ಸಂದರ್ಶನದ ವೇಳೆ ಪತ್ರಕರ್ತ ಕರಣ್ ಥಾಪರ್ ಮತ್ತು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ನಡುವೆ ನಡೆದ ವಾಗ್ವಾದದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಕರಣ್ ಥಾಪರ್ ಅವರು ಪ್ರಶಾಂತ್ ಕಿಶೋರ್ ಬೆವರಿಳಿಸಿದ್ದಾರೆ ಎಂದು ನೆಟ್ಟಿಗರು ಹೇಳಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ, ಥಾಪರ್ ಅವರು ಪ್ರಶಾಂತ್ ಕಿಶೋರ್ ಅವರ ಈ ಹಿಂದಿನ ಎಕ್ಸ್ (ಟ್ವಿಟ್ಟರ್) ಪೋಸ್ಟ್ ಒಂದರ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆದರೆ ಪ್ರಶಾಂತ್ ಮಾತ್ರ ತಾನು ಆ ರೀತಿ ಹೇಳಿಕೆ ನೀಡೇ ಇಲ್ಲ ಎಂದು ವಾದಿಸುವ ಮೂಲಕ ಈ ಟ್ರೋಲಿಗರಿಗೆ ಬಲಿಯಾಗಿದ್ದಾರೆ.
During an interview with Karan Thapar, @PrashantKishor says, “Show me a video of me telling Congress will be routed in Himachal Pradesh, I will quit the job”.
Here is your tweet @PrashantKishor where you’d mentioned the same. 👋👋 pic.twitter.com/hPbzrFyaIS— Mohammed Zubair (@zoo_bear) May 22, 2024
ಹಿಮಾಚಲ ಪ್ರದೇಶ ಮತ್ತು ತೆಲಂಗಾಣದಲ್ಲಿ ಕ್ರಮವಾಗಿ ಮೇ 2022 ಮತ್ತು ಸೆಪ್ಟೆಂಬರ್ 2023ರಲ್ಲಿ ಕಾಂಗ್ರೆಸ್ ಸೋಲುತ್ತದೆ ಎಂದು ಕಿಶೋರ್ ಈ ಹಿಂದೆ ಭವಿಷ್ಯ ನುಡಿದಿದ್ದರು. ಆದರೆ, ಸಂದರ್ಶನದ ವೇಳೆ ಕಿಶೋರ್ ಅವರು ಕಾಂಗ್ರೆಸ್ ಬಗ್ಗೆ ಈ ಹಿಂದೆ ಹೇಳಿದ್ದನ್ನೆಲ್ಲಾ ನಿರಾಕರಿಸಿದ್ದಾರೆ.
ಥಾಪರ್ ಅವರು ಪ್ರಶಾಂತ್‌ರ ಈ ಹಿಂದಿನ ಹೇಳಿಕೆಯನ್ನು ಉಲ್ಲೇಖ ಮಾಡಿದಾಗ ಆಕ್ರೋಶಗೊಂಡ ಪ್ರಶಾಂತ್ ಏರುದನಿಯಲ್ಲಿ ಥಾಪರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಮತ್ತು ತಬ್ಬಿಬ್ಬಾಗಿದ್ದಾರೆ.
ಇದನ್ನು ಓದಿದ್ದೀರಾ? ಪ್ರಶಾಂತ್ ಕಿಶೋರ್ ಚುನಾವಣಾ ಸಮೀಕ್ಷೆ ಸುಳ್ಳಾಗಿಲ್ಲವೇ, ಇದು ಬಿಜೆಪಿಯ ಮೈಂಡ್ ಗೇಮ್ ಅಲ್ಲವೇ?
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 300 ಸ್ಥಾನಗಳನ್ನು ಗೆಲ್ಲಬಹುದು ಮತ್ತು ಕಾಂಗ್ರೆಸ್ 100 ಸ್ಥಾನಗಳನ್ನು ಕೂಡಾ ಗೆಲ್ಲುವುದು ಕಷ್ಟ ಎಂದು ಸಂದರ್ಶನದಲ್ಲಿ ಕಿಶೋರ್ ಭವಿಷ್ಯ ನುಡಿದಿದ್ದರು. ಆದರೆ ಪ್ರಶಾಂತ್ ಕಿಶೋರ್ ಅವರ ಈ ಹಿಂದಿನ ಭವಿಷ್ಯಗಳು ಸುಳ್ಳಾಗಿರುವುದನ್ನು ಥಾಪರ್ ಪ್ರಶ್ನಿಸಿದ್ದಾರೆ.
