50 ಪೈಸೆಗಾಗಿ 15,000 ರೂ. ದಂಡ ತೆತ್ತ ಅಂಚೆ ಇಲಾಖೆ

Date:

ಗ್ರಾಹಕನಿಗೆ 50 ಪೈಸೆ ಹಿಂದಿರುಗಿಸದ ಪ್ರಕರಣದಲ್ಲಿ ಅಂಚೆ ಇಲಾಖೆಗೆ 15,000 ರೂ. ದಂಡ ವಿಧಿಸಿ ಚೆನ್ನೈನ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ಚೆನ್ನೈನ ಮನಶಾ ಎಂಬವರು ದಾಖಲಿಸಿದ್ದ ಪ್ರಕರಣದ ವಿಚಾರಣೆ ನಡೆಸಿರುವ ಗ್ರಾಹಕರ ಆಯೋಗ, ಅಂಚೆ ಇಲಾಖೆಗೆ ದಂಡ ವಿಧಿಸಿದೆ. ದಂಡದ ಪೈಕಿ, ಗ್ರಾಹಕರಿಗೆ 10,000 ರೂ. ಪರಹಾರ ಮತ್ತು 5,000 ರೂ. ವ್ಯಾಜ್ಯ ಶುಲ್ಕ ಭರಿಸುವಂತೆ ನಿರ್ದೇಶಿಸಿದೆ.

ಮನಶಾ ಅವರು 2023ರ ಡಿಸೆಂಬರ್ 13ರಂದು ಚೆನ್ನೈನ ಪೊಜಿಚಲೂರ್ ಅಂಚೆ ಕಚೇರಿಯಲ್ಲಿ ರಿಜಿಸ್ಟರ್ ಅಂಚೆ ಪತ್ರ ಖರೀದಿಸಿದ್ದರು. ಅದರ ಬೆಲೆ 29.50 ರೂ. ಆಗಿದ್ದು, ಮನಶಾ ಅವರು 30 ರೂ. ಪಾವತಿಸಿದ್ದರು. ಉಳಿದ, 50 ಪೈಸೆಯನ್ನು ಹಿಂದಿರುಗಿಸುವಂತೆ ಅಂಜೆ ಅಧಿಕಾರಿಗೆ ಕೇಳಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ

ಆದರೆ, ಅಂಚೆ ಅಧಿಕಾರಿ 50 ಪೈಸೆಯನ್ನು ಹಿಂದಿರುಗಿಸಿಲ್ಲ. ಚಿಲ್ಲರೆ ಇಲ್ಲದಿದ್ದರೆ, ಯುಪಿಐ ಮೂಲಕ ಹಣ ಪಾವತಿಸುತ್ತೇನೆ ನಗದು ಹಣವನ್ನು ವಾಪಸ್‌ ಕೊಡಿ ಎಂದು ಕೇಳಿದರೂ, ಅಧಿಕಾರಿ ಒಪ್ಪಿಲ್ಲ.

ಅಧಿಕಾರಿಗಳ ನಡೆಯಿಂದ ಅಸಮಾಧಾನಗೊಂಡ ಮನಶಾ, ಅಂಚೆ ಇಲಾಖೆಯಲ್ಲಿ ನಡೆಯುತ್ತಿದೆ ಎಂದು ಆರೋಪಿಸಿ ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದರು.

ಅವರ ದೂರಿನ ವಿಚಾರಣೆ ನಡೆಸಿರುವ ಆಯೋಗ, ಮನಶಾ ಅವರಿಗೆ 50 ಪೈಸೆಯನ್ನು ಮರುಪಾವತಿಸಬೇಕು. ಗ್ರಾಹಕರಿಗೆ ಮಾನಸಿಕ ಒತ್ತಡ ನೀಡಿದ್ದಕ್ಕಾಗಿ 10,000 ರೂ. ಪರಿಹಾರ ನೀಡಬೇಕು. ಜೊತೆಗೆ, ವ್ಯಾಜ್ಯ ಶುಲ್ಕವಾಗಿ ₹5 ಸಾವಿರ ಪಾವತಿಸಬೇಕೆಂದು ಅಂಚೆ ಇಲಾಖೆಗೆ ಆದೇಶಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಕಾಡೆ ಮಲಗುತ್ತಾ ಅಂಬಾನಿಯ ಜಿಯೋ?

5 ಸಾವಿರ ಕೋಟಿ ಖರ್ಚು ಮಾಡಿ ಮಗನ ಮದುವೆ ಮಾಡಿದ್ದ ಮುಖೇಶ್...

ಬಿಷ್ಣೋಯ್ ಎನ್‌ಕೌಂಟರ್‌ಗೆ 1,11,11,111 ರೂ. ಬಹುಮಾನ: ಕರ್ಣಿ ಸೇನೆ

ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆಯ ರುವಾರಿ ಬಂಧಿತ ಗ್ಯಾಂಗ್‌ಸ್ಟರ್ ಲಾರೆನ್ಸ್‌...

ಜಾರ್ಖಂಡ್ ಚುನಾವಣೆ | ಬಿಜೆಪಿಗೆ ಸೀಟು ಹಂಚಿಕೆ ಬಿಕ್ಕಟ್ಟು; ಮತ್ತೆ ಗೆಲ್ಲುವುದೇ ‘ಇಂಡಿಯಾ’?

ಜಾರ್ಖಂಡ್‌ ವಿಧಾನಸಭೆಗೆ ನವೆಂಬರ್ 13 ಮತ್ತು 20 ರಂದು ಮತದಾನ ನಡೆಯಲಿದೆ....

ಬುಲ್ಡೋಜರ್ ಕ್ರಮ | ಯೋಗಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ‘ವಾರ್ನಿಂಗ್‌’

ಉತ್ತರ ಪ್ರದೇಶದ ಬಹರೈಚ್‌ನಲ್ಲಿ ನಡೆದ ಕೋಮು ಘರ್ಷಣೆಯ ಬಳಿಕ ಅಲ್ಪಸಂಖ್ಯಾತ ಸಮುದಾಯದ...