ಭಾರತದ ಸ್ವಚ್ಛ ನಗರ ಇಂದೋರ್ ಭಾನುವಾರ ಒಂದೇ ದಿನದಲ್ಲಿ 11 ಲಕ್ಷ ಸಸಿಗಳನ್ನು ನೆಡುವ ಮೂಲಕ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದೆ.
ಇಂದೋರ್‌ನ 40ಕ್ಕೂ ಹೆಚ್ಚು ಅನಿವಾಸಿ ಭಾರತೀಯರು (ಎನ್‌ಆರ್‌ಐ) ಸೇರಿದಂತೆ 30,000ಕ್ಕೂ ಹೆಚ್ಚು ಜನರು ಇಂದೋರ್-ಉಜ್ಜಯಿನಿ ರಸ್ತೆಯಲ್ಲಿರುವ ರೇವತಿ ರೇಂಜ್ ಗುಡ್ಡದ ಮೇಲೆ ಸಸಿಗಳನ್ನು ನೆಡುವ ಅಭಿಯಾನವನ್ನು ಮಾಡಿದ್ದು ವಿಶ್ವದಾಖಲೆಯನ್ನು ಬರೆದಿದ್ದಾರೆ.
ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಾ ಈ ಮೆಗಾ ಟ್ರೀ ಪ್ಲಾಂಟೇಶನ್ ಡ್ರೈವ್ ಅಡಿಯಲ್ಲಿ ಇಂದೋರ್‌ನಲ್ಲಿ ಸಸಿ ನೆಟ್ಟರು. ಇನ್ನು ಈ ಸಂಪೂರ್ಣ ಅಭಿಯಾನದ ಮೇಲೆ ಕಣ್ಣಿಡಲು 100 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ರಾಷ್ಟ್ರವ್ಯಾಪಿ ಅಭಿಯಾನದ ಅಡಿಯಲ್ಲಿ, ಮಧ್ಯಪ್ರದೇಶದಲ್ಲಿ 5.5 ಕೋಟಿ ಸೇರಿದಂತೆ ದೇಶಾದ್ಯಂತ 140 ಕೋಟಿ ಸಸಿಗಳನ್ನು ನೆಡಲಾಗುವುದು. ಈ ಪೈಕಿ ಮಧ್ಯಪ್ರದೇಶದ ಇಂದೋರ್‌ನಲ್ಲಿ 51 ಲಕ್ಷ ಸಸಿಗಳನ್ನು ನೆಡಲಾಗುತ್ತಿದೆ.
Union Home Minister @AmitShah planted saplings in a program to plant 11 lakh saplings in a day under the ‘Ek Ped Maa Ke Naam’ campaign in Indore
Under the campaign ‘Ek Ped Maa Ke Naam’, Indore creates world record of planting 11 lakh saplings in a day and achieved its target of… pic.twitter.com/5SUUnAwMCc
— PIB India (@PIB_India) July 15, 2024
ಇದನ್ನು ಓದಿದ್ದೀರಾ? ಉಡುಪಿ ಪ್ರಕರಣ | ’15 ನಿಮಿಷದಲ್ಲಿ 4 ಕೊಲೆ, ಇದು ವಿಶ್ವ ದಾಖಲೆ’ ಎಂದು ವಿಕೃತಿ ಮೆರೆದವನ ಮೇಲೆ ಎಫ್‌ಐಆರ್
ಅಸ್ಸಾಂ ಈ ಹಿಂದೆ ಒಂದೇ ದಿನದಲ್ಲಿ 9.26 ಲಕ್ಷ ಸಸಿಗಳನ್ನು ನೆಡುವ ಮೂಲಕ ವಿಶ್ವ ದಾಖಲೆಯನ್ನು ಬರೆದಿದೆ. ಭಾನುವಾರ ಇಂದೋರ್ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಶೂಟಿಂಗ್ ಶ್ರೇಣಿಯನ್ನು ಹೊಂದಿರುವ ಬೆಟ್ಟದ ಮೇಲೆ ಒಂದೇ ದಿನದಲ್ಲಿ 11 ಲಕ್ಷ ಸಸಿಗಳನ್ನು ನೆಡುವ ಮೂಲಕ ಅಸ್ಸಾಂನ ವಿಶ್ವ ದಾಖಲೆಯನ್ನು ಮುರಿದಿದೆ.
ಭಾನುವಾರ ಸಂಜೆ ಗಿನ್ನೆಸ್ ವಿಶ್ವ ದಾಖಲೆ ತಂಡದಿಂದ ಹೊಸ ವಿಶ್ವ ದಾಖಲೆಯ ಪ್ರಮಾಣಪತ್ರವನ್ನು ಮಧ್ಯ ಪ್ರದೇಶ ಮುಖ್ಯಮಂತ್ರಿ ಡಾ ಮೋಹನ್ ಯಾದವ್ ಅವರು ಸಚಿವ ಕೈಲಾಶ್ ವಿಜಯವರ್ಗಿಯ ಮತ್ತು ಇಂದೋರ್ ಮೇಯರ್ ಪುಷ್ಯಮಿತ್ರ ಭಾರ್ಗವ ಸಮ್ಮುಖದಲ್ಲಿ ಪಡೆದರು.