ಚುನಾವಣಾ ಪ್ರಚಾರದಲ್ಲಿ ಪ್ರಧಾನಿಯ ಕಚ್ಚತೀವಿನ ವಿವಾದಿತ ಹೇಳಿಕೆ ಅತ್ಯಂತ ಬೇಜವಾಬ್ದಾರಿ: ಕಾಂಗ್ರೆಸ್

Date:

Advertisements

ಲೋಕಸಭೆ ಚುನಾವಣಾ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಲಂಕಾದ ಕಚ್ಚತೀವು ವಿಷಯವನ್ನು ವಿವಾದವನ್ನಾಗಿಸಿರುವುದರ ಬಗ್ಗೆ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಇದರಿಂದ ಭಾರತ ಹಾಗೂ ಶ್ರೀಲಂಕಾ ನಡುವಿನ ಸಂಬಂಧ ಹಳಿತಪ್ಪುವ ಬಗ್ಗೆ ಆತಂಕ ವ್ಯಕ್ತಪಡಿಸಿದೆ.

ಪ್ರಧಾನಿ ಹಾಗೂ ಅವರ ಸಹೋದ್ಯೋಗಿಗಳು ನೆರೆಯ ದೇಶದೊಂದಿಗೆ ದೊಡ್ಡ ಭಯ ಸೃಷ್ಟಿಸುತ್ತಿರುವುದಕ್ಕೆ ಕ್ಷಮೆಯಾಚಿಸುತ್ತೀರಾ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ವಿವಾದವನ್ನು ಕೆದಕಿರುವುದು ಅತ್ಯಂತ ಬೇಜವಾಬ್ದಾರಿ ಹಾಗೂ ಇತಿಹಾಸವನ್ನು ವಿರೂಪಗೊಳಿಸುವುದಾಗಿದೆ ಎಂದು ಜೈರಾಮ್ ರಮೇಶ್‌ ತಿಳಿಸಿದ್ದಾರೆ.

Advertisements

ತಮಿಳುನಾಡಿನಲ್ಲಿ ಚುನಾವಣೆಗಳು ನಡೆಯುವ ಸಂದರ್ಭದಲ್ಲಿ ವಿದೇಶಾಂಗ ಸಚಿವರಾಗಿದ್ದ ಎಸ್‌ ಜೈಶಂಕರ್‌ ಅವರು ಕಚ್ಚತೀವು ಪ್ರದೇಶದ ಬಗ್ಗೆ ಕಾಂಗ್ರೆಸ್‌ನ ಮಾಜಿ ಪ್ರಧಾನಿಗಳ ಅಸಡ್ಡೆ ಪ್ರದರ್ಶಿಸಿ ಭಾರತೀಯ ಮೀನುಗಾರರ ಹಕ್ಕುಗಳನ್ನು ಬಿಟ್ಟುಕೊಟ್ಟರು ಎಂದು ಹೇಳಿದ್ದರು.

“ ಚುನಾವಣಾ ಪ್ರಚಾರದಲ್ಲಿ ಮೂರನೇ ಬಾರಿ ಪ್ರಧಾನಿಯಾಗುತ್ತಿರುವ ಹಾಗೂ ತಮಿಳುನಾಡಿನ ಅವರ ಬಿಜೆಪಿ ಸಹೋದ್ಯೋಗಿಗಳು ಸೃಷ್ಟಿಸಿರುವ ಕಚ್ಚತೀವು ಸಮಸ್ಯೆಯನ್ನೆ ನೆನಪಿಸಿಕೊಳ್ಳಿ. ಇದೊಂದು ಅತ್ಯಂತ ಬೇಜವಾಬ್ದಾರಿ ಹಾಗೂ ಇತಿಹಾರವನ್ನು ಹಾಳುಮಾಡುವುದಾಗಿದೆ” ಎಂದು ಜೈರಾಮ್‌ ರಮೇಶ್ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದುಬಾರಿ ಚುನಾವಣೆಗಳು, ಸಾಮಾನ್ಯರ ಸ್ಪರ್ಧೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ

ಬಿಜೆಪಿ ನಾಯಕರು ಈ ವಿಷಯದಲ್ಲಿ ಇತಿಹಾಸವನ್ನು ತಿರುಚಿದ್ದಾರೆ. 1974ರಲ್ಲಿ ಕಚ್ಚತೀವು ಶ್ರೀಲಂಕಾದ ಭಾಗವಾಯಿತು. ಅದೇ ವರ್ಷ ಇಂದಿರಾ ಗಾಂಧಿ ಹಾಗೂ ಸಿರಿಮಾ ಬಂಡಾರನಾಯಕೆ ಅವರು ಒಪ್ಪಂದ ಮಾಡಿಕೊಂಡು ಶ್ರೀಲಂಕಾದಿಂದ ಭಾರತಕ್ಕೆ 6 ಲಕ್ಷ ತಮಿಳರನ್ನು ವಾಪಸ್ ಕರೆಸಿಕೊಳ್ಳಲಾಗಿತ್ತು. ಒಂದೇ ನಡೆಯಲ್ಲಿ ಪ್ರಧಾನಿ ಇಂದಿರಾ ಗಾಂಧಿ ಅವರು ಮಾನವ ಹಕ್ಕುಗಳ ರಕ್ಷಣೆ ಹಾಗೂ ಕಷ್ಟದಲ್ಲಿದ್ದ 6 ಲಕ್ಷ ಜನರ ಘನತೆಯನ್ನು ಎತ್ತಿಹಿಡಿದಿದ್ದರು ಎಂದು ಜೈರಾಮ್‌ ರಮೇಶ್‌ ತಿಳಿಸಿದ್ದಾರೆ.

