ಮೂರನೇ ಬಾರಿ ಅಧಿಕಾರ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ ಪಿಎಂ ಕಿಸಾನ್ ನಿಧಿ 17ನೇ ಕಂತಿನ ಅನುದಾನ ಬಿಡುಗಡೆಯ ಮೊದಲ ಕಡತಕ್ಕೆ ಸಹಿ ಹಾಕಿದ್ದಾರೆ.
“ಈ ಯೋಜನೆಯು 9.3 ಕೋಟಿ ರೈತರಿಗೆ ಅನುಕೂಲವಾಗಲಿದ್ದು, ಸುಮಾರು 20 ಸಾವಿರ ಕೋಟಿ ರೂ ವಿತರಣೆಯಾಗಲಿದೆ. ನಮ್ಮ ಸರ್ಕಾರ ರೈತರ ಕಲ್ಯಾಣಕ್ಕೆ ಸಂಪೂರ್ಣ ಬದ್ಧವಾಗಿದೆ. ಅಧಿಕಾರ ವಹಿಸಿಕೊಂಡ ನಂತರ ರೈತರ ಕಲ್ಯಾಣಕ್ಕಾಗಿ ಕೈಗೊಂಡಿರುವ ಯೋಜನೆ ಸೂಕ್ತವೆನಿಸಿದೆ. ಮುಂಬರುವ ಸಮಯದಲ್ಲಿ ರೈತರು ಹಾಗೂ ಕೃಷಿ ವಲಯಕ್ಕಾಗಿ ಹೆಚ್ಚು ಕಾರ್ಯ ನಿರ್ವಹಿಸಲು ಬಯಸಿದ್ದೇವೆ” ಎಂದು ಪ್ರಧಾನಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದುಬಾರಿ ಚುನಾವಣೆಗಳು, ಸಾಮಾನ್ಯರ ಸ್ಪರ್ಧೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ನೇತೃತ್ವದ ಸರ್ಕಾರ ಮೂರನೇ ಬಾರಿ ಅಧಿಕಾರಕ್ಕೆ ಬಂದಿದ್ದು, ಈಗ ಎಲ್ಲರ ಕಣ್ಣು ಖಾತೆ ಹಂಚಿಕೆ ಮೇಲಿದೆ. ಮೊದಲ ಸಂಪುಟಸಭೆ ಇಂದು ನಡೆಯುವ ಸಂಭವವಿದೆ.
ಸಂಪುಟ ಹಾಗೂ ರಾಜ್ಯ ಸಚಿವರನ್ನು ಒಳಗೊಂಡು ಒಟ್ಟು 71 ಸದಸ್ಯರು ರಾಷ್ಟ್ರಪತಿ ಭವನದಲ್ಲಿ ಜೂನ್ 9 ರಂದು ಪ್ರಮಾಣ ವಚನ ಸ್ವೀಕರಿಸಿದರು. ಪ್ರಧಾನಿ ಸೇರಿ 72 ಮಂತ್ರಿಗಳಿಗೆ 81 ಖಾತೆಗಳನ್ನು ಹಂಚಿಕೆ ಮಾಡಬೇಕಾಗಿದೆ.
