18ನೇ ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಉದ್ದೇಶಿಸಿ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣ ಆರಂಭಿಸುತ್ತಿದ್ದಂತೆ ಪ್ರತಿಪಕ್ಷದ ಸದಸ್ಯರು ಮಣಿಪುರಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ಸದನದ ಬಾವಿಗೆ ನುಗ್ಗಿ ಪ್ರತಿಭಟನೆ ನಡೆಸಿದರು.
‘ಸರ್ವಾಧಿಕಾರವನ್ನು ಸಹಿಸುವುದಿಲ್ಲ’ ಎಂಬ ಘೋಷಣೆಗಳನ್ನು ಕೂಗುತ್ತಾ, ಮಣಿಪುರದ ಬಗ್ಗೆ ಚರ್ಚೆಗೆ ಒತ್ತಾಯಿಸಿ ಪ್ರತಿಭಟನೆ ಮುಂದುವರಿಸಿದ್ದಾರೆ. ಪ್ರಧಾನಿ ಮೋದಿ ಸಂಜೆ 4.15ಕ್ಕೆ ಭಾಷಣ ಪ್ರಾರಂಭಿಸಿದ್ದರು.
ಲೋಕಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ತಮ್ಮ ಮಾತಿನುದ್ದಕ್ಕೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
#WATCH | PM Narendra Modi says, “This is the third biggest defeat in the history of Congress. It would have been better if Congress had accepted its defeat and respected the mandate of the people but they are busy doing some ‘Sirsasana’ and Congress and its ecosystem are trying… pic.twitter.com/G6IsTyZUBV
— ANI (@ANI) July 2, 2024
“ವಿಶ್ವದ ಅತಿ ದೊಡ್ಡ ಚುನಾವಣಾ ಪ್ರಚಾರದಲ್ಲಿ ಜನ ನಮ್ಮನ್ನು ಆಯ್ಕೆ ಮಾಡಿದ್ದಾರೆ ಮತ್ತು ಕೆಲವರ ನೋವು ನನಗೆ ಅರ್ಥವಾಗುತ್ತದೆ. ನಿರಂತರವಾಗಿ ಸುಳ್ಳುಗಳನ್ನು ಹಬ್ಬಿಸಿದರೂ, ಅವರು ಸೋಲು ಅನುಭವಿಸಿದ್ದಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳ ವಿರುದ್ಧ ಮಂಗಳವಾರ ವಾಗ್ದಾಳಿ ನಡೆಸಿದರು.
“ನಿನ್ನೆ ಮತ್ತು ಇಂದು, ಹಲವಾರು ಸಂಸದರು ರಾಷ್ಟ್ರಪತಿಗಳ ಭಾಷಣದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದವರು ಸಂಸತ್ತಿನ ಎಲ್ಲಾ ನಿಯಮಗಳನ್ನು ಅನುಸರಿಸಿದರು ಮತ್ತು ಅವರ ನಡವಳಿಕೆಯು ಅನುಭವಿ ಸಂಸದರಂತೆಯೇ ಇತ್ತು. ಮೊದಲ ಬಾರಿಗೆ ಅವರು ಸದನದ ಘನತೆಯನ್ನು ಹೆಚ್ಚಿಸಿದ್ದಾರೆ ಮತ್ತು ಈ ಚರ್ಚೆಯನ್ನು ಹೆಚ್ಚು ಮೌಲ್ಯಯುತವಾಗಿಸಿದ್ದಾರೆ” ಎಂದರು.
