ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಕೊನೆಗೂ ರಾಜಕೀಯ ಪಕ್ಷವನ್ನು ಆರಂಭಿಸಿದ್ದಾರೆ. ಬುಧವಾರ ತಮ್ಮ ರಾಜಕೀಯ ಸಂಘಟನೆಯಾದ ಜನ್ ಸುರಾಜ್ ಪಕ್ಷವನ್ನು ರಾಜಕೀಯ ಪಕ್ಷವಾಗಿ ಪ್ರಾರಂಭಿಸುವಾಗಿ ಘೋಷಿಸಿದ್ದಾರೆ. ಈ ಮೂಲಕ ಮುಂದಿನ ಬಿಹಾರ ಚುನಾವಣೆಯ ಮೇಲೆ ಚಿತ್ತ ನೆಟ್ಟಿದ್ದಾರೆ.
ಮಾಜಿ ಕೇಂದ್ರ ಸಚಿವ ದೇವೇಂದ್ರ ಪ್ರಸಾದ್ ಯಾದವ್, ರಾಜಕಾರಣಿ ಪವನ್ ವರ್ಮಾ ಮತ್ತು ಮಾಜಿ ಸಂಸದ ಮೊನಜೀರ್ ಹಾಸನ್ ಸೇರಿದಂತೆ ಅನೇಕ ಹೆಸರಾಂತ ವ್ಯಕ್ತಿಗಳ ಉಪಸ್ಥಿತಿಯಲ್ಲಿ ಬಿಹಾರ ರಾಜಧಾನಿ ಪಾಟ್ನಾದ ಪಶುವೈದ್ಯಕೀಯ ಕಾಲೇಜು ಮೈದಾನದಲ್ಲಿ ರಾಜಕೀಯ ಪಕ್ಷವನ್ನು ಪ್ರಾರಂಭಿಸಲಾಗಿದೆ.
ಚುನಾವಣಾ ಭವಿಷ್ಯವನ್ನು ಹೇಳುವ ಮೂಲಕವೇ ಸುದ್ದಿಯಾಗುತ್ತಿದ್ದ ಪ್ರಶಾಂತ್ ಕಿಶೋರ್ ಇತ್ತೀಚಿಗಷ್ಟೇ ಅಕ್ಟೋಬರ್ 2ರಂದು ಗಾಂಧಿ ಜಯಂತಿ ದಿನವೇ ನಮ್ಮ ಪಕ್ಷವನ್ನು ಆರಂಭಿಸುವುದಾಗಿ ಹೇಳಿದ್ದರು.
ಇದನ್ನು ಓದಿದ್ದೀರಾ? ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 4,000ಕ್ಕಿಂತ ಹೆಚ್ಚು ಸ್ಥಾನ: ಟ್ರೋಲ್ ಆದ ಬಿಹಾರ ಸಿಎಂ ನಿತೀಶ್ ಕುಮಾರ್
ಇಂದು ಅಧಿಕೃತವಾಗಿ ಪಕ್ಷ ಆರಂಭಿಸುವ ಘೋಷಣೆ ಮಾಡಿ ಮಾತನಾಡಿದ ಪ್ರಶಾಂತ್ ಕಿಶೋರ್, “ಜನ್ ಸುರಾಜ್ ಅಭಿಯಾನವು ಕಳೆದ 2-3 ವರ್ಷಗಳಿಂದ ನಡೆಯುತ್ತಿದೆ. ನಾವು ಯಾವಾಗ ಪಕ್ಷವನ್ನು ಸ್ಥಾಪಿಸುತ್ತೇವೆ ಎಂದು ಜನರು ಕೇಳುತ್ತಿದ್ದರು. ನಾವು ದೇವರಿಗೆ ಧನ್ಯವಾದ ತಿಳಿಸಬೇಕಾದ ಸಂದರ್ಧ ಈಗ ಬಂದಿದೆ. ಇಂದು ಚುನಾವಣಾ ಆಯೋಗವು ಅಧಿಕೃತವಾಗಿ ಜನ್ ಸುರಾಜ್ ಅನ್ನು ಜನ್ ಸುರಾಜ್ ಪಕ್ಷವಾಗಿ ಅನುಮೋದಿಸಿದೆ” ಎಂದು ಹೇಳಿದ್ದಾರೆ.
ಇನ್ನು ಹೊಸ ಪಕ್ಷ ಸ್ಥಾಪನೆ ಮೂಲಕ ಬಿಹಾರದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯ ಮೇಲೆ ಚಿತ್ತ ನೆಟ್ಟಿರುವ ಪ್ರಶಾಂತ್ ಕಿಶೋರ್, ಈಗಾಗಲೇ ಚುನಾವಣಾ ಭರವಸೆಗಳನ್ನು ನೀಡಲು ಆರಂಭಿಸಿದ್ದಾರೆ.
ಇದನ್ನು ಓದಿದ್ದೀರಾ? ಜನ್ ಸುರಾಜ್ ಪಕ್ಷ ಅ.2ರಂದು ಆರಂಭ: ಪ್ರಶಾಂತ್ ಕಿಶೋರ್
“ಪ್ರತ್ಯೇಕ ಸಿದ್ಧತೆ ಅಗತ್ಯವಿಲ್ಲ, ಕಳೆದ 2 ವರ್ಷಗಳಿಂದ ನಾವು ಸಿದ್ಧತೆ ನಡೆಸಿದ್ದೇವೆ. ಜನ್ ಸೂರಾಜ್ ಸರ್ಕಾರ ರಚನೆಯಾದರೆ ಮದ್ಯಪಾನ ನಿಷೇಧವನ್ನು ಒಂದು ಗಂಟೆಯೊಳಗೆ ತೆಗೆದುಹಾಕುತ್ತೇವೆ” ಎಂದು ಇತ್ತೀಚೆಗೆ ಹೇಳಿದ್ದಾರೆ.
ಒಂದು ತಿಂಗಳೊಳಗೆ ರಾಜಕೀಯ ಪಕ್ಷವಾಗಲಿರುವ ಜನ್ ಸೂರಾಜ್ ಮುಂದಿನ ವರ್ಷ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ 243 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ತಿಳಿಸಿದ್ದರು.
#WATCH | Patna, Bihar | Jan Suraaj founder Prashant Kishor officially launched his political party – Jan Suraaj Party.
— ANI (@ANI) October 2, 2024
Prashant Kishor says, "Jan Suraaj campaign is going on for 2-3 years. People are asking when we will be forming the party. We all must thank God, today the… pic.twitter.com/ozkNfvxfMJ
