇರುತ್ತಾರೆ.
