ದೇಶದ ಜನಸಂಖ್ಯೆಯ ಸಮಗ್ರ ಎಣಿಕೆ ಮತ್ತು ನಿರ್ಣಾಯಕವಾದ ಸಾಮಾಜಿಕ, ಆರ್ಥಿಕ ವಿವರಗಳನ್ನು ಒಳಗೊಂಡ ಜನಗಣತಿ ಹಾಗೂ ಜಾತಿ ಗಣತಿ ಮಾರ್ಚ್ 1, 2027 ರಿಂದ ಪ್ರಾರಂಭವಾಗಲಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಆದಾಗ್ಯೂ, ಲಡಾಖ್, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ್ಗಳಲ್ಲಿ ಅಕ್ಟೋಬರ್ 2026 ರ ಆರಂಭದಲ್ಲಿ ಜಾತಿ ಹಾಗೂ ಜನಗಣತಿ ಪ್ರಾರಂಭವಾಗಲಿದೆ.
ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು. ದೇಶಾದ್ಯಂತ ಪುರುಷರು ಮತ್ತು ಮಹಿಳೆಯರಿಗೆ ಕೇಳಲಾಗುವ ಪ್ರಶ್ನೆಗಳಲ್ಲಿ ಜಾತಿ ಮತ್ತು ಉಪಜಾತಿಗಳ ಪ್ರಶ್ನೆಗಳ ಪಟ್ಟಿಯು ಒಳಗೊಂಡಿರುತ್ತದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ವೀರಣ್ಣ ಮಡಿವಾಳರ ಅವರನ್ನು ಅವಮಾನಿಸಿದ್ದೇ ಅನಾಗರಿಕತೆ! ಅಮಾನತನ್ನು ವಾಪಸು ಪಡೆಯಿರಿ
ಸರ್ಕಾರವು ಜಾತಿಯ ಕುರಿತಾದ ಪ್ರಶ್ನೆಗಳನ್ನು ಅಂದರೆ, ವಿವಿಧ ಜಾತಿಗಳು ಮತ್ತು ಉಪ-ಜಾತಿಗಳ ಎಣಿಕೆ ಮತ್ತು ಪ್ರತಿ ಜಾತಿಯಲ್ಲಿರುವ ಜನರ ಸಂಖ್ಯೆ – ಮುಂದಿನ ಜನಗಣತಿಯ ಭಾಗವಾಗುವುದನ್ನು ಕಳೆದ ಏಪ್ರಿಲ್ 30 ರಂದು ದೃಢಪಡಿಸಿತ್ತು.
ಕೆಲ ವರ್ಷಗಳ ಹಿಂದೆ ಬಿಹಾರದಲ್ಲಿ ವಿಧಾನಸಭಾ ಚುನಾವಣೆಗೆ ಆರಂಭವಾಗುವ ಮೊದಲು ಜಾತಿ ಗಣತಿ ನಡೆಸುವುದಾಗಿ ಘೋಷಿಸಲಾಗಿತ್ತು. ಜಾತಿ ಗಣತಿ ನಡೆಸಿದ ನಂತರ ಶೇ 63 ಕ್ಕಿಂತ ಹೆಚ್ಚು ಜನಸಂಖ್ಯೆಯು ಅತ್ಯಂತ ಹಿಂದುಳಿದ ಅಥವಾ ಹಿಂದುಳಿದ ವರ್ಗದವರು ಎಂದು ತಿಳಿದುಬಂದಿತ್ತು.
ಭಾರತದಲ್ಲಿ ಸಾಮಾನ್ಯವಾಗಿ ಪ್ರತಿ 10 ವರ್ಷಗಳಿಗೊಮ್ಮೆ ಜನಗಣತಿ ನಡೆಸಲಾಗುತ್ತದೆ. ಕೊನೆಯ ರಾಷ್ಟ್ರೀಯ ಜನಸಂಖ್ಯಾ ಎಣಿಕೆ 2011 ರಲ್ಲಿ ನಡೆಸಲಾಗಿತ್ತು. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ 2021 ರ ಜನಗಣತಿಯನ್ನು ಕೈಬಿಡಬೇಕಾಯಿತು. ಆದ್ದರಿಂದ 2027 ರ ಜನಗಣತಿಯು 16 ವರ್ಷಗಳ ನಂತರ ನಡೆಸಲಾಗುತ್ತಿದೆ.