ತರಬೇತಿ ಇಲ್ಲ, ಕೆಲಸಕ್ಕೆ ವರದಿಯೂ ಆಗಿಲ್ಲ; ಆದರೂ 35 ಲಕ್ಷ ರೂ. ವೇತನ ಪಡೆದ ಪೊಲೀಸ್

Date:

Advertisements

ಕಡ್ಡಾಯ ತರಬೇತಿಯಲ್ಲಿ ಭಾಗಿಯಾಗಿ ತರಬೇತಿ ಪಡೆಯದೆ, ಕರ್ತವ್ಯಕ್ಕೆ ವರದಿಯನ್ನೂ ಮಾಡಿಕೊಳ್ಳದೆ ಪೊಲೀಸ್ ಪೇದೆಯೊಬ್ಬರು 12 ವರ್ಷಗಳಲ್ಲಿ 35 ಲಕ್ಷ ರೂ. ವೇತನ ಪಡೆದಿರುವ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ.

ತರಬೇತಿ, ಕರ್ತವ್ಯಕ್ಕೆ ವರದಿಯನ್ನೇ ಮಾಡಿಕೊಳ್ಳದೆ ವೇತನ ಪಡೆದ ಪೇದೆಯನ್ನು ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಅಭಿಷೇಕ್ ಎಂದು ಹೇಳಲಾಗಿದೆ. ಅವರು 2011-12ರಲ್ಲಿ ಮಧ್ಯಪ್ರದೇಶ ಪೊಲೀಸ್‌ ಇಲಾಖೆಯಲ್ಲಿ ಕಾನ್‌ಸ್ಟೇಬಲ್‌ ಆಗಿ ನೇಮಕಗೊಂಡಿದ್ದರು. ಅವರಿಗೆ, ಸಾಗರ್ ಜಿಲ್ಲೆಯ ಪೊಲೀಸ್ ತರಬೇತಿ ಶಾಲೆಯಲ್ಲಿ ಕಡ್ಡಾಯ ತರಬೇತಿಗೆ ಕಳಿಸಲಾಗಿತ್ತು. ಆದರೆ, ಅವರು ತರಬೇತಿಗೆ ಹೋಗಿಯೇ ಇಲ್ಲ ಎಂದು ವರದಿಯಾಗಿದೆ.

ಸಾಗರ್‌ನಲ್ಲಿ ತರಬೇತಿ ಪಡೆಯಲು ಹೋಗದೆ, ಅಭಿಷೇಕ್ ತಮ್ಮ ಊರಿಗೆ ವಾಪಸ್‌ ಹೋಗಿದ್ದರು. ಅಂದಿನಿಂದ ಈವರೆಗೆ ಅವರು ತರಬೇತಿಯನ್ನೇ ಪಡೆದಿಲ್ಲ. ಮಾತ್ರವಲ್ಲ, ಕರ್ತವ್ಯಕ್ಕೆ ವರದಿಯನ್ನೂ ಮಾಡಿಕೊಂಡಿಲ್ಲ. ರಜೆಯ ಅರ್ಜಿಯನ್ನೂ ಸಲ್ಲಿಸಿರಲಿಲ್ಲ. ತಮ್ಮ ದೀರ್ಘಕಾಲದ ಗೈರು ಹಾಜರಿಯ ಬಗ್ಗೆ ಇಲಾಖೆಗೂ ತಿಳಿಸಿಲ್ಲ ಎಂದು ಹೇಳಲಾಗಿದೆ.