2015ರಲ್ಲಿ ಮೋದಿ ಸರ್ಕಾರ ಬಾಂಗ್ಲಾದೇಶದೊಂದಿಗೆ ಭೂಗಡಿ ಒಪ್ಪಂದ ಮಾಡಿಕೊಂಡು ಭಾರತದ 17,161 ಎಕರೆಗ ಜಾಗವನ್ನು ನೀಡಿ ನೆರೆಯ ದೇಶದ 7110 ಎಕರೆ ಭೂಮಿಯನ್ನು ಪಡೆದಿತ್ತು. ಇದರ ಪರಿಣಾಮವಾಗಿ ಭಾರತ ಭೂಪ್ರದೇಶದ 10,051 ಭೂಪ್ರದೇಶ ಕುಸಿದಿತ್ತು. ಕಾಂಗ್ರೆಸ್ ಆ ಸಂದರ್ಭದಲ್ಲಿ ಪ್ರಧಾನಿ ಮೇಲೆ ಆರೋಪ ಮಾಡುವುದಕ್ಕಿಂತ ಸಂಸತ್ತಿನ ಎರಡೂ ಸದನಗಳಲ್ಲಿ ಬೆಂಬಲ ವ್ಯಕ್ತಪಡಿಸಿತ್ತು ಎಂದು ಪಕ್ಷದ ನಡೆಯನ್ನು ಜೈರಾಮ್‌ ರಮೇಶ್ ಶ್ಲಾಘಿಸಿದರು.

ಕಳೆದ ಕೆಲವು ವರ್ಷಗಳಿಂದ ಚೀನಾದ ಸೇನೆ ಭಾರತದ ಭೂಗಡಿಯನ್ನು ದೊಡ್ಡಮಟ್ಟದಲ್ಲಿ ವಶಪಡಿಸಿಕೊಳ್ಳುತ್ತಿರುವುದು ದೇಶದ ಸಮಗ್ರತೆಗೆ ನಿಜವಾದ ಬೆದರಿಕೆಯಾಗಿದೆ. ಪ್ರಧಾನಿ ಅಧಿಕಾರಕ್ಕೆ ಬಂದ ನಂತರ ತಮ್ಮ ಬಲ ಪ್ರದರ್ಶಿಸುವ ಬದಲು 2020ರ ಜೂನ್‌ 19ರಂದು ಚೀನಾಗೆ ಕ್ಲೀನ್‌ ಚಿಟ್‌ ನೀಡಿದಲ್ಲದೆ,ಒಬ್ಬ ಚೀನಿ ಯೋಧನು ಭಾರತದ ಗಡಿಯನ್ನು ಪ್ರವೇಶಿಸಿಲ್ಲ ಎಂದು ಹೇಳಿದ್ದರು. ಸ್ವತಃ ತಮ್ಮ ಪಕ್ಷದ ಸಂಸದರು ಅತಿಕ್ರಮಣದ ಬಗ್ಗೆ ದೃಢೀಕರಿಸಿದ್ದರೂ ಒಪ್ಪುವುದಕ್ಕೆ ತಯಾರಿರಲಿಲ್ಲ ಎಂದು ಜೈರಾಮ್‌ ರಮೇಶ್‌ ಪ್ರಧಾನಿಯ ಬಗ್ಗೆ ವಾಗ್ಧಾಳಿ ನಡೆಸಿದ್ದಾರೆ.

ಭಾರತದ ಭದ್ರತೆಯ ಬಗ್ಗೆ ತಮ್ಮ ಸ್ವಂತ ಕಳಪೆ ದಾಖಲೆಯ ಬಗ್ಗೆ ಪ್ರಧಾನಿಗೆ ಉತ್ತರ ಕೊಡಲು ಸಾಧ್ಯವಾಗಿಲ್ಲ. ತಮಿಳುನಾಡಿನಲ್ಲಿ ಬಿಜೆಪಿ ಶೂನ್ಯ ಪ್ರದರ್ಶನ ದಾಖಲಿಸಿರುವುದರಿಂದ ಪ್ರಧಾನಿ ಹಾಗೂ ಆತನ ಪಕ್ಷದ ಹೊಗಳುಭಟ್ಟರು ಹತಾಶರಾಗಿದ್ದಾರೆ ಎಂದು ಜೈರಾಮ್‌ ರಮೇಶ್ ಹೇಳಿದರು.

ಪ್ರಧಾನಿ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಶ್ರೀಲಂಕಾದ ಅಧ್ಯಕ್ಷ ರಾನಿಲ್ ವಿಕ್ರಮ ಸಿಂಘೆ ಆಗಮಿಸಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

Download Eedina App Android / iOS

X