ಅತ್ಯಾಚಾರಗಳನ್ನು ಪೊಲೀಸರೇ ಏಕಾಂಗಿಯಾಗಿ ತಡೆಗಟ್ಟಲು ಸಾಧ್ಯವಿಲ್ಲ ಎಂದು ಮಧ್ಯಪ್ರದೇಶದ ಪೊಲೀಸ್ ಮಹಾ ನಿರ್ದೇಶಕ ಕೈಲಾಶ್ ಮಕ್ವಾನಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಉಜ್ಜಯಿನಿಯಲ್ಲಿ ಆಯೋಜನೆಗೊಂಡಿದ್ದ ವಿಭಾಗೀಯ ಪರಾಮರ್ಶೆ ಸಭೆಯಲ್ಲಿ ಮಾತನಾಡಿದ ಅವರು, “ಅತ್ಯಾಚಾರ ಪ್ರಕರಣಗಳು ಏರಿಕೆಯಾಗುತ್ತಿರಲು ಅಂತರ್ಜಾಲ ಬಳಕೆ, ಮೊಬೈಲ್ ಫೋನ್‌ಗಳು, ಮದ್ಯಪಾನ ಹಾಗೂ ಕುಸಿಯುತ್ತಿರುವ ನೈತಿಕ ಮೌಲ್ಯಗಳು ಕಾರಣ ಎಂದು ದೂಷಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೊಹರಂ ನಿಷೇಧ; ರಾಯಚೂರು ಜಿಲ್ಲಾಧಿಕಾರಿ ಕೊಟ್ಟ ಸಂದೇಶವೇನು?
ಅತ್ಯಾಚಾರ ಪ್ರಕರಣಗಳಲ್ಲಿ ಏರಿಕೆಯಾಗುತ್ತಿರುವುದರ ಹಿಂದಿನ ಕಾರಣವೇನು ಎಂಬ ಪ್ರಶ್ನೆಗೆ, ಜನರಿಗೆ ಮೊಬೈಲ್ ಫೋನ್‌ಗಳು ಹಾಗೂ ಅಂತರ್ಜಾಲ ಸೇವೆ ವ್ಯಾಪಕವಾಗಿ ಲಭ್ಯವಾಗುತ್ತಿರುವುದರಿಂದ, ಅವರಿಗೆ ಅಶ್ಲೀಲ ತುಣುಕುಗಳಿಗೆ ಸುಲಭವಾಗಿ ಪ್ರವೇಶ ದೊರೆಯುತ್ತಿದೆ ಎಂದು ತಿಳಿಸಿದ್ದಾರೆ.
“ಈ ಪ್ರವೃತ್ತಿಗೆ ಹಲವಾರು ಕಾರಣಗಳಿವೆ. ನನ್ನ ಪ್ರಕಾರ, ಇದಕ್ಕೆ ಅಂತರ್ಜಾಲ ಸೇವೆ, ಮೊಬೈಲ್ ಫೋನ್‌ಗಳು, ಅಶ್ಲೀಲ ತುಣುಕುಗಳ ಲಭ್ಯತೆ, ಮದ್ಯಪಾನ ಹಾಗೂ ಮೊಬೈಲ್ ಫೋನ್‌ಗಳ ಮೂಲಕ ಜನರು ಹೇಗೆ ಯಾವುದೇ ಸ್ಥಳದಿಂದ, ಯಾವುದೇ ಸಮಯದಲ್ಲಿ ಸಂಪರ್ಕಗೊಳ್ಳಲಿದ್ದಾರೆ ಎಂಬುದು ಕಾರಣವಾಗಿದೆ. ಸಮಾಜದ ನೈತಿಕ ಮೌಲ್ಯಗಳಲ್ಲಿ ಕುಸಿತವುಂಟಾಗಿದೆ. ಇವೆಲ್ಲ ಅತ್ಯಾಚಾರ ಪ್ರಕರಣಗಳಲ್ಲಿನ ಏರಿಕೆಗೆ ಕೊಡುಗೆ ನೀಡುತ್ತಿರುವ ಸಂಗತಿಗಳಾಗಿವೆ” ಎಂದು ಅವರು ವಿವರಿಸಿದ್ದಾರೆ.
Correct, it is social responsibility, not the legal department, it is responsible every individual of this society