Advertisements

ಈ ನಡುವೆ, ಅಭಿಷೇಕ್ ಅನಾರೋಗ್ಯದ ಕಾರಣ ನೀಡಿ ತನ್ನ ಸೇವಾ ಕಡತವನ್ನು ಸ್ಪೀಡ್ ಪೋಸ್ಟ್ ಮೂಲಕ ಭೋಪಾಲ್‌ ಕಚೇರಿಗೆ ಕಳುಹಿಸಿದರು. ಆಶ್ಚರ್ಯಕರವೆಂದರೆ, ಭೋಪಾಲ್‌ನಲ್ಲಿ ಸಂಬಂಧಪಟ್ಟ ಇಲಾಖೆಯು ಅವರ ಸೇವಾ ಕಡತವನ್ನು ಪರಿಶೀಲನೆ ಮಾಡದೆಯೇ ಸ್ವೀಕರಿಸಿತು. ಇದರ ಪರಿಣಾಮವಾಗಿ, ಅಭಿಷೇಕ್ ಹೀಗಾಗಿ, ಅವರು ಬರೋಬ್ಬರಿ 12 ವರ್ಷಗಳಿಂದ ಮಾಸಿತ ವೇತನವನ್ನು ನಿಯಮಿತವಾಗಿ ಪಡದಿದ್ದಾರೆ. ಈ ಅವಧಿಯಲ್ಲಿ ಅವರು ಒಟ್ಟು 35 ಲಕ್ಷ ರೂ. ಸಂಬಳವಾಗಿ ಪಡೆದ್ದಾರೆ.

ಈ ಲೇಖನ ಓದಿದ್ದೀರಾ?; ರಾಷ್ಟ್ರರಾಜಕಾರಣಕ್ಕೆ ಸಿದ್ದು ಕರೆತರಲು ಪೂರ್ವ ತಯಾರಿ, ಒಬಿಸಿ ನಾಯಕತ್ವಕ್ಕೆ ಎಐಸಿಸಿಯ ಹೊಸ ಚಹರೆ?

10 ವರ್ಷಗಳ ಅವಧಿಯ ಬಳಿಕ ವೇತನ ಶ್ರೇಣಿಯ ಬಗ್ಗೆ ಕಡ್ಡಾಯ ಪರಿಶೀಲನೆ ಮಾಡಬೇಕೆಂಬ ನಿಯಮದಿಂದಾಗಿ, 2023ರಲ್ಲಿ ಅಧಿಕಾರಿಗಳು ಅಭಿಷೇಕ್ ಅವರು ಸೇನಾ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ, ಅವರು ಕರ್ತವ್ಯಕ್ಕೆ ವರದಿಯನ್ನೇ ಮಾಡಿಕೊಂಡಿಲ್ಲ. ಆದರೂ, ವೇತನ ಪಡೆದಿದ್ದಾರೆ ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

“ಘಟನೆ ಬೆಳಕಿಗೆ ಬಂದ ಬಳಿಕ, ಇಲಾಖೆಯ ಅಭಿಷೇಕ್ ಅವರನ್ನು ಕಚೇರಿಗೆ ಕರೆಸಿ, ವಿಚಾರಣೆ ನಡೆಸಿದೆ. ಅವರು ಒಂದು ದಿನವೂ ಪೊಲೀಸ್‌ ಇಲಾಖೆಯಲ್ಲಿ ಸೇವೆ ಸಲ್ಲಿಸಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ, ಅವರು 1 ಲಕ್ಷ ರೂ.ಗಳನ್ನು ಇಲಾಖೆಗೆ ಹಿಂದಿರುಗಿಸಿದ್ದಾರೆ. 12 ವರ್ಷಗಳಲ್ಲಿ ಪಡೆದಿರುವ ಒಟ್ಟು ವೇತನವನ್ನು ಕಂತುಗಳಲ್ಲಿ ವಾಪಸ್‌ ಕೊಡುವುದಾಗಿ ಒಪ್ಪಿಕೊಂಡಿದ್ದಾರೆ. ತನಿಖೆ ನಡೆಯುತ್ತಿದೆ” ಎಂದು ಭೋಪಾಲ್ ಎಸಿಪಿ ಅಂಕಿತಾ ಖಟೇರ್ಕರ್ ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X