“ತುಷ್ಟೀಕರಣ ರಾಜಕೀಯ ಮತ್ತು ಆಡಳಿತ ಮಾದರಿಯನ್ನು ದೇಶವು ದೀರ್ಘಕಾಲದವರೆಗೆ ನೋಡಿದೆ. ಆದರೆ ಇನ್ನು ಮುಂದೆ ತುಷ್ಟೀಕರಣ ನಡೆಯಲ್ಲ. ನಮ್ಮ ನೀತಿಯು ಯಾರನ್ನೂ ಓಲೈಸುವುದಲ್ಲ. ಭ್ರಷ್ಟಾಚಾರದ ವಿರುದ್ಧದ ನಮ್ಮ ಹೋರಾಟದಲ್ಲಿ ನಾವು ಉತ್ತಮ ರೀತಿಯಲ್ಲಿ ಸಾರ್ವಜನಿಕ ಬೆಂಬಲವನ್ನು ಗಳಿಸಿದ್ದೇವೆ. ಕಾಂಗ್ರೆಸ್ ಸುಳ್ಳು ಭರವಸೆಗಳನ್ನು ನೀಡಿ ಮತ ಪಡೆದುಕೊಂಡಿದೆ. ಎಂದು ಮೋದಿ ಹೇಳಿದರು.
#WATCH | PM Narendra Modi replies to Motion of Thanks on the President’s Address, in the Lok Sabha pic.twitter.com/gkFvdlA34T
— ANI (@ANI) July 2, 2024
ಪರೋಕ್ಷವಾಗಿ ವಿಪಕ್ಷ ನಾಯಕ ರಾಹುಲ್ ಗಾಂಧಿಯವರನ್ನು ಉಲ್ಲೇಖಿಸಿದ ಮೋದಿ, “1984ರ ಚುನಾವಣೆಯನ್ನು ನೆನಪಿಸಿಕೊಳ್ಳೋಣ. ಆ ಚುನಾವಣೆಗಳ ನಂತರ ಈ ದೇಶದಲ್ಲಿ 10 ಲೋಕಸಭೆ ಚುನಾವಣೆಗಳು ನಡೆದವು. ಆದರೆ ಒಮ್ಮೆಯೂ ಕಾಂಗ್ರೆಸ್ 250ರ ಗಡಿ ದಾಟಲು ಸಾಧ್ಯವಾಗಲಿಲ್ಲ. ಈ ಬಾರಿ ಕಾಂಗ್ರೆಸ್ 99 ಸ್ಥಾನಗಳನ್ನು ಗಳಿಸಿತು. ಇದು ಮಗುವಿನ ಕತೆಯನ್ನು ನೆನಪಿಗೆ ತರುತ್ತದೆ. ಮಗುವೊಂದು ತಾನು 99 ಅಂಕಗಳನ್ನು ಪಡೆದಿದ್ದೇನೆ ಎಂದು ಎಲ್ಲರಿಗೂ ಹೇಳಿಕೊಂಡು ಖುಷಿ ಪಡುತ್ತಿತ್ತು. ಅದನ್ನು ಕೇಳಿ ಎಲ್ಲರೂ ಆ ಮಗುವಿನ ಬೆನ್ನು ತಟ್ಟುತ್ತಿದ್ದರು. ಆಗ ಬಂದ ಟೀಚರ್ ಆ ಮಗುವಿನ ಬಳಿ ನೀನೇಕೆ ಸ್ವೀಟ್ ಹಂಚುತ್ತಿದ್ದೀಯ? ಎಂದು ಕೇಳಿದರು. ವಾಸ್ತವದ ವಿಷಯ ಏನೆಂದರೆ ಆ ಮಗು 100ಕ್ಕೆ 99 ಅಂಕ ಪಡೆದಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಆ ಮಗುವಿಗೆ 543ರಲ್ಲಿ 99 ಅಂಕ ಪಡೆದಿತ್ತು. ಆ ಮಗು ವಿಫಲತೆಯನ್ನು ವಿಶ್ವ ದಾಖಲೆ ನಿರ್ಮಿಸಿತ್ತು ಎಂಬುದನ್ನು ಆ ಮಗುವಿಗೆ ಅರ್ಥ ಮಾಡಿಸುವವರು ಯಾರು? ಎಂದು ವ್ಯಂಗ್ಯವಾಡಿದರು.
