ಬಂಗಾಳದಲ್ಲಿ ಮಾಂಸದ ಪರ, ಹೊರರಾಜ್ಯಗಳಲ್ಲಿ ವಿರೋಧ: ಬಿಜೆಪಿ ದ್ವಂದ್ವ ನಿಲುವಿಗೆ ಧೀರೇಂದ್ರ ಶಾಸ್ತ್ರಿ ಹೇಳಿಕೆ ಸಾಕ್ಷಿ

Date:

ಬಾಗೇಶ್ವರ ಧಾಮದ ಮುಖ್ಯಸ್ಥ ಧೀರೇಂದ್ರ ಕೃಷ್ಣ ಶಾಸ್ತ್ರಿ (ಬಾಗೇಶ್ವರ ಬಾಬಾ) ಅವರು ಪಶ್ಚಿಮ ಬಂಗಾಳದಲ್ಲಿ ದುರ್ಗಾಪೂಜೆ ಹಾಗೂ ನವರಾತ್ರಿ ಆಚರಣೆ ವೇಳೆ ಪೂಜಾ ಪಂಡಾಲ್‌ಗಳ ಬಳಿ ಮಾಂಸಾಹಾರ ಮಾರಾಟ ಹಾಗೂ ಸೇವನೆ ಮಾಡಬಾರದು ಎಂದು ಕರೆ ನೀಡಿದ್ದರು. ಈ ಹೇಳಿಕೆ ರಾಜ್ಯದಲ್ಲಿ ತೀವ್ರ ರಾಜಕೀಯ ಮತ್ತು ಸಾಂಸ್ಕೃತಿಕ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ, ಪಶ್ಚಿಮ ಬಂಗಾಳದ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಈ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ.

- Advertisement -

ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ಶಮಿಕ್ ಭಟ್ಟಾಚಾರ್ಯ ಅವರು ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿ, “ಬಂಗಾಳಿಗಳು ತಮ್ಮ ಸಾಂಪ್ರದಾಯಿಕ ಆಹಾರ ಸಂಸ್ಕೃತಿಯನ್ನೇ ಮುಂದುವರಿಸಲಿದ್ದಾರೆ. ಯಾರೂ ಕೂಡ ಬಂಗಾಳಿಗಳ ತಟ್ಟೆಯಲ್ಲಿ ಏನಿರಬೇಕು ಎಂದು ನಿರ್ದೇಶಿಸಲು ಸಾಧ್ಯವಿಲ್ಲ. ನವರಾತ್ರಿಯ ಅಷ್ಟಮಿ ದಿನ ಪೂರಿ ಮತ್ತು ನವಮಿ ದಿನ ಮಟನ್ ಸೇವಿಸುವುದು ಬಂಗಾಳಿಗಳ ಪರಂಪರೆ. ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವೇ ಹೊರತು, ಪಕ್ಷಕ್ಕೂ ಅದಕ್ಕೂ ಸಂಬಂಧವಿಲ್ಲ” ಎಂದು ಹೇಳಿಕೊಂಡಿದ್ದಾರೆ. ಸದ್ಯ ರಾಜಕೀಯ ವಿರೋಧಾಭಾಸ ಮತ್ತು ದ್ವಂದ್ವ ನಿಲುವುಗಳ ಕುರಿತು ತೀವ್ರ ಚರ್ಚೆ ನಡೆಯುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ಇದನ್ನೂ ಓದಿ: ಮತಕ್ಕಾಗಿ ಮೀನೂಟ ಜಪ: ಅಧಿಕಾರಕ್ಕೇರಿ ಬಡ ಮಕ್ಕಳ ಕೈಯಿಂದ ಮೊಟ್ಟೆ ಕಿತ್ತುಕೊಂಡ ಬಿಜೆಪಿ!

ಉತ್ತರ ಭಾರತ ಹಾಗೂ ಇತರೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ (ಉದಾಹರಣೆಗೆ ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್) ಶ್ರಾವಣ ಮಾಸ, ನವರಾತ್ರಿ ಅಥವಾ ಸಾಲು-ಸಾಲು ಹಬ್ಬಗಳ ಸಮಯದಲ್ಲಿ ಮಾಂಸದಂಗಡಿಗಳನ್ನು ಮುಚ್ಚಿಸುವುದು, ಬಹಿರಂಗ ಮಾಂಸ ಮಾರಾಟವನ್ನು ವಿರೋಧಿಸುವುದು ಮತ್ತು ಮಾಂಸಾಹಾರದ ವಿರುದ್ಧ ಧ್ವನಿ ಎತ್ತುವುದು ಬಿಜೆಪಿಯ ಪ್ರಮುಖ ಸಿದ್ಧಾಂತ ಹಾಗೂ ಕಾರ್ಯಸೂಚಿಯಾಗಿ ಕಂಡುಬರುತ್ತದೆ. ಆದರೆ, ಅದೇ ಪಕ್ಷವು ಪಶ್ಚಿಮ ಬಂಗಾಳ, ಈಶಾನ್ಯ ರಾಜ್ಯಗಳು (ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್) ಹಾಗೂ ಕೇರಳದಂತಹ ರಾಜ್ಯಗಳಿಗೆ ಬಂದಾಗ ತನ್ನ ನಿಲುವನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ.