I’ve been repeatedly asked to comment on the outcome of #UdaipurChintanShivir
In my view, it failed to achieve anything meaningful other than prolonging the status-quo and giving some time to the #Congress leadership, at least till the impending electoral rout in Gujarat and HP!
— Prashant Kishor (@PrashantKishor) May 20, 2022
ಈ ಸಂದರ್ಶನದಲ್ಲಿ ನಡೆದ ಈ ವಾಗ್ವಾದವನ್ನು ಎಡಿಟ್ ಮಾಡದೆಯೇ ‘ದಿ ವೈರ್’ ಮಾಧ್ಯಮ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಪಬ್ಲಿಷ್ ಮಾಡಿದ್ದು, ಪ್ರಶಾಂತ್ ಕಿಶೋರ್ ಅವರ ಟ್ವೀಟ್‌ನ ಸ್ಕ್ರೀನ್‌ಶಾಟ್‌ಗಳನ್ನು ಹಾಕಿದೆ. ತಾನು ನೀಡಿದ ಹೇಳಿಕೆಯನ್ನು ನೀಡೇ ಇಲ್ಲ ಎಂದು ಹೇಳುವ ಮೂಲಕ ಈ ಪ್ರಶಾಂತ್ ಕಿಶೋರ್ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.
Save Water.
Don’t give interviews to Karan Thapar. pic.twitter.com/hHYsKXVPNz
— Team Saath Official🤝 (@TeamSaath) May 23, 2024
ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡಾ ಈಗ ಪ್ರಶಾಂತ್ ಕಿಶೋರ್‌ರ ಟ್ವೀಟ್‌ನ ಸ್ಕ್ರೀನ್‌ಶಾಟ್ ಮತ್ತು ಈ ಸಂದರ್ಶನದ ವಿಡಿಯೋ ವೈರಲ್ ಆಗುತ್ತಿದೆ. ಜೊತೆಗೆ ಈ ಹಿಂದೆ ಥಾಪರ್ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ನೀರು ಕುಡಿಯುತ್ತಿರುವ ಮತ್ತು ಈಗ ಪ್ರಶಾಂತ್ ಕಿಶೋರ್ ಥಾಪರ್ ಸಂದರ್ಶನದಲ್ಲಿ ನೀರು ಕುಡಿಯುವ ಚಿತ್ರವನ್ನು ಹಂಚಿಕೊಂಡಿರುವ ನೆಟ್ಟಿಗರು, “ನೀರು ಉಳಿಸಿ. ಕರಣ್ ಥಾಪರ್‌ಗೆ ಸಂದರ್ಶನ ನೀಡಬೇಡಿ” ಎಂದು ಗೇಲಿ ಮಾಡಿದ್ದಾರೆ.
ಇನ್ನು “ನಾನು ಈ ರೀತಿ ಹೇಳಿದ ವಿಡಿಯೋವನ್ನು ನೀವು ತೋರಿಸಿದರೆ ನಾನು ನನ್ನ ಉದ್ಯೋಗವನ್ನೇ ತ್ಯಜಿಸುತ್ತೇನೆ, ನೀವು ತಪ್ಪಾಗಿದ್ದರೆ ನೀವು ಕ್ಷಮೆ ಕೇಳಬೇಕು” ಎಂದೂ ಸಂದರ್ಶನದಲ್ಲಿ ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಈಗ ಪ್ರಶಾಂತ್ ಕಿಶೋರ್ ಟ್ವೀಟ್ ಅನ್ನು ಹಂಚಿಕೊಂಡಿರುವ ನೆಟ್ಟಿಗರು, “ಪ್ರಶಾಂತ್ ಕಿಶೋರ್ ಅವರೇ ಯಾವಾಗ ಉದ್ಯೋಗ ತ್ಯಜಿಸುತ್ತೀರಿ” ಎಂದು ಪ್ರಶ್ನಿಸಿದ್ದಾರೆ.
ಮಾರಾಟ ಆಗಿರುವನು