ಹೊದಿಕೆಗಾಗಿ ಕೊಟ್ಟಿದ್ದ ಬೆಡ್ ಶೀಟ್ ಮತ್ತು ಧರಿಸಲು ಕೊಟ್ಟಿದ್ದ ಲುಂಗಿಯನ್ನು ಬಳಿಸಿಕೊಂಡು 20 ಅಡಿಯ ಜೈಲು ಗೋಡೆ ಹಾರಿ ಐದು ಮಂದಿ ವಿಚಾರಣಾಧೀನ ಕೈದಿಗಳು ಪರಾರಿಯಾಗಿರುವ ಘಟನೆ ಅಸ್ಸಾಂನ ಮೊರಿಗಾಂವ್ ಜಿಲ್ಲಾ ಕಾರಾಗೃಹದಲ್ಲಿ ನಡೆಡಿದೆ.
ಶನಿವಾರ ಮುಂಜಾನೆ 1 ಗಂಟೆಯ ಆಸುಪಾಸಿನಲ್ಲಿ ಕೈದಿಗಳು ಜೈಲು ಗೋಡೆ ಹಾರಿ ಪರಾರಿಯಾಗಿದ್ದಾರೆ. ಘಟನೆ ಬಗ್ಗೆ ಮೆಜಿಸ್ಟ್ರೀಯಲ್ ತನಿಖೆ ನಡೆಸುವಂತೆ ಜಿಲ್ಲಾಡಳಿತ ಆದೇಶಿಸಿದೆ. ಅಲ್ಲದೆ, ಜೈಲು ಅಧಿಕಾರಿ ಪ್ರಕಾಶ್ ಸೈಕಿಯಾ ಅವರನ್ನು ಅಮಾನತು ಮಾಡಲಾಗಿದೆ. ಜೈಲು ನಿರ್ವಹಣೆಗಾಗಿ ಗುವಾಹತಿಯ ಸಹಾಯಕ ಜೈಲರ್ಗಳಾಗಿ ಸೇವೆ ಸಲ್ಲಿಸುತ್ತಿದ್ದ ಇಬ್ಬರನ್ನು ನೇಮಿಸಲಾಗಿದೆ.
ಪರಾರಿಯಾಗಿರುವ ಐದು ಮಂದಿ ಆರೋಪಿಗಳು ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದರು. ಅವರಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿತ್ತು. ಅವರನ್ನು ಇತ್ತೀಚೆಗೆ ಮೊರಿಗಾಂವ್ ಜಿಲ್ಲಾ ಕಾರಾಗೃಹಕ್ಕೆ ಕಳಿಸಲಾಗಿತ್ತು. ಇದೀಗ, ಆ ಆರೋಪಿಗಳು ಪಾರಾರಿಯಾಗಿದ್ದಾರೆ.
ಆರೋಪಿಗಳು 20 ಅಡಿ ಎತ್ತರದ ಗೋಡೆಯನ್ನು ಏರಲು ಬೆಡ್ ಶೀಟ್ ಹಾಗೂ ಲುಂಗಿಗಳನ್ನು ಬಳಸಿದ್ದಾರೆ ಎಂದು ವರದಿಯಾಗಿದೆ. ಘಟನೆ ಬಗ್ಗೆ ಪ್ರತ್ಯೇಕ ಇಲಾಖಾ ತನಿಖೆ ನಡೆಸುವುದಾಗಿ ಕಾರಾಗೃಹ ವಿಭಾಗದ ಐಜಿ ಪುಬಲಿ ಗೋಹಿಯಾನ್ ತಿಳಿಸಿದ್ದಾರೆ.
ಪರಾರಿಯಾದ ಆರೋಪಿಗಳ ಪತ್ತೆಗೆ ಪೊಲೀಸ್ ತಂಡ ರಚಿಸಲಾಗಿದೆ. ಜೈಲಿನಲ್ಲಿರುವ ಕೈದಿಗಳನ್ನು ವಿಚಾರಣೆ ಒಳಪಡಿಸಿ, ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಮೋರಿಗಾಂವ್ ಎಸ್‌ಪಿ ಹೇಮಂತ ಕುಮಾರ್ ದಾಸ್ ಹೇಳಿದ್ದಾರೆ.