ಉತ್ತರ ಭಾರತದಲ್ಲಿ ‘ಸಖಾಹಾರಿ/ಸಾತ್ವಿಕ’ ಸಂಸ್ಕೃತಿಯನ್ನು ಧರ್ಮದ ಸಂಕೇತವಾಗಿ ಬಿಂಬಿಸುವ ಬಿಜೆಪಿ, ಬಂಗಾಳ ಮತ್ತು ಈಶಾನ್ಯ ರಾಜ್ಯಗಳಲ್ಲಿ ಸ್ಥಳೀಯ ಸಂಸ್ಕೃತಿ ಹಾಗೂ ಮತಬ್ಯಾಂಕ್ ಕಳೆದುಕೊಳ್ಳುವ ಭಯದಿಂದ ಮಾಂಸಾಹಾರದ ಪರವಾಗಿ ಮಾತನಾಡುತ್ತದೆ. ಬಂಗಾಳದಲ್ಲಿ ಶೇ. 90ಕ್ಕೂ ಹೆಚ್ಚು ಜನಸಂಖ್ಯೆ ಮೀನು-ಮಾಂಸ ಸೇವಿಸುವ ಹಿನ್ನೆಲೆಯಲ್ಲಿ, ಅಲ್ಲಿ ಮಾಂಸಾಹಾರ ವಿರೋಧಿಸಿದರೆ ರಾಜಕೀಯವಾಗಿ ಹಿನ್ನಡೆಯಾಗಲಿದೆ ಎಂಬುದು ಇದಕ್ಕೆ ಪ್ರಮುಖ ಕಾರಣ.

ಇತರ ರಾಜ್ಯಗಳಲ್ಲಿ ಶಾಖಾಹಾರವನ್ನು ‘ಆದರ್ಶ ಧಾರ್ಮಿಕ ನಡೆ’ ಎಂದು ವ್ಯಾಖ್ಯಾನಿಸುವ ರಾಜಕಾರಣಿಗಳು, ಬಂಗಾಳಕ್ಕೆ ಬಂದ ತಕ್ಷಣ “ಮಾಂಸಾಹಾರವು ಬಂಗಾಳಿ ಶಕ್ತ ಆರಾಧನೆ ಮತ್ತು ದುರ್ಗಾಪೂಜೆಯ ಭಾಗ” ಎಂದು ಸಮರ್ಥಿಸಿಕೊಳ್ಳುತ್ತಾರೆ. ಟಿಎಂಸಿ (ತೃಣಮೂಲ ಕಾಂಗ್ರೆಸ್) ಸೇರಿದಂತೆ ವಿಪಕ್ಷಗಳು ಬಿಜೆಪಿಯ ಈ ನಡೆಗಳನ್ನು “ದ್ವಂದ್ವ ನೀತಿ” ಎಂದು ಟೀಕಿಸಿವೆ. “ಉತ್ತರ ಭಾರತದಲ್ಲಿ ಮಾಂಸಾಹಾರವನ್ನು ‘ಅಪವಿತ್ರ’ ಎಂದು ಕರೆದು, ಬಂಗಾಳದಲ್ಲಿ ಚುನಾವಣಾ ಲಾಭಕ್ಕಾಗಿ ಮಾಂಸಾಹಾರದ ಬೆಂಬಲಕ್ಕೆ ನಿಲ್ಲುವುದು ಬಿಜೆಪಿಯ ಬೂಟಾಟಿಕೆ” ಎಂದು ಆರೋಪಿಸಿವೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಹಲ್ಲೆಗೊಳಗಾಗಿ ರೈಲ್ವೆ ಹಳಿ ಮೇಲೆ ಬಿದ್ದಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು

ಶಿವಮೊಗ್ಗ ರೈಲ್ವೆ ಹಳಿ ಬಳಿ ಗಂಭೀರ ಗಾಯಗಳೊಂದಿಗೆ ಪತ್ತೆಯಾಗಿದ್ದ 26 ವರ್ಷದ...

ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ; ತರಾತುರಿಯಲ್ಲಿ ಅಂತ್ಯಕ್ರಿಯೆ, ಕಾರಣ ನಿಗೂಢ!

ಸೊರಬ ತಾಲೂಕಿನ ಮುಟಗುಪ್ಪೆ ಗ್ರಾಮದಲ್ಲಿ 22 ವರ್ಷದ ಯುವತಿಯೊಬ್ಬರು ಮನೆಯಲ್ಲಿ ನೇಣು...

ಶಿವಮೊಗ್ಗ | ಗಾಂಜಾ ಮಾರಾಟ ಆರೋಪ: ಐವರು ಅರೆಸ್ಟ್‌, 1.23 ಕೆಜಿ ಮಾದಕ ವಸ್ತು ಜಪ್ತಿ

ಶಿವಮೊಗ್ಗ ನಗರದ ಅನುಪಿನಕಟ್ಟೆ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ತುಂಗಾನಗರ...